ಬೆಂಗಳೂರು: ‘ಶಕ್ತಿ ಯೋಜನೆ’ ಯಡಿ ಸಾರಿಗೆ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ 2023-243 ಸಾಲಿನ ಆಯವ್ಯಯದಲ್ಲಿ ಶಕ್ತಿ ಯೋಜನೆಗಾಗಿ ಲೆಕ್ಕ ಶೀರ್ಷಿಕೆ 3055-00-190-0-16-106- ಸಹಾಯಧನದಡಿ ರೂ.198800.00 ಲಕ್ಷಗಳು, 3055-00-190-0-16-422-ಪರಿಶಿಷ್ಟ ಜಾತಿ ಉಪ ಯೋಜನೆಯಡಿ (SCSP) ರೂ.56000.00 ಲಕ್ಷಗಳು ಹಾಗೂ 3055-00-190-0-16-423-ಗಿರಿಜನ ಉಪ ಯೋಜನೆರಡಿ (TSP) ರೂ.25200.00 ಲಕ್ಷಗಳು ಸೇರಿದಂತೆ, ಒಟ್ಟಾರೆ ರೂ.280000.00 ಲಕ್ಷಗಳನ್ನು ಹಂಚಿಕೆ ಮಾಡಲಾಗಿದೆ.
Breaking News: ನೂತನ ಚುನಾವಣಾ ಆಯುಕ್ತರಾಗಿ ಸುಖ್ಬೀರ್ ಸಂಧು, ಜ್ಞಾನೇಶ್ ಕುಮಾರ್ ನೇಮಕ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ಸ್: ಪಿಯು ಮಂಡಳಿ ನೀಡಿದೆ ಈ ಸ್ಪಷ್ಟನೆ!
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರದ ಆದೇಶದಲ್ಲಿ, ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕ.ರಾ.ರ.ಸಾ.ನಿಗಮ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬೆಂ.ಮ.ಸಾ.ಸಂಸ್ಥೆ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂಸ್ಥೆ) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (ಕ.ಕ.ರ.ಸಾ.ನಿಗಮ) ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ನಗರ, ಸಾಮಾನ್ಯ ಹಾಗೂ ವೇಗದೂತ (Express) ಬಸ್ಸುಗಳಲ್ಲಿ ಕರ್ನಾಟಕ ರಾಜ್ಯದ (Domicile of Karnataka) ಎಲ್ಲಾ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ) ಮತ್ತು ಲಿಂಗತ್ಯ ಅಲ್ಪಸಂಖ್ಯಾತರು ಉಚಿತವಾಗಿ ಪಯಾಣಿಸಲು ದಿನಾಂಕ:11.06.2023ರಿಂದ ಶಕ್ತಿ ಯೋಜನೆಯನ್ನು ಜಾರಿಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ ಹಾಗೂ ನಾಲ್ಕು ಸಾರಿಗೆ ಸಂಸ್ಥೆಗಳ ವ್ಯಾಪ್ತಿಯ ಜಿಲ್ಲೆಗಳಿಗೆ ಹೊಂದಿಕೊಂಡಿರುವ ನೆರೆ ರಾಜ್ಯದ ಗ್ರಾಮ/ ಸ್ಥಳಗಳಿಗೆ ಕಾರ್ಯಾಚರಿಸುತ್ತಿರುವ ಕೆಲವು ಆಯ್ದ ಅಂತರರಾಜ್ಯ ಸಾರಿಗೆಗಳಲ್ಲಿ ರಾಜ್ಯದ ಗಡಿಯವರೆಗೆ (ಕರ್ನಾಟಕ ರಾಜ್ಯದ ಒಳಗಡೆ ಮಾತ್ರ) ಮತ್ತು ಎನ್‌ಕ್ಷೇವ್ ಸಾರಿಗೆಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ‘ಶಕ್ತಿ ಯೋಜನಯಡಿ ಅವಕಾಶ ಕಲ್ಪಿಸಿರುವ ಸಾರಿಗೆ ನಿಗಮಗಳ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಿ ಆದೇಶಿಸಲಾಗಿದೆ ಅಂತ ತಿಳಿಸಿದೆ.