ನವದೆಹಲಿ : ಯೆಸ್ ಬ್ಯಾಂಕ್ ಮಾಜಿ ಎಂಡಿ ಮತ್ತು ಸಿಇಒ ರಾಣಾ ಕಪೂರ್ ಅವರಿಗೆ ದೆಹಲಿ ಹೈಕೋರ್ಟ್ ಇಂದು ನಿಯಮಿತ ಜಾಮೀನು ನೀಡಿದೆ. 466.51 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2020ರಲ್ಲಿ ಕಪೂರ್’ರನ್ನ ಇಡಿ ಬಂಧಿಸಿತ್ತು. 

ಯೆಸ್ ಬ್ಯಾಂಕ್ ಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಮಾಜಿ ಎಂಡಿ ಮತ್ತು ಸಿಇಒ ರಾಣಾ ಕಪೂರ್ ಅವರು ತಮ್ಮ ಸ್ಥಾನವನ್ನ ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅವರ ಕುಟುಂಬಕ್ಕೆ ಲಾಭ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ, ಸಿಬಿಐ ಮಾರ್ಚ್ 2020ರಲ್ಲಿ ವಂಚನೆ ಮತ್ತು ಕ್ರಿಮಿನಲ್ ಪಿತೂರಿಯ ಪ್ರಕರಣವನ್ನ ದಾಖಲಿಸಿತ್ತು. ಈ ಆಧಾರದ ಮೇಲೆ, ಇಡಿ ಅವರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣವನ್ನು ಸಹ ದಾಖಲಿಸಿದೆ.

 

‘ಸ್ವಾತಂತ್ರ್ಯದ ನಂತ್ರವೂ ನಮ್ಗೆ ತಪ್ಪು ಇತಿಹಾಸ ಕಲಿಸಲಾಯ್ತು, ಅದು ಗುಲಾಮಗಿರಿಯ ಅವಧಿಯಲ್ಲಿ ಹೊರಹೊಮ್ಮಿತು’ ; ಪ್ರಧಾನಿ ಮೋದಿ

BIGG NEWS : ಕೋವಿಡ್​ ನಿರ್ಬಂಧ ತೆರವಿನ ಬಳಿಕ ‘ವಯಸ್ಕರಲ್ಲಿ ಅಸ್ತಮಾ ಹೆಚ್ಚಳ’ : ಅಧ್ಯಯನದಲ್ಲಿ ಮಾಹಿತಿ ಬಹಿರಂಗ | Asthma increase

ಮಂಗಳೂರು ಬಾಂಬ್ ಸ್ಪೋಟ ; ಆಟೋ ಚಾಲಕನಿಗೆ ಸರ್ಕಾರದಿಂದ ಸೂಕ್ತ ಪರಿಹಾರ : ಸಚಿವ ಸುನೀಲ್ ಕುಮಾರ್

Share.
Exit mobile version