ಮೈಸೂರು: ಸಿಎಂ ತವರಲ್ಲಿ ಶ್ರೀರಾಮನ ಹೆಸರಿನ ಲಕ್ಷ ದೀಪೋತ್ಸವಕ್ಕೆ ಅನುಮತಿ ಕೊನೇ ಕ್ಷಣದಲ್ಲಿ ರದ್ದು ಮಾಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಅನುಮತಿ ರದ್ದು ಮಾಡಿರುವುದಕ್ಕೆ ಸಂಬಂಧಪಟ್ಟಂಥೆ ಮೈಸೂರು ಉಪಪೊಲೀಸ್ ಆಯುಕ್ತ ಮುತ್ತುರಾಜು ಅವರು ಎಸ್.ಕೆ ದಿನೇಶ್ ಎನ್ನುವವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಪೊಲೀಸ್ ಅಧಿಕಾರಿ ಉಲ್ಲೇಖ ಮಾಡಿರುವಂತೆ ದಿನಾಂಕ: 22-01-2024 ರಂದು ಸಂಜೆ 06.00 ಗಂಟೆಗೆ ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ಪ್ರಯುಕ್ತ ನೀವು ಕನ್ಯಕಾಪರಮೇಶ್ವರಿ ದೇವಸ್ಥಾನದ ಮುಂಭಾಗ ಪೂಜಾ ಕಾರ್ಯಕ್ರಮ ಹಾಗೂ ಭಜನ ಹಾಗೂ ಮುಖ್ಯ ಅಂಚೆ ಕಛೇರಿಯಿಂದ ದೊಡ್ಡಗಡಿಯಾರದವರೆಗೂ ಶ್ರೀರಾಮ ಜ್ಯೋತಿ (ದೀಪವನ್ನು) ಹಚ್ಚಲು ಈ ಕಛೇರಿಯಿಂದ ಈಗಾಗಲೇ ನಿಮಗೆ ಅನುಮತಿ ನೀಡಿರುವುದು ಸರಿಯಷ್ಟೆ. ನೀವು ಮೇಲ್ಕಂಡ ಕಾರ್ಯಕ್ರಮ ನಡೆಸುವ ಸ್ಥಳವು ಹೆಚ್ಚು ಜನಸಂದಣಿ ಸ್ಥಳವಾಗಿದ್ದು ಹಾಗೂ ಹೆಚ್ಚು ವಾಹನ ಸಂಚಾರ ಇರುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆ ಇದ್ದು, ಗುಪ್ತ ಮಾಹಿತಿಯ ಹಿನ್ನಲೆಯಲ್ಲಿ ಪೊಲೀಸ್ ಇಲಾಖಾ ವತಿಯಿಂದ ಈಗಾಗಲೇ ನೀಡಿರುವ ಅನುಮತಿಯಲ್ಲಿ ವಿಧಿಸಿರುವ ಷರತ್ತಿನ ಕ್ರಮ ಸಂಖ್ಯೆ 04 ರೀತ್ಯಾ ಅನುಮತಿಯನ್ನು ರದ್ದುಪಡಿಸಲಾಗಿದೆ. ನಿಮ್ಮ ದೇವಸ್ಥಾನದ ಪ್ರಾಂಗಣದಲ್ಲಿ ದೀಪ ಹಚ್ಚಿ ಪೂಜಾ ಕಾರ್ಯಕ್ರಮಗಳನ್ನು ನಡೆಸಬಹುದಾಗಿದೆ ಅಂತ ತಿಳಿಸಿದ್ದಾರೆ.