ನವದೆಹಲಿ : ಕೇಂದ್ರ ಸಚಿವ ನಿತಿನ್ ಗಡ್ಕರಿ ತಮ್ಮ ಆನೇಕ ಕೆಲಸಗಳಿಂದಾಗಿ ಜನರ ಮನಗೆದ್ದಿದ್ದಾರೆ. ಅವ್ರ ಫ್ಯಾನ್ ಫಾಲೋಯಿಂಗ್ ಈಗಾಗಲೇ ಸಾಕಷ್ಟಿದ್ದರೂ ಈ ಬಾರಿ ಅವ್ರು ತೆಗೆದುಕೊಂಡಿರುವ ನಿರ್ಧಾರ ಇತರ ನಾಯಕರಿಗೂ ಮಾದರಿಯಾಗಿದೆ. ಹೌದು, ಗಡ್ಕರ್‌ ಯಾವುದೇ ಸದ್ದುಗದ್ದಲ ಇಲ್ಲದೇ, ಆಡಂಬರ ಮಾಡದೇ ಸೋಹ್ನಾ ಹೆದ್ದಾರಿಯನ್ನ ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಾರೆ.

ಗರಿಷ್ಠ ನಾಲ್ಕು ಚಕ್ರದ ವಾಹನಗಳು ಈ ಹೆದ್ದಾರಿಯಲ್ಲಿ ಹಾದು ಹೋಗುತ್ತವೆ. ಹಾಗಾಗಿ ಕಾರು ಚಾಲಕರು ಅವರ ನಿರ್ಧಾರವನ್ನ ಶ್ಲಾಘಿಸುತ್ತಿದ್ದಾರೆ. ಸಾಮಾನ್ಯವಾಗಿ ಯಾವುದೇ ರಾಜ್ಯ ಹೆದ್ದಾರಿ ಅಥವಾ ರಾಷ್ಟ್ರೀಯ ಹೆದ್ದಾರಿಯನ್ನ ಅದರ ಔಪಚಾರಿಕ ಉದ್ಘಾಟನೆಯ ನಂತ್ರ ಮಾತ್ರ ಸಾರ್ವಜನಿಕರಿಗೆ ತೆರೆಯಲಾಗುತ್ತದೆ. ಆದ್ರೆ, ಜುಲೈ ಆರಂಭದಲ್ಲಿ ನಿತಿನ್ ಗಡ್ಕರಿ ಅವ್ರು ಸೊಹ್ನಾ ಹೆದ್ದಾರಿಯನ್ನ ಉದ್ಘಾಟನೆ ಮಾಡದೇ ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದರು. ಅವರ ಈ ನಡೆಯನ್ನ ಇಲ್ಲಿ ಹಾದು ಹೋಗುವ ವಾಹನ ಚಾಲಕರು ಶ್ಲಾಘಿಸುತ್ತಿದ್ದಾರೆ.

ಪ್ರಯಾಣದ ಅವಧಿ ಈಗ 20 ನಿಮಿಷಗಳಿಗೆ ಇಳಿಕೆ.!
ನಿತಿನ್ ಗಡ್ಕರಿ ಅವ್ರು ಲೇಸ್ ಕತ್ತರಿಸಿ ತೆಂಗಿನಕಾಯಿ ಒಡೆಯುವ ಮೊದಲೇ ಸೊಹ್ನಾ ಹೆದ್ದಾರಿಯಲ್ಲಿ ವಾಹನಗಳನ್ನ ಓಡಿಸಲು ಅನುವು ಮಾಡಿಕೊಟ್ಟಿದ್ದಾರೆ. ವಾಸ್ತವವಾಗಿ, 22 ಕಿಮೀ ಉದ್ದದ 6 ಲೇನ್ ಹೆದ್ದಾರಿಯಿಂದ 20 ನಿಮಿಷಗಳ ಪ್ರಯಾಣವು ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತಿದೆ. ಮೊದಲು ಟ್ರಾಫಿಕ್‌ನಿಂದಾಗಿ ಈ ಪ್ರಯಾಣಕ್ಕೆ ಒಂದರಿಂದ ಒಂದೂವರೆ ಗಂಟೆ ಹಿಡಿಯುತ್ತಿತ್ತು.

ಅಂದ್ಹಾಗೆ, ಕಳೆದ ದಿನಗಳಲ್ಲಿ ಸೊಹ್ನಾ ಹೆದ್ದಾರಿಯನ್ನ ಜುಲೈ 11ರಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಈ ಕಾರ್ಯಕ್ರಮವನ್ನ ಮುಂದೂಡಲಾಯಿತು. ಇದರ ನಂತರ, ಗಡ್ಕರಿ ಉದ್ಘಾಟನೆಯ ದಿನಾಂಕಕ್ಕೆ ಕಾಯದೇ ರಸ್ತೆಯನ್ನ ತೆರೆಯಲು NHAIಗೆ ಸೂಚಿಸಿದರು. ಇನ್ನು “ಸಾರ್ವಜನಿಕರ ಅನುಕೂಲಕ್ಕಾಗಿ ಹೆದ್ದಾರಿಯನ್ನ ಸಿದ್ಧಪಡಿಸಲಾಗಿದೆ. ಹೀಗಿರುವಾಗ ಅಧಿಕೃತ ಉದ್ಘಾಟನೆಗಾಗಿ ಕಾದು ಕುಳಿತ ಸಾರ್ವಜನಿಕರ ಸೌಲಭ್ಯದಿಂದ ವಂಚಿತರಾಗಿರುವುದು ಸರಿಯಲ್ಲ” ಎಂದಿದ್ದಾರೆ ಎನ್ನಲಾಗ್ತಿದೆ.

Share.
Exit mobile version