ನವದೆಹಲಿ: ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯ ಹೂಡಿಕೆ ನಿಯಮಗಳಿಗೆ ತಿದ್ದುಪಡಿ ತಂದಿದ್ದು, 2022 ರ ಅಕ್ಟೋಬರ್ 1 ರಿಂದ ಅನ್ವಯವಾಗಲಿದೆ. ಆದಾಯ ತೆರಿಗೆ ಪಾವತಿ ಮಾಡುವವರು ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆ ‘ಅಟಲ್ ಪಿಂಚಣಿ ಯೋಜನೆ’ಯ) ಅಡಿ ಹೆಸರು ನೋಂದಾಯಿಸಿಕೊಳ್ಳಲು ಅಕ್ಟೋಬರ್ 1ರಿಂದ ಅವಕಾಶ ಇಲ್ಲ.

BIGG NEWS : ಕೊರೊನಾ ಸೋಂಕು ಹೆಚ್ಚಳ : ಗಣೇಶ ಹಬ್ಬಕ್ಕೆ ಕಠಿಣ ನಿಯಮ ಜಾರಿಗೆ ರಾಜ್ಯ ಸರ್ಕಾರ ಚಿಂತನೆ

ಬದಲಾದ ಅಟಲ್ ಪಿಂಚಣಿ ಯೋಜನಾ ನಿಯಮಗಳಲ್ಲಿ, ಆದಾಯ ತೆರಿಗೆ ಪಾವತಿಸುವವರು 2022 ರ ಅಕ್ಟೋಬರ್ 1 ರಿಂದ ಅಟಲ್ ಪಿಂಚಣಿ ಯೋಜನೆಯ ಖಾತೆಯನ್ನು ತೆರೆಯಲು ಅರ್ಹರಾಗಿರುವುದಿಲ್ಲ. ಆದಾಯ ತೆರಿಗೆ ಪಾವತಿದಾರರಾಗಿರುವ ಹೂಡಿಕೆದಾರರು 2022 ರ ಅಕ್ಟೋಬರ್ 1 ರಂದು ಅಥವಾ ನಂತರ ಎಪಿವೈ ಯೋಜನೆಗೆ ಸೇರಿದರೆ, ಅವರ ಎಪಿವೈ ಖಾತೆಯನ್ನು ಮುಚ್ಚಬೇಕಾಗುತ್ತದೆ. ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಹಣಕಾಸು ಸೇವೆಗಳ ಇಲಾಖೆ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ.

Rain In Karnataka : ರಾಜ್ಯಾದ್ಯಂತ ಇನ್ನೂ ಎರಡು ದಿನ ಭಾರೀ ಮಳೆ : 8 ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ

ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶವು ಈ ಯೋಜನೆಗೆ ಇದೆ. ಈ ಯೋಜನೆಯ ಅಡಿ ನೋಂದಾಯಿತ ಆದವರು 60 ವರ್ಷ ವಯಸ್ಸಾದ ನಂತರದಲ್ಲಿ ತಿಂಗಳಿಗೆ ಕನಿಷ್ಠ ₹ 1 ಸಾವಿರದಿಂದ ಗರಿಷ್ಠ ₹ 5 ಸಾವಿರದವರೆಗೆ ಪಿಂಚಣಿ ಪಡೆಯುತ್ತಾರೆ.

BIGG BREAKING NEWS : `ಕಾಡು ಕುದುರೆ ಓಡಿ ಬಂದಿತ್ತ’ ಖ್ಯಾತಿಯ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ|Singer Shivamogga Subbanna No More

Share.
Exit mobile version