Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಸ್ ಮೇಲೆ ಉಗ್ರರ ದಾಳಿ,9 ಪ್ರಯಾಣಿಕರು ಸಾವು

11/07/2025 10:32 AM

SHOCKING : ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಾಟ : ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ |WATCH VIDEO

11/07/2025 10:30 AM

BREAKING : ಮೂವರು ಶಂಕಿತ ಉಗ್ರರ ಬಂಧನ ಕೇಸ್ : ‘NIA’ ತನಿಖೆಯಲ್ಲಿ ಮತ್ತಷ್ಟು ಸ್ಪೋಟಕ ವಿಚಾರ ಬಹಿರಂಗ!

11/07/2025 10:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIGG NEWS: ಕರ್ನಾಟಕದಲ್ಲಿ ಕಳೆದ ಆರು ತಿಂಗಳಲ್ಲಿ 27 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ
Uncategorized

BIGG NEWS: ಕರ್ನಾಟಕದಲ್ಲಿ ಕಳೆದ ಆರು ತಿಂಗಳಲ್ಲಿ 27 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ

By kannadanewsnow0717/01/2024 6:00 AM
vidhana soudha
vidhana soudha

ಬೆಂಗಳೂರು: ರಾಜ್ಯದಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ ಪೊಲೀಸರು 27 ಕೋಟಿ ರೂ. ಮೌಲ್ಯದ 4,484 ಕೆ.ಜಿ ಗಾಂಜಾ ಹಾಗೂ 23 ಕೆಜಿ ರಾಸಾಯನಿಕ ಪದಾರ್ಥಗಳ ಮಾದಕ ವಸ್ತುಗಳನ್ನು ವಶÀಪಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಮಂಗಳವಾರ  ಪೊಲೀಸ್ ಪ್ರಧಾನ ಕಚೇರಿಯ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ವಶಪಡಿಸಿಕೊಂಡಿರುವ ಮಾದಕ ವಸ್ತುಗಳನ್ನು ಫೆಬ್ರವರಿ ಮಾಹೆಯ ಮೊದಲ ವಾರದಲ್ಲಿ ನಾಶಮಾಡಲು ಪೊಲೀಸ್ ಇಲಾಖೆಗೆ ಸರ್ಕಾರ ಪರವಾನಗಿ ನೀಡಿದೆ. ಯುವಕ ಯುವತಿಯರು ಮಾದಕ ವ್ಯಸನಿಗಳಾಗಿ ಅವರ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿರುವುದರಿಂದ ಕರ್ನಾಟಕ ರಾಜ್ಯವನ್ನು ಮಾದಕಮುಕ್ತ ರಾಜ್ಯವನ್ನಾಗಿಸಲು ಕಟ್ಟು ನಿಟ್ಟಿನ ಕ್ರಮಕೈಗೊಳ್ಳುವಂತೆ ಇಂದು ಹಮ್ಮಿಕೊಂಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಶದಲ್ಲಿ ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಕಾನೂನಿನ ಸುವ್ಯವಸ್ಥೆ ಚೆನ್ನಾಗಿರಬೇಕು. ಕಾನೂನಿನ ಸುವ್ಯವಸ್ಥೆ ಚೆನ್ನಾಗಿದ್ದರೆ ರಾಜ್ಯದ ಅಭಿವೃದ್ಧಿಯಾಗುತ್ತದೆ. ಕಾನೂನು ಸುವ್ಯವಸ್ಥೆಗೂ, ಬಂಡವಾಳ ಹೂಡಿಕೆಗೂ ಸಂಬಂಧವಿದೆ. ಕಾನೂನು ಸುವ್ಯವಸ್ಥೆ ಚೆನ್ನಾಗಿರುವ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಜಾಸ್ತಿಯಾಗುತ್ತದೆ. ಇದರಿಂದ ಆರ್ಥಿಕ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯಾಗುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಬೇಕೆಂದು ಸ್ಪಷ್ಟವಾಗಿ ಸೂಚಿಸಿದ್ದೇನೆ.

ಸಮಾಜದಲ್ಲಿ ದುರ್ಬಲ ವರ್ಗದವರಿಗೆ, ಮಹಿಳೆಯರಿಗೆ, ಪರಿಶಿಷ್ಠ ಜಾತಿ-ಪರಿಶಿಷ್ಠ ವರ್ಗದವರಿಗೆ, ಮನೆಗಳಲ್ಲಿ ಒಂಟಿಯಾಗಿ ವಾಸಿಸುವ ಜನರಿಗೆ ರಕ್ಷಣೆ ನೀಡಬೇಕು. ಅದಕ್ಕೋಸ್ಕರ ಹಿರಿಯ ಅಧಿಕಾರಿಗಳು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ, ಠಾಣೆಯಲ್ಲಿ ಏನು ನಡೆಯುತ್ತಿದೆ ಎಂದು ಪರಿಶೀಲಿಸಿ, ಮಾರ್ಗದರ್ಶನ ನೀಡಲು ಸೂಚಿಸಲಾಗಿತ್ತು, ಈ ದಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ಮಾಡಿದ್ದಾರೆ ಎಂದರು.

ಕಾನೂನು ಸುವ್ಯವಸ್ಥೆ ಕರ್ನಾಟಕದಲ್ಲಿ ಸಮಾಧಾನಕರವಾಗಿದೆ. ಇಲ್ಲಿಯವರೆಗೆ ಯಾವುದೇ ಕೋಮು ಗಲಭೆಗಳು ನಡೆದಿಲ್ಲ. ಕೋಮು ಗಲಭೆಗಳು ಸಣ್ಣ ಪುಟ್ಟದ್ದಾಗಿದ್ದರು, ದೊಡ್ಡ ಪ್ರಮಾಣದಲ್ಲಿ ಆಗಿಲ್ಲ. ಸೈಬರ್ ಕ್ರೈಮ್‍ಗಳು ಹೆಚ್ಚಾಗುತ್ತಿದ್ದು ಎಲ್ಲಾ ಪೊಲೀಸ್ ಠಾಣೆಗಳು ಹೆಚ್ಚಿನ ಗಮನ ನೀಡುವಂತೆ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಪರಾಧ ಪ್ರಮಾಣ ಕಡಿಮೆ ಮಾಡಬೇಕು ಎಂದು ಸೂಚಿಸಲಾಗಿದೆ.

ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಜನರಿಗೆ ಪೊಲೀಸರು ಹಾಗೂ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ, ವಿಶ್ವಾಸ ಬರುವಂತೆ ಕೆಲಸಮಾಡಬೇಕು. ಎಫ್‍ಐಆರ್ ಆದ ಮೇಲೆ ಗುಣಮಟ್ಟದ ತನಿಖೆ ಆಗಬೇಕು. ಗುಣಮಟ್ಟದ ತನಿಖೆ ಆದರೆ ಹೆಚ್ಚಿನ ಶಿಕ್ಷೆ ಆಗುತ್ತದೆ. ಶಿಕ್ಷೆ ಹೆಚ್ಚಾದರೆ ಅಪರಾಧದ ಪ್ರಕರಣಗಳು ಕಡಿಮೆಯಾಗುತ್ತದೆ. ಲೋಪ-ದೋಷಗಳನ್ನು ಸರಿಪಡಿಸುವ ಕೆಲಸ ಮಾಡಬೇಕು. ಯಾರೂ ಕೂಡ ಭಯದ ವಾತಾವರಣದಲ್ಲಿ ಇರಬಾರದು.

ಎಲ್ಲಾ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳೊಳಗೆ ಚಾರ್ಜ್ ಶೀಟ್ ಫೈಲ್ ಮಾಡಬೇಕು. ಪೊಲೀಸ್ ಬೀಟ್ ಹೆಚ್ಚು ಮಾಡಬೇಕು. ಹೊಯ್ಸಳ ಕೂಡ ಮೇಲ್ವಿಚಾರಣೆ ಮಾಡಬೇಕು. ಹಗಲು ರಾತ್ರಿ ನಡೆಯುವ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿ ತಡೆಗಟ್ಟಬೇಕು. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ರೌಡಿಸಂ ಮಾಡುವವರನ್ನು ಗುರುತಿಸಿ ಅವರ ಮೇಲೆ ನಿಗಾ ಇಟ್ಟು ಕ್ರಿಮಿನಲ್ ಚಟುವಟಿಕೆ ನಡೆಯದ ರೀತಿ ಎಚ್ಚರವಹಿಸಬೇಕು ಎಂದರು.

ಈ ವರ್ಷ ಸುವರ್ಣ ಮಹೋತ್ಸವ ಆಚರಿಸುತ್ತಿರುವುದರಿಂದ ಎಲ್ಲಾ ಪೊಲೀಸರಿಗೂ ಬೆಳ್ಳಿ ಪದಕ ನೀಡಲಾಗುವುದು. ವೈದ್ಯಕೀಯ ತಪಾಸಣಾ ಭತ್ಯೆಯನ್ನು 1 ಸಾವಿರ ರೂ.ಗಳಿಂದ 1,500 ರೂಗಳಿಗೆ ಹೆಚ್ಚಿಸಲಾಗಿದೆ. ಸುವರ್ಣ ಭವನನ್ನು ನಿರ್ಮಿಸಲಾಗುವುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಗೃಹ ಸಚಿವರಾದ ಜಿ.ಪರಮೇಶ್ವರ್, ಗೃಹ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೆÇಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಸೀರ್ ಅಹಮದ್ ಅವರು ಉಪಸ್ಥಿತರಿದ್ದರು.

000 seized BIGG NEWS: Karnataka has earned Rs 27 crore in the last six months. Drugs worth Rs 1 BIGG NEWS: ಕರ್ನಾಟಕದಲ್ಲಿ ಕಳೆದ ಆರು ತಿಂಗಳಲ್ಲಿ 27 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ
Share. Facebook Twitter LinkedIn WhatsApp Email

Related Posts

ಹಸಿರುಮಕ್ಕಿ ಸೇತುವೆ ಬೇಗ ಆಗಬಾರದೆಂದು ಬಿವೈ ರಾಘವೇಂದ್ರ, ಹಾಲಪ್ಪ ತಡೆ: ಶಾಸಕ ಗೋಪಾಲಕೃಷ್ಣ ಬೇಳೂರು ಕಿಡಿ

04/07/2025 3:41 PM1 Min Read

‘ಕ್ಯಾಪ್ಟನ್ ಕೂಲ್’ ಐಕಾನಿಕ್ ಹೆಸರಿನ ‘ಟ್ರೇಡ್ ಮಾರ್ಕ್’ಗಾಗಿ ‘ಎಂ.ಎಸ್ ಧೋನಿ’ ಅರ್ಜಿ

30/06/2025 5:47 PM1 Min Read

ಶೀಘ್ರದಲ್ಲೇ ನೇರ ವಿಮಾನ ಹಾರಾಟ ಪುನರಾರಂಭಿಸಲು ಭಾರತ-ಚೀನಾ ಒಪ್ಪಿಗೆ

13/06/2025 1:10 PM1 Min Read
Recent News

BREAKING: ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಬಸ್ ಮೇಲೆ ಉಗ್ರರ ದಾಳಿ,9 ಪ್ರಯಾಣಿಕರು ಸಾವು

11/07/2025 10:32 AM

SHOCKING : ಮಾವಿನ ಹಣ್ಣೆಂದು ಬೈಕ್ ಮೇಲೆ ಮಹಿಳೆಯ ಶವ ಸಾಗಾಟ : ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ |WATCH VIDEO

11/07/2025 10:30 AM

BREAKING : ಮೂವರು ಶಂಕಿತ ಉಗ್ರರ ಬಂಧನ ಕೇಸ್ : ‘NIA’ ತನಿಖೆಯಲ್ಲಿ ಮತ್ತಷ್ಟು ಸ್ಪೋಟಕ ವಿಚಾರ ಬಹಿರಂಗ!

11/07/2025 10:25 AM

ALERT : ‘ಚಿಟ್ ಫಂಡ್’ ನಲ್ಲಿ ಹಣ ಹೂಡಿಕೆ ಮಾಡೋಕು ಮುನ್ನ ಎಚ್ಚರ : 500ಕ್ಕೂ ಹೆಚ್ಚು ಜನರಿಗೆ 100 ಕೋಟಿಗೂ ಅಧಿಕ ವಂಚನೆ

11/07/2025 10:13 AM
State News
KARNATAKA

BREAKING : ಮೂವರು ಶಂಕಿತ ಉಗ್ರರ ಬಂಧನ ಕೇಸ್ : ‘NIA’ ತನಿಖೆಯಲ್ಲಿ ಮತ್ತಷ್ಟು ಸ್ಪೋಟಕ ವಿಚಾರ ಬಹಿರಂಗ!

By kannadanewsnow0511/07/2025 10:25 AM KARNATAKA 1 Min Read

ಬೆಂಗಳೂರು : ದಕ್ಷಿಣ ಭಾರತದ ಬಹುತೇಕ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರ ನಾಸಿರ್ ಗೆ…

ALERT : ‘ಚಿಟ್ ಫಂಡ್’ ನಲ್ಲಿ ಹಣ ಹೂಡಿಕೆ ಮಾಡೋಕು ಮುನ್ನ ಎಚ್ಚರ : 500ಕ್ಕೂ ಹೆಚ್ಚು ಜನರಿಗೆ 100 ಕೋಟಿಗೂ ಅಧಿಕ ವಂಚನೆ

11/07/2025 10:13 AM

SHOCKING : ರಾಜ್ಯದಲ್ಲಿ ನಿಲ್ಲದ ‘ಮೈಕ್ರೋ ಫೈನಾನ್ಸ್’ ಕಿರುಕುಳ : ರೈಲಿಗೆ ತಲೆಕೊಟ್ಟು ತಾಯಿ- ಮಗಳು ಆತ್ಮಹತ್ಯೆ.!

11/07/2025 10:05 AM

BREAKING : ಭಯೋತ್ಪಾದಕ ಟಿ.ನಾಸಿರ್ ಗೆ ನೆರವು ನೀಡಿದ ಪ್ರಕರಣ : ASI ಚಾನ್ ಪಾಷಾ ವಿರುದ್ದ ತನಿಖೆಗೆ ಕಮಿಷನರ್ ಆದೇಶ

11/07/2025 10:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.