ಮುಂಬೈ : ಮಹಾರಾಷ್ಟ್ರ ಲಾರಿಗಳಿಗೆ ಕರವೇ ಕಾರ್ಯಕರ್ತರು ಕಲ್ಲು ಎಸೆದಕ್ಕೆ ಕೆರಳಿದ ಮಹಾರಾಷ್ಟ್ರ ಮಾಜಿ ಸಿಎಂ ಶರದ್ಪವಾರ್, “ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಸರ್ಕಾರ ಈ ಪ್ರಕರಣವನ್ನ ಬಗೆಹರಿಸ್ಬೇಕು. ಇಲ್ಲವಾದ್ರೆ, ನಾನೇ ಬೆಳಗಾವಿಗೆ ಹೋಗುತ್ತೇನೆ” ಎಂದಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಶರದ್ ಪವಾರ್ , ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವ್ರೇ ಈ ಗಡಿ ವಿವಾದವನ್ನ ಶುರು ಮಾಡಿದ್ದಾರೆ. ಶಾಂತಿ ಕದಡುವ ಪ್ರಯತ್ನ ಮಾಡಿದ್ರೆ, ನಾವು ಕೆರಳಬೇಕಾಗುತ್ತೆ. ಮುಂದಾಗುವ ಅನಾಹುತಗಳಿಗೆ ಸಿಎಂ ಬೊಮ್ಮಾಯಿಯವರೇ ಜವಾಬ್ದಾರರು. ಇನ್ನು ಸಿಎಂ ಬೊಮ್ಮಾಯಿಯವ್ರೇ ಮುಂದಿನ 48 ಗಂಟೆಗಳಲ್ಲಿ ಈ ಪ್ರಕರಣವನ್ನ ಅಂತ್ಯಗೊಳಿಸ್ಬೇಕು. ಇಲ್ಲವಾದ್ರೆ, ನಾನೇ ಬೆಳಗಾವಿಗೆ ಹೋಗುತ್ತೇನೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಈ ನಡುವೆ ಮಹಾರಾಷ್ಟ್ರ ನೊಂದಣಿಯ 5 ಲಾರಿಗಳ ಮೇಲೆ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಕ್ಕೆ ಪ್ರತಿಯಾಗಿ ಶಿವನೇನೆ ಕಾರ್ಯಕರ್ತರು ಪುಣೆಯ ಡಿಪೋದಲ್ಲಿದ್ದ 8 KSRTC ಬಸ್ ಗಳ ಗಾಜುಗಳನ್ನು ಪುಡಿ ಮಾಡಿದ್ದಾರೆ. ಅಲ್ಲದೇ ಬಸ್ ಗಳ ಮೇಲೆ ಮಸಿ ಬಳಿದು ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟ ಮೆರೆದಿದ್ದಾರೆ.

ಬೆಳಗಾವಿಯ ಹಿರೇಬಾಗೇವಾಡಿ ಬಳಿಯ ಹೆದ್ದಾರಿಯಲ್ಲಿ ಕರವೇ ಕಾರ್ಯಕರ್ತರು ಮಹಾರಾಷ್ಟ್ರ ವಿರುದ್ಧ ಘೋಷಣೆ ಕೂಗಿ, ಮಹಾರಾಷ್ಟ್ರದಿಂದ ಬರುತ್ತಿರುವ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕೆಲವೊಂದು ಲಾರಿಗಳ ಮೇಲೆ ಕಪ್ಪು ಮಸಿ ಬಳಿದು ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

ಕರ್ನಾಟಕದ ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಭೇಟಿ ನೀಡುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರೊಚ್ಚಿಗೆದಿದ್ದು, ಬೆಳಗಾವಿ ನಮ್ಮದು. ಎಂದು ಘೋಷಣೆ ಕೂಗುತ್ತ ಮಹಾರಾಷ್ಟ್ರದ 5 ಲಾರಿಗಳ ಮೇಲೆ ಕಲ್ಲು ತೂರಾಟ ಮಾಡಿದ್ದರು.

 

BREAKING NEWS : ‘ಕರವೇ’ ಪ್ರತಿಭಟನೆ ವಿರುದ್ಧ ತಿರುಗಿಬಿದ್ದ ಶಿವಸೇನೆ : 8 ‘KSRTC’ ಬಸ್ ಗಳ ಗಾಜು ಒಡೆದ ಪುಂಡರು

BIGG NEWS : ಡಿ.11ರಂದು ‘ಪ್ರಧಾನಿ ಮೋದಿ’ಯಿಂದ ಮೂರು ‘ರಾಷ್ಟ್ರೀಯ ಆಯುಷ್ ಸಂಸ್ಥೆ’ ದೇಶಕ್ಕೆ ಸಮರ್ಪಣೆ |National Ayush institutes

BIG NEWS: ಬಿಜೆಪಿಗೆ ಸೇರಲಿರುವ ರೌಡಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಕಾಂಗ್ರೆಸ್‌

Share.
Exit mobile version