ಬೆಂಗಳೂರು: ಆಸ್ತಿ ವಿಚಾರಕ್ಕಾಗಿ ಮಾಡಿದ್ದ ನೇಹಾ ಕೊಲೆ ಆರೋಪಿ ಫಯಾಜ್ ತನ್ನ ತಂದೆ ಮೇಲೆ ಹಲ್ಲೆ ಮಾಡಿದ್ದ ಎನ್ನುವ ಅಂಶ ಹೊರ ಬಂದಿದೆ.
ಕಳೆದ ಮೂರು ತಿಂಗಳ ಹಿಂದೆ ಆರೋಪಿ ಫಯಾಜ್ ತನ್ನ ತಂದೆ ಬಾಬಾ ಸಾಹೇಬ್ ಸುಭಾನಿ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ.ಘಟನೆ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಆಗ ಪೊಲೀಸರು ಆತನನ್ನು ಕರೆಸಿ ಬುದ್ದಿ ಹೇಳಿ, ಮುಚ್ಚಳಿಕೆಯನ್ನು ಬರೆಸಿಕೊಂಡು ಕಳುಹಿಸಿದ್ದರು ಎನ್ನಲಾಗಿದೆ.