ಬೆಂಗಳೂರು : ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ರೈತನಿಗೆ ಏನೂ ಮಾಡದೇ ಈಗ ರೈತರ ಹೆಸರಲ್ಲಿ ಬೀದಿ ನಾಟಕ ಮಾಡಲು ನಾಚಿಕೆಯಾಗುವುದಿಲ್ಲವೇ? ಎಂದು ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಗ್ರಾಹಕರೇ ಗಮನಿಸಿ : ʼಎಲೆಕ್ಟ್ರಿಕ್ ವಾಹನ ಕೊಳ್ಳಲು ಭಯವೇ ? ʻ ಬ್ಯಾಟರಿʼ ಸ್ಫೋಟಗೊಳ್ಳದಂತೆ ಈ ವಿಧಾನ ಅನುಸರಿಸಿ | Electric Vehicles Safe

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮೋದಿ ಸರ್ಕಾರ ಜಾರಿಗೊಳಿಸಿದ ಕಿಸಾನ್ ಸಮ್ಮಾನ್ ಯೋಜನೆಯಿಂದ ರಾಜ್ಯದಲ್ಲಿ ಪ್ರತಿ ವರ್ಷ 50 ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆದು ನೆಮ್ಮದಿಯಿಂದ ಕೃಷಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ರೈತನಿಗೆ ಏನೂ ಮಾಡದೇ ಈಗ ರೈತರ ಹೆಸರಲ್ಲಿ ಬೀದಿ ನಾಟಕ ಮಾಡಲು ನಾಚಿಕೆಯಾಗುವುದಿಲ್ಲವೇ? ಎಂದು ಹೇಳಿದೆ.

ಭ್ರಷ್ಟಾಚಾರವನ್ನೇ ನರನಾಡಿಗಳಲ್ಲಿ ತುಂಬಿಸಿಕೊಂಡಿರುವ ನಕಲಿಗಾಂಧಿ ಕುಟುಂಬ ಮತ್ತು ಕಾಂಗ್ರೆಸ್‌ ಪಕ್ಷ ಇತರರ ಮೇಲೆ ಭ್ರಷ್ಟಾಚಾರದ ಆರೋಪ ಮಾಡುವುದು ಚೋದ್ಯ. ಬೇಲ್ ಮೇಲೆ ಜೀವನ ನಡೆಸುವವರು ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಹಾಸ್ಯಾಸ್ಪದ. ಆರೋಪಕ್ಕೆ ಸೂಕ್ತ ದಾಖಲೆ ಒದಗಿಸದೆ ಪಲಾಯನವಾದ ಅನುಸರಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದೆ.

ದೇಶದಲ್ಲಿ ಸೌಹಾರ್ದತೆ ಇಲ್ಲ ಎನ್ನುವ ರಾಹುಲ್ ಗಾಂಧಿ  ಅವರೇ, ಪಿಎಫ್ಐನಂತಹ ದೇಶದ್ರೋಹಿ ಸಂಘಟನೆಗಳನ್ನು ನಿಷೇಧಿಸಿದಾಗ ವಿರೋಧಿಸಿದ್ದೇಕೆ? ರಾಷ್ಟ್ರವಾದಿ ಮುಸಲ್ಮಾನರೇ ಉಗ್ರ ಸಂಘಟನೆಗಳ ನಿಷೇಧವನ್ನು ಸ್ವಾಗತಿಸಿರುವಾಗ ಅವರಂತಹ ಓಟ್ ಬ್ಯಾಂಕ್ ರಾಜಕಾರಣಿಗಳಿಗೆ ಮಾತ್ರ ಇದು ಬಿಸಿ ತುಪ್ಪವಾಗಿದೆ ಎಂದು ಹೇಳಿದೆ.

Share.
Exit mobile version