ನವದೆಹಲಿ : ಕೊರೊನಾ ವೇಳೆಯಲ್ಲಿ ಸಿಕ್ಕಪಟ್ಟೆ ಆದಾಯ ಗಳಿಸಿದ್ದ ಡೋಲೋ 360 ಕಂಪನಿಯ ಬಿಗ್‌ ಮಾಫಿಯಾ ಸಧ್ಯ ಬಟ ಬಯಲಾಗಿದೆ. ರೋಗಿಗಳಿಗೆ ಡೋಲೋ 650 ಮಾತ್ರೆಯನ್ನ ಶಿಫಾರಸು ಮಾಡಲು ವೈದ್ಯರಿಗೆ ಕಂಪನಿ 1,000 ಕೋಟಿ ರೂಪಾಯಿ ಖರ್ಚು ಮಾಡಿದ ಮಾಹಿತಿ ಬೆಳಕಿಗೆ ಬಂದಿದೆ. ಇನ್ನು ಈ ಕುರಿತು ನೇರ ತೆರಿಗೆ ಮಂಡಳಿಯೂ ಭಾರತೀಯ ವೈದ್ಯಕೀಯ ಮತ್ತು ಮಾರಾಟ ಒಕ್ಕೂಟಕ್ಕೆ ದೂರು ನೀಡಿತ್ತು. ಇನ್ನು ಒಕ್ಕೂಟ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ಸಧ್ಯ ಸುಪ್ರೀಂ ಈ ಕುರಿತು ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರವನ್ನ ಕೇಳಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರನ್ನೊಳಗೊಂಡ ಪೀಠವು ಇದನ್ನ “ಗಂಭೀರ ವಿಷಯ” ಎಂದಿದ್ದು, 10 ದಿನಗಳೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

Share.
Exit mobile version