ನವದೆಹಲಿ: ‘ಲೈಂಗಿಕ ಕಾರ್ಯಕರ್ತರು’, ‘ಶೈವ ಧರ್ಮ’ ಮತ್ತು ‘ವೈಷ್ಣವ ಧರ್ಮ’ ಕುರಿತು ಹೇಳಿಕೆ ನೀಡಿದ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ಸಚಿವ ಮತ್ತು ಹಿರಿಯ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖಂಡ ಕೆ.ಪೊನ್ಮುಡಿ ಅವರನ್ನು ಶುಕ್ರವಾರ (ಏಪ್ರಿಲ್ 11) ಪಕ್ಷದ ಪ್ರಮುಖ ಹುದ್ದೆಯಿಂದ ತಕ್ಷಣ ತೆಗೆದುಹಾಕಲಾಗಿದೆ. ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕೆ.ಪೊನ್ಮುಡಿ ಅವರನ್ನು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸಲಾಗಿದೆ ಎಂದು ಘೋಷಿಸಿದ್ದಾರೆ. ಸ್ಟಾಲಿನ್ ಈ ಘೋಷಣೆ ಮಾಡಿದ್ದಾರೆ ಆದರೆ ಕ್ರಮಕ್ಕೆ ಯಾವುದೇ ಕಾರಣಗಳನ್ನು ನೀಡಿಲ್ಲ.
ಸಚಿವರ ಅಸಹ್ಯಕರ ಹೇಳಿಕೆಗಳು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ, ಶೈವ ಸಂಪ್ರದಾಯದವರಾದರೆ ವಿಭೂತಿ ಹಾಕಿಕೊಳ್ಳುತ್ತಾರೆ, ವೈಷ್ಣವರಾದರೆ ತಿಲಕವನ್ನು (ನಾಮ) ಇಟ್ಟುಕೊಳ್ಳುತ್ತಾರೆ. ಅಂದರೆ, ಶೈವರಾದರೆ ಮಲಗುವ ಭಂಗಿ ಮತ್ತು ವೈಷ್ಣವರಾದರೆ ನಿಂತುಕೊಳ್ಳುವ ಭಂಗಿ ಎಂದು ಆಕೆ ವಿವರಿಸುತ್ತಾಳೆ ” ಎಂದು ಸಚಿವ ಕೆ.ಪೊನ್ಮುಡಿ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು.