ಬೆಂಗಳೂರು: ಹೈಕೋರ್ಟ್ ಆದೇಶವನ್ನು ಮನ್ನಿಸಿ ಸಿದ್ಧಪಡಿಸಿರುವ ಸಿಇಟಿ ಪರಿಷ್ಕೃತ ರಾಂಕಿಂಗ್ ಪಟ್ಟಿಯನ್ನು ಶನಿವಾರ (ಇಂದು) ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ತಿಳಿಸಿದ್ದಾರೆ. ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ karresults.nic.in ನಲ್ಲಿ ನೋಡಬಹುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಚಿವರು ಇಲ್ಲವೇ ಅಧಿಕಾರಿಗಳು ಶನಿವಾರ ಅಂದ್ರೆ ಇಂದು (ಅಕ್ಟೋಬರ್ 1) ಮಧ್ಯಾಹ್ನ 2 ಗಂಟೆಗೆ kea.kar.nic.in ಪರಿಷ್ಕೃತ ರಾಂಕಿಂಗ್ ಕೆಸಿಇಟಿ 2022 ಘೋಷಿಸಿದ್ದಾರೆ. ಕೆಸಿಇಟಿ 2022 ರ ಫಲಿತಾಂಶವನ್ನು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದಾಗಿದೆ.

CET ಪರಿಷ್ಕೃತ ರಾಂಕಿಂಗ್ ಪರಿಶೀಲಿಸಲು ಹಂತಗಳು

kea.kar.nic.in ಭೇಟಿ ನೀಡಿ
ಕೆಸಿಇಟಿ ಪರಿಷ್ಕೃತ ಫಲಿತಾಂಶ 2022 ಲಿಂಕ್ ಮೇಲೆ ಕ್ಲಿಕ್ ಮಾಡಿ.
ನೋಂದಣಿ ಸಂಖ್ಯೆಯನ್ನು ನಮೂದಿಸಿ.
“ಸಬ್ಮಿಟ್” ಮೇಲೆ ಕ್ಲಿಕ್ ಮಾಡಿ.
ಕರ್ನಾಟಕ ಸಿಇಟಿ ಪರಿಷ್ಕೃತ ರಾಂಕಿಂಗ್ 2022 ಪರದೆಯ ಮೇಲೆ ಪ್ರದರ್ಶನಗೊಳ್ಳಲಿದೆ.
ಕರ್ನಾಟಕ ಸಿಇಟಿ ಪರಿಷ್ಕೃತ ರಾಂಕಿಂಗ್ 2022 ರ ಪ್ರಿಂಟ್ಔಟ್ ತೆಗೆದುಕೊಳ್ಳಿ.

Share.
Exit mobile version