ಬೆಂಗಳೂರು: ಬಿಪಿಎಲ್ ಪಡಿತರದಾರರಿಗೆ ‘ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಗೆ ನೀಡುತ್ತಿದ್ದ ಹಣ ಸ್ಥಗಿತ ಮಾಡುವ ಬಗ್ಗೆ ರಾಜ್ಯ ಸರ್ಕಾರ ಶೀಘ್ರದಲ್ಲಿ ತೀರ್ಮಾನ ಕೈಗೊಳ್ಳಾಗುವುದು ಎನ್ನಲಾಗಿದೆ.
ಹಣದ ಬದಲಾಗಿ ಪರ್ಯಾಯವಾಗಿ ಕಾರ್ಡ್‌ದಾರರಿಗೆ ತೊಗರಿಬೇಳೆ, ತಾಳೆಎಣ್ಣೆ, ಸಕ್ಕರೆ ಹಾಗೂ ಅಯೋಡೈಸ್ಡ್ ಉಪ್ಪು ನೀಡಲು ಚಿಂತನೆ ನಡೆಸದಿದೆ ರಾಜ್ಯ ಸರ್ಕಾರ ಎನ್ನಲಾಗಿದೆ. ಹೀಗೆ ಮಾಡುವುದರಿಂದ ನೂರಾರು ಕೋಟಿ ರೂಪಾಯಿ ಹಣ ಉಳಿತಾಯವಾಗಲಿದೆ ಎಂದು ಲೆಕ್ಕಾಚಾರ ಹಾಕಿದೆ ಎನ್ನಲಾಗುತ್ತಿದೆ. ಅಕ್ಕಿ ಕೊರತೆಯಿಂದಾಗಿ 5 ಕೆ.ಜಿ. ಅಕ್ಕಿ ಕೊಟ್ಟು, ಉಳಿದ ಐದು ಕೆ.ಜಿ.ಗೆ ಅಕ್ಕಿಗೆ ನಗದು ಪಾವತಿಸುತ್ತಿತ್ತು. ಇದಕ್ಕೆ ಸರಕಾರ ಪ್ರತಿ ತಿಂಗಳು 700 ಕೋಟಿಗೂ ಅಧಿಕ ಹಣ ಭರಿಸಬೇಕಾಗುತ್ತಿದೆ. ಈಗಾಗಲೇ ಅನ್ನಭಾಗ್ಯದಡಿ ಪ್ರತಿ ತಿಂಗಳು 2.29 ಲಕ್ಷ ಮೆಟ್ರಿಕ್ ಟನ್ ಅಕ್ಕಿ ವಿತರಿಸಲಾಗುತ್ತಿದೆ. ಬಿಪಿಎಲ್ ಪಡಿತರ ಚೀಟಿದಾರರ ಪೈಕಿ ಶೇ.93ರಷ್ಟು ಫಲಾನುಭವಿಗಳು ಕೂಡ ಅಕ್ಕಿ ಹಣದ ಬದಲಿಗೆ ಬೇಳೆ, ಸಕ್ಕರೆ, ಎಣ್ಣೆ, ಉಪ್ಪು ನೀಡಬೇಕೆಂದು ಬೇಡಿಕೆ ಇಟ್ಟಿಟ್ಟು, ಈ ಕಾರಣಕ್ಕೆ ರಾಜ್ಯ ಸರ್ಕಾರ ಹಣವನ್ನು ನೀಡದೇ ಇರುವ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವುದು ಎನ್ನಲಾಗಿದೆ.