ಬೆಂಗಳೂರು : ರಾಜ್ಯದಲ್ಲಿ  ಈ ಬಾರಿಯ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಇರಲ್ಲ. ಹಿಂದಿನಂತೆ ಗಣೇಶ ಹಬ್ಬ ಆಚರಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚೆ ನಡೆಸಿದ್ದೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ವಾಟ್ಸಫ್‌ ಬಳಕೆದಾರರಿಗೆ ಸಿಹಿ ಸುದ್ದಿ: ಶೀಘ್ರದಲ್ಲಿ ಖಾತೆ ಹ್ಯಾಕಿಂಗ್ ತಡೆಯಲು ಬರಲಿದೆ ‘ಲಾಗ್‌ ಇನ್‌’ ಸೌಲಭ್ಯ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧ ಇರಲ್ಲ. ಹಿಂದಿನಂತೆ ಗಣೇಶ ಹಬ್ಬ ಆಚರಣೆಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚೆ ನಡೆಸಿದ್ದೇನೆ. ಪರಿಸರ ಗಣೇಶ ಕೂರಿಸಬೇಕು ಎಂದು ಹೇಳಿದ್ದಾರೆ.

ಕೋವಿಡ್ ವೇಳೆ ವಾರ್ಡ್ ಗೆ ಒಂದು ಗಣಪತಿ ಎಂದು ನಿರ್ಬಂಧ ಹೇರಲಾಗಿತ್ತು. ಮುಂಜಾಗ್ರತ ಕ್ರಮವಾಗಿ ಈ ಹಿಂದೆ ಗಣೇಶ ಹಬ್ಬ ಆಚರಣೆಗೆ ನಿರ್ಬಂಧ ವಿಧಿಸಲಾಗಿತ್ತು. ಈ ಬಾರಿ ಗಣೇಶ ಹಬ್ಬಕ್ಕೆ ಯಾವುದೇ ನಿರ್ಬಂಧ ಇರಲ್ಲ  ಎಂದು ತಿಳಿಸಿದ್ದಾರೆ.

ಇನ್ನು ರಾಜ್ಯದಲ್ಲಿ 14 ಜಿಲ್ಲೆಯಲ್ಲಿ ಪ್ರವಾಹ ಪಿಡಿತ ಪ್ರದೇಶವಾಗಿದೆ.  ಈಗಾಗಲೇ 161 ಗ್ರಾಮ 21,727 ಜನರು ಪ್ರವಾಹದಿಂದ  ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅತಿವೃಷ್ಠಿಯಿಂದ ಈವರೆಗೆ 73 ಜನರು ಸಾವನ್ನಪ್ಪಿದ್ದಾರೆ. ಸಿಡಿಲುಬಡಿದು 15 ಜನರು, ಮರಬಿದ್ದು 5 ಜನರು ಸಾವನ್ನಪ್ಪಿದ್ದಾರೆ. ಮನೆ ಕುಸಿದು 19 , ಪ್ರವಾಹಕ್ಕೆ ಸಿಲುಕಿ 24ಜನರು ಸಾವು.  ಭೂಕುಸಿತದಿಂದ 9, ವಿದ್ಯುತ್‌ ತಗುಲಿ ಓರ್ವ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಪ್ರದೇಶದಿಂದ 8197 ಸ್ಥಳಾಂತರ ಮಾಡಲಾಗಿದೆ.ಕಾಳಜಿ ಕೇಂದ್ರದಲ್ಲಿ ಈವರೆಗೆ  7386ಜನರು ಆಶ್ರಯ ಪಡೆದಿದ್ದಾರೆ.  ಮಳೆಯಿಂದಾಗಿ 666 ಮನೆಗಳು ಸಂಪೂರ್ಣ ಹಾನಿ ಆಗಿದೆ.  2949 ಮನೆಗಳಿಗೆ ತೀವ್ರ ಹಾನಿಯಾಗಿದೆ. 17,750 ಮನೆಗಳು ಭಾಗಶಃ ಹಾನಿಯಾಗಿದೆ.

ಗಂಜಿ  ಕೇಂದ್ರದಿಂದ ಮನೆಗೆ ಹೋಗುವವರಿಗೆ . 10 ಕೆ.ಜಿ ಅಕ್ಕಿ, ತೊಗರಿ ಬೆಳೆ, ಉಪ್ಪು  ಎಣ್ಣೆ ಇರುವಂತಹ ಆಹಾರ ಕಿಟ್‌ ವಿತರಿಸಲಾಗಿದೆ. ಕೊಡೆ ಟಾರ್ಚ್‌ ಕೊಡುವ ಬಗ್ಗೆಯೂ ಚಿಂತನೆ ಮಾಡುವ ಮೂಲಕ ಕಂದಾಯ ಇಲಾಖೆಯಲ್ಲಿ ಬದಲಾವಣೆ ತರಲು ಸಂಕಲ್ಪ ಮಾಡಲಾಗಿದೆ.

Share.
Exit mobile version