ನವದೆಹಲಿ: ವಾಟ್ಸಾಪ್ ತನ್ನ ಬಳಕೆದಾರರ ಸುರಕ್ಷತಾ ವೈಶಿಷ್ಟ್ಯಗಳನ್ನು ಮತ್ತೆ ಹೆಚ್ಚಿಸುತ್ತಿದೆ. ಈ ಬಾರಿ ಖಾಸಗಿ ಮೆಸೇಜಿಂಗ್ ಅಪ್ಲಿಕೇಶನ್ ಹೊಸ ಭದ್ರತಾ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ ಇದು ಬಳಕೆದಾರರಿಗೆ ಸಂಭಾವ್ಯ ಸ್ಕ್ಯಾಮರ್ಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತದೆಯಂತೆ. ಲಾಗಿನ್ ಅಪ್ರೂವಲ್ ಎಂದು ಕರೆಯಲಾಗುವ ಈ ವೈಶಿಷ್ಟ್ಯವು ಕಂಪನಿಯ ಎರಡು-ಹಂತದ ಪರಿಶೀಲನಾ ವ್ಯವಸ್ಥೆಯಲ್ಲಿ ನಿರ್ಮಾಣವಾಗುವ ನಿರೀಕ್ಷೆಯಿದೆ. ಈ ವೈಶಿಷ್ಟ್ಯವನ್ನು ಬಹು-ಸಾಧನ ಬಳಕೆದಾರರಿಗಾಗಿ ವಿನ್ಯಾಸಗೊಳಿಸಲಾಗಿದೆ.

ಈ ಹೊಸ ವೈಶಿಷ್ಟ್ಯವು ಬಳಕೆದಾರರು ಬೇರೆ ಸಾಧನದಿಂದ ತಮ್ಮ ವಾಟ್ಸಾಪ್ ಖಾತೆಗೆ ಲಾಗಿನ್ ಆದಾಗ ಅಧಿಸೂಚನೆಗಳನ್ನು ಸ್ವೀಕರಿಸಲು ಬಳಕೆದಾರರಿಗೆ ಅನುಮತಿಸುತ್ತದೆ ಎನ್ನಲಾಗಿದೆ. ವಾಟ್ಸಾಪ್ ಫೀಚರ್ ಟ್ರ್ಯಾಕರ್ ಆಗಿರುವ ಡಬ್ಲ್ಯುಎಬೆಟಾಇನ್ಫೋ ವರದಿಯ ಪ್ರಕಾರ, ಕಂಪನಿಯು ಪ್ರಸ್ತುತ ತನ್ನ ಇತ್ತೀಚಿನ ಸಾಫ್ಟ್ವೇರ್ನ ಬೀಟಾ ಆವೃತ್ತಿಯನ್ನು ಪರೀಕ್ಷಿಸುತ್ತಿದೆ. ಲಾಗಿನ್ ಅಪ್ರೂವಲ್ ಎಂದು ಕರೆಯಲಾಗುವ ಹೊಸ ಭದ್ರತಾ ವೈಶಿಷ್ಟ್ಯವು ಭವಿಷ್ಯದ ನವೀಕರಣದ ಭಾಗವಾಗಿರುತ್ತದೆ ಎಂದು ನಂಬಲಾಗಿದೆ ಅಂಥ ವರದಿ ತಿಳಿಸಿದ್ದಾರೆ.

Share.
Exit mobile version