ಬೆಂಗಳೂರು: ಬಿಗ್ ಬಾಸ್ ಕನ್ನಡ ಖ್ಯಾತಿಯ ಸೋನುಗೌಡ ಅವರಿಗೆ ಅಕ್ರಮವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ 4 ದಿನ ಪೊಲೀಸ್ ಕಷ್ಟಡಿಗೆ ಕೋರ್ಟ್ ನೀಡಿ ಆದೇಶಿಸಿದೆ.
ಮಗುವನ್ನು ಅಕ್ರಮವಾಗಿ ದತ್ತು ಪಡೆದ ಆರೋಪದ ಅಡಿಯಲ್ಲಿ ರೀಲ್ ಸ್ಟಾರ್, ಬಿಗ್ ಬಾಸ್ ಖ್ಯಾತಿಯ ಸೋನು ಗೌಡ ಅವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಲಾಗಿತ್ತು.
ಸಾಮಾಜಿಕ ಜಾಲತಾಣಗಳ ಮೂಲಕ ತಾನು 6 ರಿಂದ 8 ವರ್ಷದ ಮಗುವನ್ನು ದತ್ತು ಪಡೆದಿರೋದಾಗಿ ರೀಲ್ ಸ್ಟಾರ್ ಸೋನು ಗೌಡ ಹೇಳಿಕೊಂಡಿದ್ದರು. ಅವರ ಹೇಳಿಕೆ ವೈರಲ್ ಕೂಡ ಆಗಿತ್ತು.
ಈ ಹಿನ್ನಲೆಯಲ್ಲಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಎಂಬುವರು ಬ್ಯಾಡರಹಳ್ಳಿ ಠಾಣೆಗೆ ರೀಲ್ ಸ್ಟಾರ್ ಸೋನು ಗೌಡ ವಿರುದ್ಧ ದೂರು ನೀಡಿದ್ದರು.
ಈ ದೂರನ್ನು ಆಧರಿಸಿ, ಸೋನು ಗೌಡ ವಿರುದ್ಧ ಜೆ.ಜೆ ಆ್ಯಕ್ಟ್ ಅಡಿಯಲ್ಲಿ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಆ ಬಳಿಕ ಇಂದು ಸೋನು ಗೌಡ ಅವರನ್ನು ಬಂಧಿಸಲಾಗಿತ್ತು.
ಈ ಬಳಿಕ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳಊರಿ ಸಿಜೆಎಂ ನ್ಯಾಯಾಲಯವು ಸೋನುಗೌಡಗೆ ಮಾರ್ಚ್.25ರವರೆಗೆ ಪೊಲೀಸ್ ಕಷ್ಟಡಿಗೆ ನೀಡಿ ಆದೇಶಿಸಿದೆ.
BREAKING : ದೆಹಲಿ ಸಿಎಂ ‘ಕೇಜ್ರಿವಾಲ್’ ಅಸ್ವಸ್ಥ : ‘Bp’ ಲೋ, ಕೋರ್ಟ್’ನಿಂದ ಹೊರ ಕರೆತಂದ ಅಧಿಕಾರಿಗಳು
BREAKING : ‘ಕಾಂಗ್ರೆಸ್’ಗೆ ‘ಕೋರ್ಟ್’ ಶಾಕ್ : ‘ಆದಾಯ ತೆರಿಗೆ ಮರು ಮೌಲ್ಯಮಾಪನ’ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ