ಕೋಲ್ಕತಾ: ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿ ತಡರಾತ್ರಿ 12.10 ರ ಸುಮಾರಿಗೆ ಐದು ಅಂತಸ್ತಿನ, ನಿರ್ಮಾಣ ಹಂತದ ಕಟ್ಟಡ ಕುಸಿದಿದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗಾರ್ಡನ್ ರೀಚ್ ಪ್ರದೇಶದಲ್ಲಿ ನಿರ್ಮಾಣ ಹಂತದ ಕಟ್ಟಡದ ಒಂದು ಭಾಗವು ಪಕ್ಕದ ಕೊಳೆಗೇರಿಯಲ್ಲಿ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ 10 ಕೊಳೆಗೇರಿ ನಿವಾಸಿಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ” ಎಂದು ಸ್ಥಳದಲ್ಲಿ ಕೆಲಸ ಮಾಡುತ್ತಿರುವ ರಾಜ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.
ಕತ್ತಲೆ ಮತ್ತು ಕ್ರೇನ್ಗಳನ್ನು ನಿಯೋಜಿಸಲು ಅಗತ್ಯವಾದ ಸ್ಥಳಾವಕಾಶದ ಕೊರತೆಯು ಸಮಸ್ಯೆಯನ್ನು ಒಡ್ಡುತ್ತಿದೆ” ಎಂದು ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋಲ್ಕತಾ ಪೊಲೀಸ್ ಆಯುಕ್ತ ವಿನೀತ್ ಗೋಯಲ್ ಮುಂಜಾನೆ 1.40 ರ ಸುಮಾರಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
#WATCH | West Bengal | At least 5 people rescued & 7 more stuck under debris after a 5-storey under-construction building collapsed in Metiabruz, South Kolkata. Search & rescue operation underway. Further details awaited: Abhijit Pandey, Director Fire and Disaster Management. https://t.co/0RmwjUxfhn pic.twitter.com/ik7wU2XX8O
— ANI (@ANI) March 18, 2024