ಬೆಂಗಳೂರು: ರಾಜ್ಯ ಸರ್ಕಾರದಿಂದ ಈಗಾಗಲೇ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿಯನ್ನು ಘೋಷಣೆ ಮಾಡಿ, ಚುನಾವಣೆಯ ಮುನ್ಸೂಚನೆ ನೀಡಿತ್ತು. ಈ ಬೆನ್ನಲ್ಲೇ ರಾಜ್ಯದ ಚುನಾವಣಾ ಆಯೋಗದ ಚುನಾವಣಾ ಆಯುಕ್ತರು ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆ ಬಗ್ಗೆ ಮಹತ್ವದ ಅಪ್ ಡೇಟ್ ನೀಡಿದ್ದಾರೆ. ಅದು ಏನು ಅಂತ ಮುಂದೆ ಓದಿ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನೂತನ ಆಯುಕ್ತ ಜಿ.ಎಂಸ್ ಸಂಗ್ರೇಶಿ ಅವರು, ಕಳೆದ ನಾಲ್ಕು ವರ್ಷಗಳಿಂದ ಅವಧಿ ಮುಗಿದರೂ ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಹಾಗೂ ಬಿಬಿಎಂಪಿ ಚುನಾವಣೆ ನಡೆಸಿಲ್ಲ. ಈ ಸಂಬಂಧ ಸರ್ಕಾರದ ವಿರುದ್ಧ ನ್ಯಾಯಾಂಗ ಉಲ್ಲಂಘನೆ ಕೇಸ್ ದಾಖಲಿಸಲಾಗಿದೆ ಎಂದರು.
ಚುನಾವಣಾ ಆಯೋಗದಿಂದ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿರುವಂತ ಅರ್ಜಿಯಲ್ಲಿ 2 ಚುನಾವಣೆಗೆ ಸಂಬಂಧಿಸಿದಂತೆ ವಿಚಾರಣೆಯು ಬಾಕಿ ಇದೆ. ಆ ಎರಡು ಚುನಾವಣಾ ಅರ್ಜಿಯ ವಿಚಾರಣೆ ಪೂರ್ಣಗೊಂಡ ನಂತ್ರ, ತಕ್ಷಣವೇ ಚುನಾವಣೆಗೆ ದಿನಾಂಕ ಘೋಷಿಸುವುದಾಗಿ ತಿಳಿಸಿದರು.
ನಿಯಮಾವಳಿಗಳ ಪ್ರಕಾರ ಅವಧಿ ಮುಗಿದಂತ 6 ತಿಂಗಳ ಒಳಗಾಗಿ ಚುನಾವಣೆಗೆ ಸರ್ಕಾರವು ಮುಂದುವರೆಯದೇ ಇದ್ದರೇ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ. ಅದರಂತೆ ಈಗಾಗಲೇ ಕೋರ್ಟ್ ನಲ್ಲಿ ಸಲ್ಲಿಸಿರುವಂತ ಅರ್ಜಿಯ ವಿಚಾರಣೆ ನಡೆದು, 2 ಕೇಸ್ ವಿಚಾರಣೆ ಮಾತ್ರ ಬಾಕಿ ಇದೆ. ಮುಂದಿನ ವಾರದಲ್ಲಿ ಶಿವಮೊಗ್ಗ, ತುಮಕೂರು, ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಘೋಷಿಸುವುದಾಗಿ ಹೇಳಿದರು.
ನಾವು ಈ ಹಿಂದಿನ ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಮೀಸಲಾತಿಯ ಆಧಾರದ ಮೇಲೆ ಚುನಾವಣೆ ಘೋಷಣೆ ಮಾಡಲಿದ್ದೇವೆ. ಇದಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ಕೂಡ ಇದೆ. ಈ ಹಿನ್ನಲೆಯಲ್ಲಿ ನವೆಂಬರ್ ಒಳಗೆ ಚುನಾವಣೆ ಮಾಡುವುದಾಗಿ ತಿಳಿಸಿದರು.
ಇನ್ನೂ ಫೆಬ್ರವರಿ ಒಳಗೆ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಯದಿದ್ದರೇ 15ನೇ ಹಣಕಾಸಿನ ಆಯೋಗದ ಸುಮಾರು 2000 ಕೋಟಿ ಹಣ ವಾಪಾಸ್ಸು ಹೋಗಲಿದೆ. ಚುನಾವಣೆ ಆದರೇ ಮಾತ್ರವೇ ಆ ಹಣವು ನಮ್ಮಲ್ಲಿ ಪಾಲಿಗೆ ಬರುತ್ತದೆ. ಆರು ತಿಂಗಳ ಒಳಗಾಗಿ ಸರ್ಕಾರ ಚುನಾವಣೆಗೆ ಮುಂದುವರೆಯದೇ ಇದ್ದರೇ ನಾವು ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದರು.
BREAKING: ಆ.27ರಂದು ‘KAS ಪೂರ್ವಭಾವಿ ಪರೀಕ್ಷೆ’ ಮರುನಿಗದಿ | KAS Recuitment Exam
RBI ನಿಂದ ಮಹತ್ವದ ತೀರ್ಮಾನ: ಈಗ ನಿಮ್ಮ ಚೆಕ್ ಅನ್ನು ಶೀಘ್ರದಲ್ಲೇ ಬ್ಯಾಂಕಿನಿಂದ ಕ್ಲೀಯರ್…!
ಶುಭ ದಿನ, ಗಳಿಗೆ, ನಕ್ಷೆತ್ರ ನೋಡಿ ಕುಮಾರಸ್ವಾಮಿ ಸಹೋದರನ ಆಸ್ತಿ ದಾಖಲೆ ಬಿಡುಗಡೆ: ಡಿಸಿಎಂ ಡಿ.ಕೆ ಶಿವಕುಮಾರ್