ಬೆಂಗಳೂರು : ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ್ದ ಅನುಮಾನಾಸ್ಪದ ಬ್ಯಾಗ್ ನ್ನು ಪೊಲೀಸರು ಪರಿಶೀಲೀಸಿದ್ದು, ಬ್ಯಾಗ್ ನಲ್ಲಿ ಬಟ್ಟೆಗಳು ಇರುವುದು ಕಂಡು ಬಂದಿದೆ.
ಬೆಂಗಳೂರಿನ ರಾಮಮೂರ್ತಿ ನಗರದ ಫ್ಲೈಓವರ್ ಬಳಿ ಪತ್ತೆಯಾಗಿದ್ದ ಅನುಮಾನಾಸ್ಪದ ಬ್ಯಾಗ್ ಮಹಿಳೆಯೊಬ್ಬರಿಗೆ ಸೇರಿದ್ದು, ಮಹಿಳೆ ರಸ್ತೆ ಬದಿ ಬ್ಯಾಗ್ ಇಟ್ಟು ಶೌಚಾಲಯಕ್ಕೆ ತೆರಳಿದ್ದರು. ಬ್ಯಾಗ್ ಪತ್ತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಬ್ಯಾಗ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬ್ಯಾಗ್ ನಲ್ಲಿ ಬಟ್ಟೆಗಳು ಕಂಡುಬಂದಿದ್ದು, ಪೊಲೀಸರು ನಿರಾಳರಾಗಿದ್ದಾರೆ.