ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಕೊಲೆ ಪ್ರಕಣದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ಕೋರ್ಟ್ ಗೆ ಆರೋಪಿಗಳ ವಶಕ್ಕೆ ನೀಡಿರುವ ರಿಮ್ಯಾಂಡ್ ಕಾಪಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ಉಲ್ಲೇಖಿಸಲಾಗಿದ್ದು, ನ್ಯಾಯಾಲಯದಲ್ಲಿ ನಿವೇದಿಸಿಕೊಳ್ಳುವುದೇನೆಂದರೆ ಎl ರಿಂದ ಎ5 ಹಾಗೂ ಎ10 ರಿಂದ ಎ17 ಆರೋಪಿಗಳನ್ನು ದಿನಾಂಕ 11/06/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ದಿನಾಂಕ 24/06/2024 ರ ವರೆಗೆ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ಅಭಿರಕ್ಷೆಗೆ ನೀಡಲು ರಿಮ್ಯಾಂಡ್ ಅರ್ಜಿಯೊಂದಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ದಿನಾಂಕ 16/06/2024 ರ ವರೆಗೆ ಪೊಲೀಸ್. ಅಭಿರಕ್ಷೆಗೆ ಆರೋಪಿಗಳನ್ನು ಪೊಲೀಸ್ ಅಭಿರಕ್ಷೆಗೆ ಪಡೆದುಕೊಂಡಿರುತ್ತದೆ.
ನಂತರ ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೊಳಪಡಿಸಿ ಸುರಕ್ಷಿತ ಬಂಧನದಲ್ಲಿರಿಸಿ ನಂತರ ಮಹಿಳಾ ಆರೋಪಿತೆಯನ್ನು ರಾಜ್ಯ ಮಹಿಳಾ ಸ್ವೀಕಾರ ಕೇಂದ್ರಕ್ಕೆ ಕಳುಹಿಸಿಕೊಡಲಾಗಿರುತ್ತದೆ. ನಾನಾಂಕ 12/06/2024 ರಂದು ಕೇಸಿನಲ್ಲಿ ತನಿಖೆಯನ್ನು ಮುಂದುವರಿಸಿ ಆಯ ತನ್ನ ಪೈಕಿ ಎ-2 ಆರೋಪಿ ದರ್ಶನ್ ಈತನು ಕೊಲೆಯಾದ ವ್ಯಕ್ತಿಯನ್ನು ವಿಲೇವಾರಿ ಮಾಡಿ ಇದರಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಲು ಪೊಲೀಸ್ ಲಾಯರ್ ಮತ್ತು ಶವವನ್ನು ಸಾಗಿಸುವ ವ್ಯಕ್ತಿಗಳಿಗೆ ತಗಲುವ ವೆಚ್ಚವನ್ನು ಭರಿಸಲು ಎ-1 ಆರೋಪಿ ಪದುಷ್ ಎಂಬಾತನಿಗೆ 30 ಲಕ್ಷ ರೂ ಹಣವನ್ನು ನೀಡಿರುವುದಾಗಿ ತಮ್ಮ ಸ್ವ-ಇಚ್ಚಾ ಹೇಳಿಕೆಯಲ್ಲಿ ತಿಳಿಸಿರುವುದಾಗಿ ರಿಮ್ಯಾಂಡ್ ಕಾಪಿಯಲ್ಲಿ ಉಲ್ಲೇಖಿಸಲಾಗಿದೆ.