ನವದೆಹಲಿ: ಟಿಕೆಟ್ ನಲ್ಲಿ ಇಂದು ಬೆಳಂಬೆಳಗ್ಗೆ ಸಂಭವಿಸಿದ ಭೂಕಂಪನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 53 ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸೇರಿದಂತೆ ಆರು ಭೂಕಂಪಗಳು ಟಿಬೆಟ್ನಲ್ಲಿ ಮಂಗಳವಾರ ಬೆಳಿಗ್ಗೆ ಒಂದು ಗಂಟೆಯಲ್ಲಿ ಸಂಭವಿಸಿದ್ದು, ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ.
ದೆಹಲಿ-ಎನ್ಸಿಆರ್ ಮತ್ತು ಉತ್ತರ ಭಾರತದ ವಿವಿಧ ಭಾಗಗಳಲ್ಲಿಯೂ ಭೂಕಂಪನದ ಅನುಭವವಾಗಿದೆ. ಪಾಟ್ನಾ ಸೇರಿದಂತೆ ಬಿಹಾರದ ಹಲವಾರು ಪ್ರದೇಶಗಳಲ್ಲಿ ಮತ್ತು ರಾಜ್ಯದ ಉತ್ತರ ಭಾಗದ ಅನೇಕ ಸ್ಥಳಗಳಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿಯೂ ಭೂಕಂಪದ ಅನುಭವವಾಗಿದೆ.
ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಪ್ರಬಲ ಭೂಕಂಪನದ ನಂತರ ನಿವಾಸಿಗಳು ತಮ್ಮ ಮನೆಗಳಿಂದ ಓಡಿಬಂದಿದ್ದಾರೆ ಎಂದು ವರದಿಯಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 6:35 ಕ್ಕೆ ನೇಪಾಳ-ಟಿಬೆಟ್ ಗಡಿಯ ಬಳಿಯ ಕ್ಸಿಜಾಂಗ್ನಲ್ಲಿ 7.1 ತೀವ್ರತೆಯ ಮೊದಲ ಭೂಕಂಪ ಸಂಭವಿಸಿದೆ. ಈ ತೀವ್ರತೆಯನ್ನು ಬಲವೆಂದು ಪರಿಗಣಿಸಲಾಗುತ್ತದೆ ಮತ್ತು ತೀವ್ರ ಹಾನಿಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ.
VIDEO | A strong earthquake jolted Kathmandu early morning on Tuesday. The earthquake measuring 7 magnitude on Richter scale was recorded by the National Earthquake Measurement Centre at 6.50 am. Tremors were also felt in Bihar's Madhubani.#Earthquake #Nepal
(Full video… pic.twitter.com/bRHdPgdmTf
— Press Trust of India (@PTI_News) January 7, 2025
Wow! Here's another look at the now Upgraded M7.1 #Earthquake from a Khumjung, #Nepal Live Cam moments ago. 🥴 #NepalEarthquake pic.twitter.com/qtVklIJa8e
— LiveCamChaser (@LiveCamChaser) January 7, 2025
#WATCH | Earthquake tremors felt in Bihar's Sheohar as an earthquake with a magnitude of 7.1 on the Richter Scale hit 93 km North East of Lobuche, Nepal at 06:35:16 IST today: USGS Earthquakes pic.twitter.com/bo2djz9laL
— ANI (@ANI) January 7, 2025