ಮಂಡ್ಯ: ಮಂಡ್ಯ ತಾಲೂಕಿನ ಕೆರಗೋಡಿ ಗ್ರಾಮದಲ್ಲಿ ನಡೆದಿದ್ದಂತ ಹನುಮಧ್ವಜ ಹಾರಾಟ ವಿವಾದಕ್ಕೆ ಈಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಹನುಮಧ್ವಜ ಹಾರಾಟ ಸಂಬಂಧ ಗ್ರಾಮ ಪಂಚಾಯ್ತಿ ನಡೆಸಿದ್ದಂತ ನಡವಳಿಯ ನಿರ್ಣಯದ ಪುಸ್ತಕವೇ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ.
ಮಂಡ್ಯ ತಾಲೂಕಿನ ಕೆರಗೋಡಿ ಗ್ರಾಮದಲ್ಲಿ ಹನುಮಧ್ವಜ ಹಾರಾಟಕ್ಕೂ ಮುನ್ನಾ, ಗ್ರಾಮ ಪಂಚಾಯ್ತಿಯ 22 ಸದಸ್ಯರಿಂದ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ 18 ಜನರು ಹನುಮಧ್ವಜ ಹಾರಾಟ ಸಂಬಂಧ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಇನ್ನುಳಿದವರು ಒಪ್ಪಿಗೆ ಸೂಚಿಲ್ಲ. ಈ ಎಲ್ಲವನ್ನು ಜನವರಿ.25ರಂದು ನಡವಳಿ ಪುಸ್ತಕದಲ್ಲಿ ನಮೂದಿಸಲಾಗಿದೆ.
ಇದೀಗ ಹೀಗೆ ಜನವರಿ.25ರಂದು ಹನುಮಧ್ವಜ ಹಾರಿಸೋ ಸಂಬಂಧ ನಡೆದಂತ ಗ್ರಾಮ ಪಂಚಾಯ್ತಿಯ ಸದಸ್ಯರ ಸಭೆಯ ನಡವಳಿಯ ನಿರ್ಣಯದ ಪುಸ್ತಕವೇ ನಾಪತ್ತೆಯಾಗಿದೆ ಎಂಬುದಾಗಿ ತಿಳಿದು ಬಂದಿದೆ. ಈ ಮೂಲಕ ಈಗ ಹನುಮಧ್ವಜ ವಿವಾದ ಮತ್ತೊಂದು ತಿರುವು ಪಡೆದಿದೆ.
ಅಂದಹಾಗೆ ನಿನ್ನೆ ಇದೇ ವಿಚಾರವಾಗಿ ಬಿಜೆಪಿ ಕಾರ್ಯಕರ್ತರು, ನಾಯಕರು ಕೆರಗೋಡಿಯಿಂದ ಮಂಡ್ಯ ಡಿಸಿ ಕಚೇರಿಯವರೆಗೆ ಪಾದಯಾತ್ರೆ ಮಾಡಿ ಹನುಮಧ್ವಜ ತೆರವಿಗಾಗಿ ಆಕ್ರೋಶವನ್ನು ಹೊರ ಹಾಕಿದ್ದರು. ಹೀಗೆ ಪ್ರತಿಭಟನೆ ನಡೆಸಿದಂತ ಅನೇಕರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಇದು ಅಂಚೆ ಕಚೇರಿಯ ಅದ್ಭುತ ಯೋಜನೆ: ನೀವು ತುಂಬಾ ಬಡ್ಡಿಯನ್ನು ಪಡೆಯುತ್ತೀರಿ
BREAKING: ಸೈಫರ್ ಪ್ರಕರಣದಲ್ಲಿ ಪಾಕಿಸ್ತಾನ್ ಮಾಜಿ ಪ್ರಧಾನಿ ‘ಇಮ್ರಾನ್ ಖಾನ್’ಗೆ 10 ವರ್ಷ ಜೈಲು ಶಿಕ್ಷೆ