ಬೆಂಗಳೂರು: ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದಂತ ಪ್ರಕರಣ ಸಂಬಂಧ ಬಿಗ್ ಬಾಸ್ ಕನ್ನಡ ಖ್ಯಾತಿಯ ಸೋನು ಶ್ರೀನಿವಾಸಗೌಡ ಜೈಲುಪಾಲಾಗಿದ್ದಾರೆ. ಇದೇ ವೇಳೆಯಲ್ಲಿ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಗುವನ್ನು ಮಾರಾಟ ಮಾಡಿಲ್ಲ, ದತ್ತು ನೀಡಿಲ್ಲವೆಂದು ಪೋಷಕರು ಪೊಲೀಸರ ಮುಂದೆ ಸ್ಪಷ್ಟನೆ ನೀಡಿದ್ದಾರೆ.
ಈ ಪ್ರಕರಣ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ತೆರಳಿರುವಂತ ರೀಲ್ಸ್ ರಾಣಿ ಸೋನು ಶ್ರೀನಿವಾಸಗೌಡ ಅವರಿಗೆ ಮಗು ದತ್ತು ನೀಡಿದ್ದಾರೆ ಎನ್ನಲಾದಂತ ಪೋಷಕರು, ತಮ್ಮ ಹೇಳಿಕೆಯನ್ನು ನೀಡಿದ್ದಾರೆ.
ಪೊಲೀಸರ ಮುಂದೆ ನೀಡಿರುವಂತ ಪೋಷಕರ ಹೇಳಿಕೆಯಲ್ಲಿ ಮಗಳು ಸೋನುಗೌಡ ಅವರನ್ನು ತುಂಬಾನೇ ಹಚ್ಚಿಕೊಂಡಿದ್ದಳು. ಜ್ವರ ಬಂದು ಕನವರಿಸುತ್ತಿದ್ದಳು. ಹೀಗಾಗಿ ಅವಳನ್ನು ಸ್ವಲ್ಪ ದಿನ ಅವರೊಂದಿಗೆ ಕಳುಹಿಸಿ ಕೊಟ್ಟಿದ್ವಿ ಎಂದಿದ್ದಾರೆ.
ಮಗಳು ಸೋನು ಶ್ರೀನಿವಾಸಗೌಡ ಅವರನ್ನು ಕನವರಿಸಿಕೊಳ್ಳುತ್ತಿದ್ದ ಕಾರಣ ಅವರೊಂದಿಗೆ ಕಳುಹಿಸಿಕೊಟ್ಟಿದ್ವೇ ವಿನಹ, ಅವರಿಗೆ ದತ್ತು ಆಗಲೀ, ಮಾರಾಟವಾಗಲೀ ನಾವು ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಪೊಲೀಸರ ಮುಂದೆ ಸ್ಪಷ್ಟನೆ ನೀಡಿ, ಸೋನುಗೌಡ ದತ್ತು ಪಡೆದ ಕೇಸ್ ಗೆ ಬಿಗ್ ಟ್ವಿಸ್ಟ್ ನೀಡಿದ್ದಾರೆ.
BIG NEWS : ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ : ಸಚಿವ ಶಿವರಾಜ ತಂಗಡಿ ವಿರುದ್ಧ ದೂರು ದಾಖಲು
ಸಾರ್ವಜನಿಕರೇ ಗಮನಿಸಿ : ‘ವೋಟರ್ ಐಡಿ’ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾರ್ಗದರ್ಶಿ