ರಾಮನಗರ: ಭ್ರೂಣ ಹತ್ಯೆ ಮಾಡಿಸಿ ಪರಾರಿಯಾಗಿರುವಂತ ಪ್ರಿಯಕರನ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಂತ ಪೊಲೀಸರ ವಿರುದ್ಧವೇ ಸಂತ್ರಸ್ತೆಯೊಬ್ಬರು ಸಿಡಿದೆದ್ದಿದ್ದಾರೆ. ಅಲ್ಲದೇ ರಾಮನಗರ ಪೊಲೀಸರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ಮೂಲದ ಮಹಿಳೆಯೊಬ್ಬರು ಭ್ರೂಣ ಹತ್ಯೆ ಮಾಡಿಸಿದಂತ ಪ್ರಿಯಕರನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ತಮಗೆ ನ್ಯಾಯ ಕೊಡಿಸುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಅಲ್ಲದೇ ನ್ಯಾಯ ಸಿಗದೇ ಹೋದ್ರೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರಿಯಕರ ದಯಾನಂದ್ (24) ವಿರುದ್ಧ ರಾಮನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದೂ ತೆಗೆದುಕೊಳ್ಳುತ್ತಿಲ್ಲ. ದಯಾನಂದ ಗೆಳೆಯ ದೂರು ಕೊಡಿಸುವುದಾಗಿ ನನ್ನಿಂದ 1.40 ಲಕ್ಷ ಹಣ ಲಂಚವನ್ನು ಪಡೆದಿದ್ದಾನೆ. ಆದರೂ ಸಿಪಿಐ ಕ್ರಮ ಕೈಗೊಳ್ಳುತ್ತಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಪೊಲೀಸ್ ಠಾಣೆಗೆ ಅಲೆದು, ಅಲೆದು ಸಾಕಾಗಿದೆ ಅಂತ ಅಳಲು ತೋಡಿಕೊಂಡಿದ್ದಾರೆ.
ಅಂದಹಾಗೇ 5 ವರ್ಷಗಳ ಹಿಂದೆ ಮದುವೆಯಾಗಿದ್ದಂತ ಮಹಿಳೆ ಇಷ್ಟವಿಲ್ಲದ ಕಾರಣ, ಪತಿಯಿಂದ ದೂರವಾಗಿದ್ದರು. ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಂತ ಅವರಿಗೆ ದಯಾನಂದ್ ಪರಿಯವಾಗಿತ್ತು. ಮದುವೆಯಾಗುವುದಾಗಿ ನಂಬಿಸಿ ದಯಾನಂದ್ ಲೈಂಗಿಕ ಸಂಪರ್ಕ ಬೆಳೆಸಿ, ಮಹಿಳೆ ಗರ್ಭಿಣಿಯಾಗುತ್ತಲೇ ಬಲವಂತವಾಗಿ ಗರ್ಭಪಾತ ಮಾಡಿಸಿ, ಆ ಬಳಿಕ ನಾಪತ್ತೆಯಾಗಿದ್ದನು. ಇಂತಹ ದಯಾನಂದ್ ವಿರುದ್ಧ ಭ್ರೂಣಹತ್ಯೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆ ಆಗ್ರಹಿಸಿದ್ದಾರೆ.
‘ದೇವೇಗೌಡ’ರ ಕುಟುಂಬಕ್ಕೆ ವಿಷ ಇಟ್ಟವನ ಜತೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ?: ‘HDK’ ಗುಡುಗು