ಬೆಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿರುವುದಾಗಿ ದೂರುದಾರ ತಪ್ಪೊಪ್ಪಿಕೊಂಡ ನಂತ್ರ, ಅಸ್ಥಿ ಪಂಜರಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಎಸ್ಐಟಿ ಅಧಿಕಾರಿಗಳು ದೂರುದಾರ ತೋರಿಸಿದಂತ ಸ್ಥಳಗಳನ್ನು ಗುರುತಿಸಿ ಗುಂಡಿ ಅಗೆದು ನೋಡಿದರೂ ಒಂದೇ ಒಂದು ಸ್ಥಳದಲ್ಲಿ ಮಾತ್ರವೇ ಅಸ್ಥಿ ಪಂಜರಗಳು ದೊರೆತಿವೆ. ಇದೇ ಸಂದರ್ಭದಲ್ಲಿ ಅನಾಮಿಕನ ಹಿಂದಿರುವಂತ ವ್ಯಕ್ತಿಗಳಿಗೆ ಎಸ್ಐಟಿ ನೋಟಿಸ್ ನೀಡಲು ಸಿದ್ಧತೆ ನಡೆಸಿರುವುದಾಗಿ ತಿಳಿದು ಬಂದಿದೆ.
ರಾಜ್ಯ ಸರ್ಕಾರದಿಂದ ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿ ಆದೇಶಿಸಿತ್ತು. ಈವರೆಗೆ 17 ಪಾಯಿಂಟ್ ಗುರುತಿಸಿರುವಂತ ಎಸ್ಐಟಿ ಅಧಿಕಾರಿಗಳ ತಂಡವು ಎಲ್ಲಾ ಪಾಯಿಂಟ್ ಗಳಲ್ಲಿ ಉತ್ಖನನ ನಡೆಸಿದರು. ಪಾಯಿಂಟ್ ನಂ.6 ಬಿಟ್ಟು ಬೇರೆಲ್ಲಿಯೂ ಅಸ್ಥಿಪಂಜರ ದೊರೆತಿಲ್ಲ.
15 ದಿನಗಳ ಕಾಲ ಎಡಬಿಡದೆ ಸುರಿಯುತ್ತಿರುವಂತ ಮಳೆಯ ನಡುವೆಯೂ ಎಸ್ಐಟಿ ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಧರ್ಮಸ್ಥಳದ ನೇತ್ರಾವತಿ ತಟದಲ್ಲಿ ನಡೆಸಿದ್ದರು. ಮೂಳೆಗಳು ಸಿಗದೇ ಉತ್ಖನನ ಕಾರ್ಯವನ್ನು ತಾತ್ಕಾಲಿಕವಾಗಿ ಎಸ್ಐಟಿ ಅಂತ್ಯಗೊಳಿಸಿದೆ. ಆದರೇ ದೂರುದಾರ ಮಾತ್ರ ಇನ್ನೂ 13 ಪಾಯಿಂಟ್ ತೋರಿಸುವೆ, ಅಲ್ಲೂ ಉತ್ಖನನ ಮಾಡುವಂತೆ ಎಸ್ಐಟಿ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಹೀಗಾಗಿ ಎಸ್ಐಟಿ ಸತತ 4 ಗಂಟೆಗಳ ಕಾಲ ಗ್ರಿಲ್ ನಡೆಸಿ, ಆತನ ಹಿಂದಿರುವಂತ ವ್ಯಕ್ತಿಗಳ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಆತ ನೀಡಿರುವ ದೂರು ಸುಳ್ಳು ಎನ್ನುವಂತ ನಿರ್ಧಾರಕ್ಕೆ ಎಸ್ಐಟಿ ಅಧಿಕಾರಿಗಳು ಬಂದಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಆತನನ್ನೇ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪ್ಲಾನ್ ಅನ್ನು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಆತನ ಹಿಂದೆ ಯಾರೆಲ್ಲ ಇದ್ದಾರೆ ಅವರಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಧರ್ಮಸ್ಥಳದ ಕುರಿತ ನಿರಂತರ ಅಪಪ್ರಚಾರಕ್ಕೆ ಬಿವೈ ವಿಜಯೇಂದ್ರ ತೀವ್ರ ಆಕ್ಷೇಪ: ಸಿಎಂ ಜನತೆ ಕ್ಷಮೆಗೆ ಒತ್ತಾಯ