ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ನೂರಾರು ಶವ ಹೂತ ಪ್ರಕರಣಕ್ಕೆ ಹೊಸ ದೂರುದಾರ ಎಂಟ್ರಿಯಾಗಿದ್ದು, ಮಹೇಶ್ ಶೆಟ್ಟಿ ತಿಮರೋಡಿಯೇ ಅಕ್ರಮವಾಗಿ ಶವ ಹೂತಿರುವ ಆರೋಪ ಮಾಡಿದ್ದಾರೆ. ಅಲ್ಲದೇ ಅವರ ವಿರುದ್ಧ ಎಸ್ಐಟಿಗೆ ದೂರು ನೀಡಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದೆ. ಹೊಸ ದೂರುದಾರನೊಬ್ಬ ಮಹೇಶ್ ಶೆಟ್ಟಿ ತಿಮರೋಡಿಯೇ ಅಕ್ರಮವಾಗಿ ಶವ ಹೂತಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಅಕ್ರಮವಾಗಿ ಶವ ಹೂತ ಬಗ್ಗೆ ಎಸ್ಐಟಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಉಜಿರೆ ನಿವಾಸಿ ಭಾಸ್ಕರ್ ನಾಯ್ಕ್ ಎಂಬುವರು ಬೆಳ್ತಂಗಡಿ ಎಸ್ಐಟಿ ಪೊಲೀಸ್ ಠಾಣೆಗೆ ತೆರಳಿ ಹೊಸ ದೂರು ಸಲ್ಲಿಸಿದ್ದಾರೆ. 2018ರಲ್ಲಿ ಉಜಿರೆಯಲ್ಲಿ ಬಿಲ್ಲರೋಡಿ ಎಂಬಲ್ಲಿ ಶವ ಹೂತ ಆರೋಪ ಮಾಡಿದ್ದಾರೆ. ಸೋಂಪ ಯಾನೆ ಬಾಲಕೃಷ್ಣಗೌಡ ಎಂಬುವರ ಶವ ಹೂತ ಬಗ್ಗೆ ದೂರಿನಲ್ಲಿ ಆರೋಪಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಅವರು ಕೊಲೆ ಮಾಡಿ ಶವ ಹೂತಿರುವ ಬಗ್ಗೆ ಸಂಶಯ ವ್ಯಕ್ತ ಪಡಿಸಿದ್ದು, ಜೆಸಿಬಿ ಮುಖಾಂತರ ಮಣ್ಣು ಮುಚ್ಚಿದ್ದಾರೆ. ಸೂಕ್ಷ್ಮ ಸಾಕ್ಷ್ಯಗಳನ್ನ ತನಿಖೆ ವೇಳೆ ಒದಗಿಸುತ್ತೇನೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಎಸ್ಐಟಿಗೆ ದೂರುದಾರ ಆಗ್ರಹಿಸಿದ್ದಾರೆ.
ಮೇಲ್ಮನೆಯಲ್ಲೂ ಬಾಲ್ಯ ವಿವಾಹ ನಿಷೇಧ, ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಪಾಸ್
ಸಾಗರ, ಹೊಸನಗರದಲ್ಲಿ ಅಭಿವೃದ್ಧಿ ಪರ್ವಕ್ಕೆ ‘ಶಾಸಕ ಗೋಪಾಲಕೃಷ್ಣ ಬೇಳೂರು’ ನಾಂದಿ: 1 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ