ಬೆಂಗಳೂರು: ನಗರದ ಖಾಲಿ ನಿವೇಶನ ಮಾಲೀಕರಿಗೆ ಬಿಗ್ ಶಾಕ್ ಎನ್ನುವಂತೆ ಸ್ವಚ್ಥತೆಯನ್ನು ಕಾಪಾಡದೇ ಇರುವಂತವರಿಗೆ ಆಸ್ತಿ ತೆರಿಗೆಯ ಭಾಗಾವಗಿ ದಂಡ ಮತ್ತು ವಿಲೇವಾರಿಗೆ ತಲುವಂತ ವೆಚ್ಚವನ್ನು ವಸೂಲಿ ಮಾಡುವಂತೆ ಬಿಬಿಎಂಪಿ ಆದೇಶಿಸಿದೆ.
ಈ ಕುರಿತಂತೆ ಬಿಬಿಎಂಪಿಯ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದು, ಖಾಲಿ ಇರುವ ತೆರೆದ ಸ್ಥಳಗಳಿಂದ/ಖಾಲಿ ನಿವೇಶನಗಳಿಂದ ತ್ಯಾಜ್ಯ ವಿಲೆವಾರಿಗಾಗಿ ಮಾಲೀಕರಿಂದ ಆಸ್ತಿ ತೆರಿಗೆಯ ಭಾಗವಾಗಿ ದಂಡ ಮತ್ತು ವಿಲೇವಾರಿಗೆ ತಗುಲಿದ ವೆಚ್ಚ ಸಂಗ್ರಹಿಸುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಖಾಲಿ ಇರುವ ತೆರೆದ ಸ್ಥಳಗಳಿಂದ/ಖಾಲಿ ನಿವೇಶನಗಳಿಂದ ತ್ಯಾಜ್ಯ ವಿಲೆವಾರಿಗಾಗಿ ಮಾಲೀಕರಿಂದ ಆಸ್ತಿ ತೆರಿಗೆಯ ಭಾಗವಾಗಿ ದಂಡ ಮತ್ತು ವಿಲೇವಾರಿಗೆ ತಗುಲಿದ ವೆಚ್ಚ ಸಂಗ್ರಹಿಸುವ ಕುರಿತು ಘನತ್ಯಾಜ್ಯ ನಿರ್ವಹಣೆ ನಿಯಮಗಳು-2016, ಘನತ್ಯಾಜ್ಯ ನಿರ್ವಹಣೆ ಬೈ-ಲಾಸ್ 2020 ಮತ್ತು ಬಿಬಿಎಂಪಿ ಕಾಯಿದೆ 2020ರ ಅಡಿಯಲ್ಲಿ ಹೊಸ ಆದೇಶವನ್ನು ಹೊರಡಿಸಲಾಗಿರುತ್ತದೆ.
1. ವಲಯ ಕಛೇರಿಗಳು ಎಲ್ಲಾ ಖಾಲಿ ನಿವೇಶನಗಳು/ಪ್ಲಾಟ್ಗಳು/ಸ್ಥಳಗಳು ಮತ್ತು ಘನತ್ಯಾಜ್ಯ/ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ(C & D)ವನ್ನು ಸುರಿದು, ಅಹಿತಕರ ಅಥವಾ ಅನಾರೋಗ್ಯಕರ ಸ್ಥಿತಿ ಅಥವಾ ಯಾವುದೇ ದಪ್ಪ ಅಥವಾ ಹಾನಿಕಾರಕ ಸಸ್ಯವರ್ಗ, ಮರಗಳು ಅಥವಾ ಗಿಡಗಂಟಿಗಳಿಂದ ಆರೋಗ್ಯಕ್ಕೆ ಹಾನಿಕರ ಅಥವಾ ಆಕ್ರಮಣಕಾರಿ ಎಂದು ಗುರುತಿಸಲ್ಪಡುವ ಸಾರ್ವಜನಿಕ ಸ್ಥಳಗಳನ್ನು ಅಥವಾ ನೆರೆಹೊರೆಯವರಿಗೆ ತೊಂದರೆಯನ್ನುಂಟುಮಾಡುವ ಸ್ಥಳಗಳನ್ನು ಗುರುತಿಸುವುದು.
2. ನಿರ್ದಿಷ್ಟ ನಿಯಮಗಳ ಉಲ್ಲಂಘನೆಗೆ ಘನತ್ಯಾಜ್ಯ ನಿರ್ವಹಣಾ ಬೈ-ಲಾ ಶ್ಯೆಡೂಲ್-VII ಗಳಿಗೆ ಅನುಗುಣವಾಗಿ ದಂಡವನ್ನು ವಿಧಿಸುವುದು.
3. ಖಾಲಿ ನಿವೇಶನದಲ್ಲಿನ ತ್ಯಾಜ್ಯವನ್ನು ತೆಗೆದುಹಾಕಲು ಅಥವಾ ತೆರವುಗೊಳಿಸಲು 07 ದಿನಗಳ ನಿರ್ದಿಷ್ಟ ಅವಧಿಯೊಂದಿಗೆ ಸೂಚನೆಯನ್ನು ನೀಡುವುದು.
4. ವ್ಯಕ್ತಿ/ಮಾಲೀಕರು ನಿರ್ದೇಶನಗಳನ್ನು ಪಾಲಿಸಲು ವಿಫಲರಾದರೆ, ನಂತರ ಪಾಲಿಕೆಯಿಂದ ಸ್ಥಳವನ್ನು ತೆರವುಗೊಳಿಸಲು ಕ್ರಮವನ್ನು ಪ್ರಾರಂಭಿಸುವುದು ಮತ್ತು ತ್ಯಾಜ್ಯವನ್ನು ತೆರವುಗೊಳಿಸಲು/ತೆಗೆದುಹಾಕಲು ಮಾಡಿದ ವೆಚ್ಚವನ್ನು ಮತ್ತು ದಂಡವನ್ನು ಪಾವತಿಸಲು ಸೂಚಿಸುವ ಸೂಚನೆಯ(ಆಸ್ತಿ ತೆರಿಗೆಯ ಸೂಚನೆಯಲ್ಲಿಯೇ ಪ್ರತ್ಯೇಕ ಕೋಷ್ಠಕದಲ್ಲಿ) (07 ದಿನಗಳ ಕಾಲಾವಧಿಯೊಂದಿಗೆ) ನೀಡುವುದು.
5. ದಂಡ ಮತ್ತು ವೆಚ್ಚವನ್ನು ಆಸ್ತಿ ತೆರಿಗೆಯ ಪುಸ್ತಕಗಳಲ್ಲಿ ನಮೂದಿಸಬೇಕು ಮತ್ತು ಆಸ್ತಿ ತೆರಿಗೆಯ ರಶೀದಿಯಲ್ಲಿ ಪ್ರತ್ಯೇಕ ಕೋಷ್ಠಕದಲ್ಲಿ ನಮೂದಿಸುವ ಮೂಲಕ ಆಸ್ತಿ ತೆರಿಗೆ ಸಂಗ್ರಹಣೆಯೊಂದಿಗೆ ಬಾಕಿಯಾಗಿ ಸಂಗ್ರಹಿಸುವುದು.
6. ನಿಗದಿತ ಅವಧಿಯಲ್ಲಿ ಪಾವತಿಸಲು ವಿಫಲವಾದಲ್ಲಿ ವಲಯ ಆಯುಕ್ತರುರವರು ಸೂಕ್ತ ಅನ್ವಯಿತ ಬಡ್ಡಿಯನ್ನು ವಿಧಿಸುವುದು.
ಶಿವಮೊಗ್ಗ: ಆ.9ರಿಂದ 11ರವರೆಗೆ ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
BREAKING: ನನ್ನ ವಿರುದ್ಧದ ಆರೋಪ ಸಾಬೀತು ಪಡಿಸಿದ್ರೇ ‘ರಾಜಕೀಯ ನಿವೃತ್ತಿ’: ಶಾಸಕ ಬೇಳೂರು ಗೋಪಾಲಕೃಷ್ಣ ಸವಾಲ್
ಆ.22ರಿಂದ ಬೆಂಗಳೂರಲ್ಲಿ ಅತಿದೊಡ್ಡ ಕೃಷಿ ಮತ್ತು ಆಹಾರ ಪ್ರದರ್ಶನ ಮೇಳ | AgriTech India 2024