ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸಿದಂತ ವಾಹನ ಸವಾರರಿಗೆ ಬಿಗ್ ಶಾಕ್ ನೀಡಲಾಗಿದೆ. ಪೊಲೀಸರಿಂದ 6ಕ್ಕೂ ಹೆಚ್ಚು ವಾಹನಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಈ ಸಂಬಂಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದ್ದು, ದಿನಾಂಕ 10-11-2024ರಂದು ಸಂಜೆ ಸುಮಾರು 5.54ಕ್ಕೆ ಸಾಗರ ಸರ್ಕಲ್ ಹತ್ತಿರ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದಂತ ಕೆಎ 15, ಎನ್ 2093 ಕಾರು ಮಾಲೀಕರಿಗೆ ಸಾರ್ವಜನಿಕರ ಸುಗಮ ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದ್ದ ಕಾರಣ ನೋಟಿಸ್ ನೀಡಲಾಗಿದೆ.
ಇನ್ನೂ ನೋಟಿಸ್ ತಲುಪಿದ ಕೂಡಲೇ ಕಡ್ಡಾಯವಾಗಿ ವಾಹನ ಮತ್ತು ದಾಖಲಾತಿಗಳೊಂದಿಗೆ ಸಾಗರ ಪೇಟೆ ಠಾಣೆಗೆ ಹಾಜರಾಗಬೇಕು. ಇಲ್ಲವಾದಲ್ಲಿ 179, 201 ಐಎಂವಿ ಕಾಯ್ದೆ ಹಾಗೂ ಕೆಪಿ ಕಾಯ್ದೆ 1963ರ ರೀತಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ನಿವೇದಿಸಿಕೊಳ್ಳಲಾಗುವುದಾಗಿ ತಿಳಿಸಲಾಗಿದೆ.
ಈ ವಾಹನದ ಮಾಲೀಕರಿಗೆ ಅಷ್ಟೇ ಅಲ್ಲದೇ ಜೆಸಿ ರಸ್ತೆಯ ಸಾಗರ ಸರ್ಕಲ್ ಬಳಿಯಲ್ಲಿನ ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿದಂತ ಕೆಎ17, ಎನ್ 0354 ಮಾಲೀಕರಿಗೆ, ಕೆಎ 28, ಎಂಎ 4800 ಕಾರು ಮಾಲೀಕರಿಗೆ, ಕೆಎ 20, ಎನ್ 2692 ಕಾರು ಮಾಲೀಕರಿಗೆ, ಕೆಎ 15, ಎನ್ 4541 ಕಾರು ಮಾಲೀಕರಿಗೆ ಹಾಗೂ ಕೆಎ 02, ಎಎಫ್ 0916 ಕಾರು ಮಾಲೀಕರಿಗೆ ಸಾಗರ ಪೇಟೆ ಠಾಣೆಯ ಪೊಲೀಸರು ನೋಟಿಸ್ ನೀಡಿದ್ದಾರೆ.
ಸಾಗರ ತಾಲ್ಲೂಕು ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್, ನಗರದಲ್ಲಿ ಸುಗಮ ವಾಹನಗಳ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ದಿನಂಪ್ರತಿ 20 ರಿಂದ 25 ವಾಹನಗಳ ಮಾಲೀಕರ ವಿರುದ್ಧ ನೋ ಪಾರ್ಕಿಂಗ್, ಏಕ ಮುಖ ಸಂಚಾರ, ಸಂಚಾರ ನಿಯಮ ಪಾಲಿಸದೇ ಇರೋದು ಸೇರಿದಂತೆ ಇತರೆ ಕಾರಣಗಳಿಗೆ ದಂಡವನ್ನು ವಿಧಿಸಲಾಗುತ್ತಿದೆ. ವಾಹನ ಮಾಲೀಕರು ದಯವಿಟ್ಟು ಸಂಚಾರ ನಿಯಮಗಳನ್ನು ಪಾಲಿಸಬೇಕು. ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸಬಾರದು. ಪಾರ್ಕಿಂಗ್ ಸ್ಥಳದಲ್ಲೇ ವಾಹನ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
ಜಸ್ಟೀಸ್ ಮೈಕಲ್ ಕುನ್ಹಾ ಅವರ ವೈಯಕ್ತಿಕ ನಿಂದನೆಗೆ ಖಂಡನೆ: ಪ್ರಲ್ಹಾದ್ ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು
ಚನ್ನಪಟ್ಟಣದಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಶಿವು ಯಾದವ್ ಪ್ರಚಾರ: ಕಾಡುಗೊಲ್ಲರ ಮತಯಾಚನೆ