ಬೆಂಗಳೂರು: ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡಲು ಬಿಬಿಎಂಪಿಯು ದೀರ್ಘಕಾಲದಿಂದ ಆಸ್ತಿ ತೆರಿಗೆಯನ್ನು ಪಾವತಿ ಮಾಡದ ಸುಸ್ತಿದಾರರ ಸ್ಥಿರ ಆಸ್ತಿಗಳನ್ನು ತುರ್ತು ಮಾರಾಟ ಮಾಡಲು ಹರಾಜ ಪ್ರಕ್ರಿಯೆಯನ್ನು ಆರಂಭಿಸುತ್ತಿದೆ.
ಈ ಆಸ್ತಿ ಮಾಲೀಕರುಗಳಿಗೆ ಕೆಳಗಿನ ಹಂತಗಳ ಪ್ರಕ್ರಿಯೆಯ ಹೊರತಾಗಿಯೂ ಬಾಕಿ ಆಸ್ತಿತೆರಿಗೆಯನ್ನು ಪಾವತಿಸಿರುವುದಿಲ್ಲ ಆದುದರಿಂದ ಈ ಹರಾಜು ಪ್ರಕ್ರಿಯೆಯನ್ನು ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 156 ಉಪಪ್ರಕರಣ 5 ರ ಅಡಿಯಲ್ಲಿ ಮಾಡಲಾಗುತ್ತಿದೆ.
(1) ಕಾರಣ ತೋರಿಸು ಸೂಚನೆ
(2) ಬೇಡಿಕೆ ನೋಟಿಸ್
(3) ಆಸ್ತಿಗಳ ಮುಟ್ಟುಗೋಲು
(4) ವಸತಿಯೇತರ ಆಸ್ತಿಗಳ ಸಂದರ್ಭದಲ್ಲಿ ಬೀಗಮುದ್ರೆ
ಆದುದರಿಂದ ಕೊನೆಯ ಹಂತವಾಗಿ ಆಸ್ತಿ ತೆರಿಗೆ ವಸೂಲಾತಿಗಾಗಿ ಈ ಆಸ್ತಿಗಳನ್ನು ಹರಾಜಿಗೆ ಇಡಲಾಗುತ್ತಿದೆ.
ಹರಾಜಿನಲ್ಲಿ ಸ್ವೀಕರಿಸಿದ ಯಾವುದೇ ಹೆಚ್ಚುವರಿ ಹಣವನ್ನು ಪಾಲಿಕೆಗೆ ಸಂದಾಯವಾಗಬೇಕಿರುವ ಪೂರ್ಣ ಬಾಕಿ ವಸೂಲಿ ಮಾಡಿದ ನಂತರ ಮಾಲೀಕರ ಬ್ಯಾಂಕ್ ಖಾತೆಗೆ ಜಮೆಮಾಡಲಾಗುವುದು.
ಪಾಲಿಕೆಯಲ್ಲಿನ 8-10 ಪ್ರಮುಖ ಸುಸ್ತಿದಾರರುಗಳನ್ನು ಪ್ರತಿ ವಲಯದಿಂದ ಸುಮಾರು 1-2 ಸುಸ್ತಿದಾರರುಗಳನ್ನು ಗುರುತಿಸಲಾಗಿದೆ ಮತ್ತು ಸ್ಥಿರ ಆಸ್ತಿಗಳ ಮಾರಾಟದ ಹರಾಜು ಮಾರಾಟ ದಿನಾಂಕವನ್ನು ನಿಗದಿಪಡಿಸುವ ನೋಟಿಸ್ಗಳನ್ನು ನೀಡಲಾಗಿದೆ, ಅವು ದೀರ್ಘಕಾಲದ ಆಸ್ತಿ ತೆರಿಗೆಯನ್ನು ಪಾವತಿ ಮಾಡದ ಪ್ರಕರಣಗಳಾಗಿವೆ.
ಇದು ಒಂದು ಆರಂಭವಾಗಿದ್ದು, ಪ್ರತಿ ವಾರ ಹೆಚ್ಚು ಹೆಚ್ಚು ಆಸ್ತಿಗಳನ್ನು (ಹೆಚ್ಚು ಬಾಕಿ ಉಳಿದಿರುವ) – ವಾಣಿಜ್ಯ/ಕೈಗಾರಿಕಾ ಮತ್ತು ವಸತಿ ಎರಡೂ ಸೇರಿದಂತೆ- ಆಸ್ತಿ ತೆರಿಗೆ ಬಾಕಿಗಳನ್ನು ವಸೂಲಿ ಮಾಡಲು ಹರಾಜಿಗೆ ಇಡಲಾಗುತ್ತದೆ.
ಮುಂದಿನ ವಾರ ಹೆಚ್ಚಿನ ಆಸ್ತಿಗಳನ್ನು ಹರಾಜು ಮಾರಾಟಕ್ಕೆ ಯೋಜಿಸಲಾಗಿದೆ.
ತೆರಿಗೆ ಬಾಕಿಗಳನ್ನು ಪಾವತಿಸದ ಸುಮಾರು 2 ಲಕ್ಷ ಆಸ್ತಿಗಳಿವೆ ಮತ್ತು ಬಿಬಿಎಂಪಿಯಿಂದ ಇದೇ ರೀತಿಯ ಬಲವಂತದ ವಸೂಲಾತಿ ಕ್ರಮವನ್ನು ತಪ್ಪಿಸಲು ತಕ್ಷಣವೇ ತಮ್ಮ ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸಲು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಮನವಿ ಮಾಡಿದ್ದಾರೆ.