ಬೆಂಗಳೂರು: ವಾಣಿಜ್ಯ ತೆರಿಗೆ ನೋಟಿಸ್ ವಿರೋಧಿಸಿ ಜುಲೈ.25ರಂದು ವರ್ತಕರು ಕರೆ ನೀಡಿದ್ದಂತ ಬಂದ್ ವಾಪಾಸ್ ಪಡೆಯಲಾಗಿದೆ ಎನ್ನಲಾಗುತ್ತಿತ್ತು. ಆದರೇ ಕರ್ನಾಟಕ ಕಾರ್ಮಿಕ ಪರಿಷತ್ ಅಧ್ಯಕ್ಷ ರವಿಶೆಟ್ಟಿ ಬೈಂದೂರು ಅವರು ಜುಲೈ.25ರಂದು ಕರೆ ನೀಡಿದ್ದಂತ ಬಂದ್ ವಾಪಾಸ್ಸು ಪಡೆದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಬಂದ್ ಗೆ ಕರೆ ಕೊಟ್ಟಿರುವವರನ್ನು ಬಿಟ್ಟು ಬೇರೆಯವರ ಜೊತೆಗೆ ಸಭೆ ನಡೆಸಿದ್ದಾರೆ. ಬೇರೆಯವರ ಜೊತೆ ಸಭೆ ನಡೆಸಿ ಬಂದ್ ಹಿಂಪಡೆದಿರುವುದಾಗಿ ಸಿಎಂ ಹೇಳಿದ್ದಾರೆ ಎಂದರು.
ಇದು ಸರಿಯಲ್ಲ. ನಾವು ಮುಷ್ಕರ ವಾಪಾಸ್ ಪಡೆದಿಲ್ಲ ಎಂಬುದಾಗಿ ಸಂಘದ ಅಧ್ಯಕ್ಷ ರವಿಶೆಟ್ಟಿ ಬೈಂದೂರು ತಿಳಿಸಿದರು.
ಜುಲೈ.25ರಂದು ಎಲ್ಲಾ ಕಾಂಡಿಮೆಂಟ್ಸ್, ಬೇಕರಿ, ಅಂಗಡಿಗಳು ಬಂದ್ ಆಗುತ್ತೆ. ಸಿಎಂ ಸಿದ್ಧರಾಮಯ್ಯ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ಕಿಡಿಕಾರಿದರು.
ಮತ್ತೊಂದೆಡೆ ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದೆ. ಇಂತಹ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟರೂ ತೆರಿಗೆ ವಸೂಲಿ ಮಾಡಲ್ಲ. ಆದರೇ ಯಾರು ಕಾಯ್ದೆಯಂತೆ ತೆರಿಗೆ ಕಟ್ಟಬೇಕೋ ಅವರು ಪಾವತಿಸಬೇಕು. ನೋಟಿಸ್ ನೀಡಿರುವ ಹಳೆಯ ತೆರಿಗೆ ಬಾಕಿಯನ್ನು ಮನ್ನಾ ಮಾಡುತ್ತೇವೆ. ವ್ಯಾಪಾರಿಗಳಿಂದ ಹಳೆಯ ತೆರಿಗೆ ಬಾಕಿಯನ್ನು ವಸೂಲಿ ಮಾಡುವುದಿಲ್ಲ. ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್ಟಿ ನೋಂದಣಿ ಮಾಡಬೇಕು ಎಂಬುದಾಗಿ ಗೃಹಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟ ಪಡಿಸಿದ್ದಾರೆ.