ಬೆಂಗಳೂರು: ರಾಜ್ಯದ ಬಹುಮಹಡಿ ಕಟ್ಟದ ಮಾಲೀಕರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಇದೀಗ ಬಹುಮಹಡಿ ಕಟ್ಟಡಗಳಿಗೆ ಶೇ.1% ಸೆಸ್ ವಿಧಿಸುವಂತ ತೀರ್ಮಾನವನ್ನು ಕೈಗೊಂಡಿದೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಉಂಟಾದಂತ ಕಾಲ್ತುಳಿತ ದುರಂತ ಪ್ರಕರಣ ಸಂಬಂಧ ಆರ್ ಸಿ ಬಿ, ಕೆ ಎಸ್ ಎ, ಡಿಎನ್ ಎ ವಿರುದ್ಧ ಕ್ರಿಮಿನಲ್ ಪ್ರಕರಣಕ್ಕೆ ಅಧಿಕೃತ ಒಪ್ಪಿಗೆ ನೀಡಲಾಗಿದೆ.
ಇನ್ನೂ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ರಾಜ್ಯದ ವಿವಿಧ ಜೈಲಿನಲ್ಲಿರುವಂತ ಖೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೆ ಒಪ್ಪಿಗೆ ನೀಡಲಾಗಿದೆ. ಈ ಮೂಲಕ ಹಲವು ಖೈದಿಗಳಿಗೆ ಸನ್ನಡತೆಯ ಆಧಾರದಲ್ಲಿ ಜೈಲಿನಿಂದ ಬಿಡುಗಡೆಯ ಭಾಗ್ಯ ಸಿಕ್ಕಂತೆ ಆಗಲಿದೆ.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಅಗ್ನಿಶಾಮಕ ದಳದ ಕಾಯ್ದೆಯ ಅನುಸಾರವಾಗಿ ಬಹುಮಹಡಿ ಕಟ್ಟಡಗಳಿಗೆ ಇನ್ಮುಂದೆ ಶೇ.1% ಸೆಸ್ ವಿಧಿಸಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ. ಇದಕ್ಕೆ ಸಂಪುಟದಲ್ಲಿ ಒಪ್ಪಿಗೆ ದೊರೆತ ಕಾರಣ ರಾಜ್ಯದ ಎಲ್ಲಾ ಬಹುಮಹಡಿ ಕಟ್ಟಡಗಳಿಗೆ 1% ಸೆಸ್ ಅನ್ನು ಸರ್ಕಾರ ವಿಧಿಸಲಿದೆ.
WATCH VIDEO: ಭೀಮನ ಅಮಾವಾಸ್ಯೆಯ ಪ್ರಯುಕ್ತ ಸಿಂಗದೂರು ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ: ಹರಿದು ಬಂದ ಭಕ್ತಸಾಗರ
`ಪ್ಯಾರಸಿಟಮಾಲ್’ ಬಳಸಿ ಬಟ್ಟೆಗಳ ಕಲೆಗಳನ್ನು ತೆಗೆಯಬಹುದು : ವಿಡಿಯೋ ವೈರಲ್ | WATCH VIDEO