ಬೆಂಗಳೂರು: ರಾಜ್ಯದಲ್ಲಿರುವಂತ ಶಿಕ್ಷಣ ಕಲ್ಯಾಣ ನಿಧಿಯ ವಸತಿ ಕೊಠಡಿಗಳ ಬಾಡಿಗೆ ದರವನ್ನು ಪರಿಷ್ಕರಿಸಿ ಆದೇಶಿಸಲಾಗಿದೆ. ಈ ಮೂಲಕ ಶಿಕ್ಷಣ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ, ಇತರೆ ಇಲಾಖೆಯವರಿಗೆ ಬಿಗ್ ಶಾಕ್ ಅನ್ನು ನೀಡಲಾಗಿದೆ.
ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಹಾಗೂ ಶಿಕ್ಷಣ ಕಲ್ಯಾಣ ನಿಧಿಯ ಕಾರ್ಯದರ್ಶಿ, ಖಜಾಂಚಿಗಳು ಜ್ಞಾಪನ ಪತ್ರ ಹೊರಡಿಸಿದ್ದಾರೆ. ಅದರಲ್ಲಿ ಶಿಕ್ಷಕರ ಕಲ್ಯಾಣ ನಿಧಿಯ ಸಭಾಂಗಣ, ವಸತಿ ಕೊಠಡಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿದ್ದು, ದಿನಾಂಕ 10-10-2024ರಂದು ನಡೆದ ರಾಜ್ಯ ಸಮಿತಿ ಸಭೆಯ ತೀರ್ಮಾನದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಲಿ ಇರುವ ಬಾಡಿಗೆ ದರಗಳನ್ನು ಪರಿಷ್ಕರಿಸಿ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
ಹೀಗಿದೆ ಪರಿಷ್ಕೃತ ದರಪಟ್ಟಿ
- ಸಭಾಂಗಣ – ವಿದ್ಯಾರ್ಥಿಗಳ, ಶಿಕ್ಷಕರ ನೋಂದಾಯಿತ ಸಂಘಗಳಿಗೆ, ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ರೂ.15000 ಇದ್ದಂತ ದರವನ್ನು ರೂ.20000 ಹಾಗೂ ಜಿಎಸ್ಟಿಗೆ ಹೆಚ್ಚಿಸಲಾಗಿದೆ.
- ಇನ್ನೂ ಸಭಾಂಗಣವನ್ನು ಇತರೆ ಇಲಾಖೆಯ ಕಾರ್ಯಕ್ರಮಗಳಿಗೆ, ಖಾಸಗಿ ಸಭೆ ಸಮಾರಂಭಗಳಿಗೆ ನಿಗದಿ ಪಡಿಸಿದ್ದಂತ ರೂ.62000 ದರವನ್ನು ಹಾಗೆಯೇ ಮುಂದುವರೆಸಲಾಗಿದೆ.
- ವಸತಿ ಕೊಠಡಿ 2 ಹಾಸಿಗೆಗಳ ಬಾಡಿಗೆ ದರವನ್ನು ಶಿಕ್ಷಕರಿಗೆ ಹಾಗೂ ಇಲಾಖಾಧಿಕಾರಿಗಳಿಗೆ ರೂ.200 ಇದ್ದದ್ದು, ರೂ.400ಕ್ಕೆ ಹೆಚ್ಚಿಸಲಾಗಿದೆ. ಇತರೆ ಇಲಾಖೆಯವರಿಗೆ ರೂ.400 ಇದ್ದ ದರವನ್ನು ರೂ.500ಕ್ಕೆ ಏರಿಸಲಾಗಿದೆ.
- ವಸತಿ ಕೊಠಡಿಯ 3 ಹಾಸಿಗೆಗಳ ಬಾಡಿಗೆ ದರವನ್ನು ಶಿಕ್ಷಕರಿಗೆ ಹಾಗೂ ಇಲಾಖಾಧಿಕಾರಿ, ಸಿಬ್ಬಂದಿಗಳಿಗೆ ಈ ಹಿಂದೆ ರೂ.300 ನಿಗದಿ ಪಡಿಸಲಾಗಿತ್ತು. ಈ ದರವನ್ನು ರೂ.600ಕ್ಕೆ ಹೆಚ್ಚಿಸಲಾಗಿದೆ. ಇತರೆ ಇಲಾಖೆಯವರಿಗೆ ರೂ.650 ಇದ್ದ ದರವನ್ನು ರೂ.800ಕ್ಕೆ ಪರಿಷ್ಕರಿಸಲಾಗಿದೆ.
- 4 ಹಾಸಿಗೆಗಳ ವಸತಿ ಕೊಠಡಿ ಬಾಡಿಗೆ ದರವನ್ನು ಇಲಾಖೆಯವರಿಗೆ ರೂ.350 ಇದ್ದದ್ದು ರೂ.800ಕ್ಕೆ, ಇತರರಿಗೆ ರೂ.800 ಇದ್ದದ್ದು ರೂ.1000ಕ್ಕೆ ಹೆಚ್ಚಳ ಮಾಡಲಾಗಿದೆ.
- ಡಾರ್ಮಿಟರಿಗೆ ಶಿಕ್ಷಕರಿಗೆ ಹಾಗೂ ಇಲಾಖಾಧಿಕಾರಿ, ಸಿಬ್ಬಂದಿಗಳಿಗೆ ಒಬ್ಬರಿಗೆ ವಾಸ್ತವ್ಯಕ್ಕಾಗಿ ರೂ.75 ಇದ್ದ ದರವನ್ನು ರೂ.100ಕ್ಕೆ, ಇತರೆ ಇಲಾಖೆಯವರಿಗೆ ಒಬ್ಬರಿಗೆ ವಾಸ್ತವ್ಯಕ್ಕೆ ಇದ್ದ ದರವನ್ನು ರೂ.100ರಿಂದ 200ಕ್ಕೆ ಹೆಚ್ಚಿಸಲಾಗಿದೆ.
- ವಿಐಪಿ 2 ಹಾಸಿಗೆಗಳ ಕೊಠಡಿ ಬಾಡಿಗೆ ದರವನ್ನು ಶಿಕ್ಷಕರಿಗೆ ಹಾಗೂ ಇಲಾಖಾಧಿಕಾರಿ, ಸಿಬ್ಬಂದಿಗಳಿಗೆ ರೂ.1000, ಇತರೆ ಇಲಾಖೆಯವರಿಗೆ ರೂ.1800ಕ್ಕೆ ಪರಿಷ್ಕರಿಸಿ ಆದೇಶಿಸಲಾಗಿದೆ.
ನಾನೂ ಈ ರಾಜ್ಯದ ಸಿಎಂ ಆಗಬೇಕು, ವಿದ್ಯಾರ್ಥಿಗಳಿಗೂ ಫ್ರೀ ಬಸ್ ಕೊಡಿ ಅಂತ ಅಂದವರಿಗೆ DKS ಹೇಳಿದ್ದೇನು..?