ನವದೆಹಲಿ: ಮೇಕೆದಾಟು ಯೋಜನೆಯ ಪ್ರಸ್ತಾವವನ್ನು ಕಾವೇರಿ ಜಲ ಆಯೋಗಕ್ಕೆ ಹಿಂತಿರುಗಿಸುವ ಅಭಿಪ್ರಾಯವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸದ್ಯಸರು ವಾಪಸ್ಸು ಕಳುಹಿಸಲು ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ನವದೆಹಲಿಯಲ್ಲಿ ಗುರುವಾರ ನಡೆದ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕವು ಸಭೆಯ ಕಾರ್ಯಸೂಚಿ ಮುಂದೂಡದೆ ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿತು. ಆದರೆ ಯೋಜನೆ ಕುರಿತ ಚರ್ಚೆಗೆ ತಮಿಳುನಾಡು, ಪುದುಚೇರಿ ಆಕ್ಷೇಪಿಸಿದವು ಎನ್ನಲಾಗಿದೆ.
ಈ ನಡುವೆ ಯೋಜನಾ ವರದಿಯ ತಾಂತ್ರಿಕ ಪರಿಶೀಲನೆಗೆ ಪ್ರಾಧಿಕಾರ ಸಮರ್ಥವಾಗಿಲ್ಲ. ಕೇಂದ್ರ ಜಲ ಆಯೋಗ ಸಕ್ಷಮ ಪ್ರಾಧಿಕಾರ. ಹಾಗಾಗಿ, ಹೆಚ್ಚಿನ ಪರಾಮರ್ಶೆಗಾಗಿ ಮೇಕೆದಾಟು ಯೋಜನೆಯ ಪ್ರಸ್ತಾವನೆಯನ್ನು ಆಯೋಗಕ್ಕೆ ಹಿಂತಿರುಗಿಸಬಹುದು ಎಂದು ಬಹುತೇಕ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.