ಬೆಂಗಳೂರು: ಪ್ರಾಥಮಿಕ ಶಾಲಾ ( Primary School ) ಮುಖ್ಯ ಶಿಕ್ಷಕರ ಹುದ್ದೆಯ ಪ್ರಭಾರ ವಹಿಸುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಗೆ, ಪ್ರಭಾರ ಭತ್ಯೆಯಿಲ್ಲ ಎಂಬುದಾಗಿ ರಾಜ್ಯ ಸರ್ಕಾರವು ಶಿಕ್ಷಣ ಇಲಾಖೆ ( Education Department )ಗೆ ಸ್ಪಷ್ಟ ಪಡಿಸಿದೆ. ಈ ಮೂಲಕ ಪ್ರಾಥಮಿಕ ಶಾಲೆಗಳಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದಂತವರಿಗೆ ( primary school in-charge headmasters ) ಬಿಗ್ ಶಾಕ್ ನೀಡಿದೆ.

Good News: ‘ಲಾಲ್ ಬಾಗ್’ನಿಂದ ನಗರದ ಯಾವ ಭಾಗಕ್ಕೆ ‘ಮೆಟ್ರೊ ರೈಲಿ’ನಲ್ಲಿ ಹೋದ್ರು ರೂ.30: ಆ.13ರಿಂದ 15ರವರೆಗೆ ರಿಯಾಯಿತಿ

ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

BIG NEWS: ಹೇ.. ಬಾಯಿ ಮುಚ್ಚಿಕೊಂಡು ಇರು.! ಇಲ್ಲ ಅಂದ್ರೆ ನಿನ್ನ ಎಲ್ಲಾ ಕತೆ ಬಿಚ್ಚಿಡುವೆ: ಸಚಿವ ಸುಧಾಕರ್‌ಗೆ ಟಗರು ಖಡಕ್ ಎಚ್ಚರಿಕೆ.!

ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆಯ ಪ್ರಭಾರವಹಿಸುವ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ಪ್ರಭಾರ ಭತ್ಯೆ ಮಂಜೂರಿಸುವ ಕುರಿತಂತೆ, ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಯು 400ಕ್ಕೂ ಮೀರಿದ್ದಲ್ಲಿ ಮಾತ್ರ ಮುಖ್ಯ ಶಿಕ್ಷಕರ ಹುದ್ದೆಯ ಮಂಜೂರಾತಿಗೆ ಅವಕಾಶವಿದ್ದು, 400ಕ್ಕಿಂತ ಕಡಿಮೆ ಇದ್ದಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ಒಬ್ಬ ಸಹ ಶಿಕ್ಷಕರನ್ನು ಮುಖ್ಯ ಶಿಕ್ಷಕರೆಂದು ಪರಿಗಣಿಸಲಾಗುತ್ತದೆ ಹೊರತು, ಮುಖ್ಯ ಶಿಕ್ಷಕರ ಹುದ್ದೆಯನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

BIGG NEWS : ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ : ಕಾಂಗ್ರೆಸ್ ಗೆ ತಿರುಗೇಟು ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಈ ಹಿನ್ನಲೆಯಲ್ಲಿ ಮಂಜೂರಾದ ಹುದ್ದೆಯಲ್ಲಿ ಪ್ರಭಾರವಿರಿಸಿದ್ದಲ್ಲಿ ಮಾತ್ರವೇ ಕರ್ನಾಟಕ ನಾಗರೀಕ ಸೇವಾ ನಿಯಮ 68ರ ಅನ್ವಯ ಪ್ರಭಾರ ಭತ್ಯೆ ನೀಡಲು ಅವಕಾಶವಿದೆ. ಇದರ ಹೊರತಾಗಿ ಮಂಜೂರಾಗದ ಹುದ್ದೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದಂತ ಸಹ ಶಿಕ್ಷಕರಿಗೆ ನಿಯಮ 68ರಡಿಯಲ್ಲಿ ಪ್ರಭಾರ ಭತ್ಯೆ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂಬುದಾಗಿ ತಿಳಿಸಿದ್ದಾರೆ.

Share.
Exit mobile version