ರಾಯಚೂರು: ಮದ್ಯದ ಬೆಲೆ ಏರಿಕೆ ಮಾಡುವುದರಿಂದ ಕುಡುಕರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸಚಿವ ತಿಮ್ಮಾಪುರ ಹೇಳಿದ್ದಾರೆ.
ಅವರು ಮುಂಬರುವ ರಾಜ್ಯ ಬಜೆಟ್ನಲ್ಲಿ ಮದ್ಯದ ಬೆಲೆ ಏರಿಕೆ ವಿಚಾರವಾಗಿ ಸಿಂಧನೂರು ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ ಸದ್ಯ ಹೊಸ ಮದ್ಯದ ಅಂಗಡಿಗಳಿಗೆ ಅನುಮತಿ ನೀಡುವುದಿಲ್ಲ. ತಮಿಳುನಾಡು, ಆಂಧ್ರ ಪ್ರದೇಶದ ಮದ್ಯಕ್ಕಿಂತ ನಮ್ಮ ಮದ್ಯ ಉತ್ತಮ ಗುಣಮಟ್ಟದಿಂದ ಕೂಡಿದೆ. ಕಳಪೆ ಗುಣಮಟ್ಟದ ಮದ್ಯ ಮಾರಾಟದ ಬಗ್ಗೆ ಗಮನಕ್ಕೆ ಬಂದರೆ ಪ್ರಕರಣ ದಾಖಲಿಸಲಾಗುತ್ತಿದೆ ಅಂತ ಹೇಳಿದರು.
ಇನ್ನೂ ಹಿಂದುಗಳೆಲ್ಲ ನಾವೆಲ್ಲ ಒಂದು ಅಂತ ಹೇಳುವುದು ಬಿಜೆಪಿಗರಿಗೆ ಅಧಿಕಾರ ತರುವುದಕ್ಕೆ ಮಾತ್ರ, ಎಲೆಕ್ಷನ್ ಮುಗಿದ ಮೇಲೆ ಮತದಾರ ಎಲ್ಲಿದ್ದಾನೋ ಅಲ್ಲೆ ಇರ್ತಾನೆ ಎಂದು ಹೇಳಿದರು. ಇದೇ ವೇಳೇ ಅವರು ಮಾತನಾಡಿ, ಮಂಡ್ಯ ಕೆರಗೋಡು ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಚುನಾವಣೆಗಳು ಬಂದಾಗ ಒಂದು ಪಕ್ಷ ಇಂತಹ ಕೋಮುವಾದಕ್ಕೆ ಉದ್ದೇಶಪೂರಕವಾಗಿ ಉತ್ತೇಜನ ಕೊಡುತ್ತದೆ ಅಂತ ಹೇಳಿದರು.