ಬೆಂಗಳೂರು : ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದೆ. ಕೇವಲ ಹಾಲು ಮಾತ್ರವಲ್ಲ, ಮದ್ಯದ ದರವನ್ನೂ ಸಹ ಏರಿಕೆ ಮಾಡಿದೆ. ಜುಲೈ 1ರಿಂದ ಈ ದರ ಏರಿಕೆ ಜಾರಿಗೆ ಬರಲಿದ್ದು, ಮದ್ಯದ ದರ 4-5 ರೂ. ಹೆಚ್ಚಳ ಸಾಧ್ಯತೆಯಿದೆ.
ಉಚಿತ ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲಗಳ ಸಂಗ್ರಹಕ್ಕಾಗಿ ತೀವ್ರ ಕಸರತ್ತು ನಡೆಸುತ್ತಿರುವ ಸರ್ಕಾರ, ದೇಶಿಯ ಮದ್ಯಗಳ ಬೆಲೆ ಏರಿಕೆಗೆ ನಿರ್ಧರಿಸಿದ್ದು, ಲಿಕ್ಕರ್ ದರ ಏರಿಕೆಗೆ ಅಬಕಾರಿ ಇಲಾಖೆ ಪ್ಲಾನ್ ಮಾಡಿದ್ದು, ಶೀಘ್ರವೇ ಅನುಮೋದನೆ ನೀಡಲು ಮುಂದಾಗಿದೆ.
ಅತಿ ಹೆಚ್ಚು ಮಾರಾಟವಾಗುವ ಲಿಕ್ಕರ್ ದರ ಏರಿಕೆ ಆಗುವ ಸಾಧ್ಯತೆ ಇದ್ದು, 80-120 ರೂ. ಇರುವ ಲಿಕ್ಕರ್ ಬೆಲೆ ಶೇ.2ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.