ಕೋಲಾರ: ಜಿಲ್ಲೆಯ ಕೋಚಿಮುಲ್ ಹಾಲು ಉತ್ಪಾದಕರಿಗೆ ಬಿಗ್ ಶಾಕ್ ಎನ್ನುವಂತೆ ಪ್ರತಿ ಲೀಟರ್ ಹಾಲಿನ ಮೇಲಿನ ದರವನ್ನು ರೂ.2 ಕಡಿತಗೊಳಿಸಿ ಆದೇಶಿಸಿದೆ. ಈ ಆದೇಶ ನಾಳೆಯಿಂದಲೇ ಜಾರಿಗೆ ಬರಲಿದೆ.
ಈ ಕುರಿತಂತೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಆದೇಶ ಹೊರಡಿಸಿದ್ದು, ಹಾಲು ಉತ್ಪಾದಕರಿಗೆ ನೀಡುವಂತ ಪ್ರತಿ ಲೀಟರ್ ಹಾಲಿನ ಮೇಲಿನದ ದರವನ್ನು 2 ರೂಪಾಯಿ ಕಡಿತಗೊಳಿಸಿರುವುದಾಗಿ ತಿಳಿಸಿದೆ.
ನಾಳೆಯಿಂದಲೇ ಈ ನೂತನ ದರದಂತೆ ಹಾಲು ಉತ್ಪಾದಕರಿಂದ ಹಾಲನ್ನು ಖರೀದಿ ಮಾಡಲಾಗುತ್ತದೆ. ನಾಳೆಯಿಂದ ಪ್ರತಿ ಲೀಟರ್ ಹಾಲಿಗೆ ಹಾಲು ಉತ್ಪಾದಕರಿಗೆ ರೂ.31.40 ನೀಡಲಾಗುತ್ತದೆ ಅಂತ ತಿಳಿಸಿದೆ.
ಅಂದಹಾಗೇ ಈ ಮೊದಲು ಕೋಚಿಮುಲ್ ನಿಂದ ಹಾಲು ಉತ್ಪಾದಕರಿಂದ ಪ್ರತಿ ಲೀಟರ್ ಹಾಲನ್ನು ರೂ.33.40ರಂತೆ ಖರೀದಿ ಮಾಡಲಾಗುತ್ತಿತ್ತು. ಈಗ ದಿಢೀರ್ ರೂ.2 ಕಡಿತ ಮಾಡಿದ್ದು, ನಾಳೆಯಿಂದ 31.40 ರೂ ಪ್ರತಿ ಲೀಟರ್ ಹಾಲಿನ ದರವಾಗಿದೆ.
ಜನವರಿಯಲ್ಲಿ ನಿತ್ಯ 9.65 ಲಕ್ಷ ಹಾಲು ಸಂಗ್ರಹವನ್ನು ಕೋಚಿಮುಲ್ ಮಾಡುತ್ತಿದೆ. ಆದ್ರೇ ಜೂನ್ ನಿಂದ ನಿತ್ಯ 12.37 ಲಕ್ಷ ಲೀಟರ್ ಗೆ ಏರಿಕೆಯಾಗಿದೆ. ಹಾಲಿನ ಶೇಖರಣೆ ಹೆಚ್ಚಳ, ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕೋಚಿಮುಲ್ ಹಾಲು ಉತ್ಪಾದಕರಿಂದ ಖರೀದಿಸುವಂತ ಹಾಲಿನ ಪ್ರತಿ ಲೀಟರ್ ದರವನ್ನು 2 ರೂ ಕಡಿತ ಮಾಡಿರುವುದಾಗಿ ತಿಳಿಸಿದೆ. ಹೀಗಾಗಿ ಕೋಚಿಮುಲ್ ಹಾಲು ಉತ್ಪಾದಕರಿಗೆ ಬರೆ ಎಳೆದಂತೆ ಆಗಿದೆ.
ಸಾರ್ವಜನಿಕರ ಗಮನಕ್ಕೆ: ನಾಳೆ ಮಂಡ್ಯದಲ್ಲಿ ಕೇಂದ್ರ ಸಚಿವ ‘HD ಕುಮಾರಸ್ವಾಮಿ ಜನತಾ ದರ್ಶನ’ | Janata Darshan
‘ಅಂಗನವಾಡಿ ಕಾರ್ಯಕರ್ತೆ’ಯರಿಗೆ ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ ಗುಡ್ ನ್ಯೂಸ್