ಬೆಂಗಳೂರು: ರಾಜ್ಯ ಸರ್ಕಾರದಿಂದ ಗುತ್ತಿಗೆ ಕಾಮಗಾರಿಯಲ್ಲಿ ನಡೆಯುತ್ತಿರೋ ಕಳಪೆ ಕಾಮಗಾರಿಯನ್ನು ತಡೆಯಲು ಮಹತ್ವದ ಕ್ರಮ ವಹಿಸಲಾಗಿದೆ. ಈವರೆಗಿನ ಗುತ್ತಿಗೆ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಮೂಲಕ ರಾಜ್ಯ ಸರ್ಕಾರದಿಂದ ಗುತ್ತಿಗೆದಾರರಿಗೆ ಬಿಗ್ ಶಾಕ್ ನೀಡಲಾಗಿದೆ. ಒಂದು ವೇಳೆ ನಿಯಮ ಪಾಲಿಸದೇ ಇದ್ದರೇ ಡಿಬಾರ್ ಮೆಂಟ್ ಮಾಡೋದಾಗಿ ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಲೋಕೋಪಯೋಗಿ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ವಿಜಯಕುಮಾರಿ ಕೆ.ಸಿ ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು 2000ರ ನಿಯಮ 26(ಎ)ರನ್ವಯ ಟೆಂಡರ್‌ದಾರ ಅಥವಾ ಗುತ್ತಿಗೆದಾರ ಅಥವಾ ಸರಬರಾಜುದಾರ ಅಥವಾ ಅವರ ಯಾವುದೇ ಉತ್ತರಾಧಿಕಾರಿಯನ್ನು ಡಿಬಾರ್ ಮಾಡುವ ಕುರಿತು ಸಂಗ್ರಹಣಾ ಸಂಸ್ಥೆಯ ಹಂತದಲ್ಲಿ ಡಿಬಾರ್‌ಮೆಂಟ್ ಸಮಿತಿಯನ್ನು ರಚಿಸುವ ಕುರಿತು ಉಲ್ಲೇಖಿತ ದಿನಾಂಕ:27.07.2022ರ ಸುತ್ತೋಲೆಯಲ್ಲಿ ಸೂಚನೆಗಳನ್ನು ನೀಡಲಾಗಿರುತ್ತದೆ. ಹಾಗೂ ಸಂಗ್ರಹಣಾ ಪ್ರಾಧಿಕಾರಗಳು ಆರ್ಥಿಕ ಇಲಾಖೆಯ ಅಧಿಸೂಚನೆ ಸಂಖ್ಯೆ: FD 884 Exp-12/2019, ದಿನಾಂಕ:07.05.2020 ರಲ್ಲಿ ಹೊರಡಿಸಿರುವ ಕೆಟಿಪಿಪಿ ನಿಯಮ 26A ರನ್ವಯ ಡಿಬಾರ್‌ಮೆಂಟ್ ಸಮಿತಿ ರಚಿಸಲು ಹಾಗೂ ಅದರಲ್ಲಿ ತಿಳಿಸಿರುವ ವಿಧಾನವನ್ನು ಅನುಸರಿಸಲು ಮತ್ತು ಡಿಬಾರ್‌ಮೆಂಟ್ ನಂತರ ನಿಯಮ 260 ರನ್ವಯ ಕ್ರಮವಹಿಸಲು ತಿಳಿಸಲಾಗಿರುತ್ತದೆ ಎಂದಿದ್ದಾರೆ.
ಈ ಸಂಬಂಧ ಸಂಗ್ರಹಣಾ ಪ್ರಾಧಿಕಾರಗಳ ಹಂತದಲ್ಲಿ ಗುತ್ತಿಗೆದಾರರನ್ನು ಯಾವ ಸಂದರ್ಭದಲ್ಲಿ ಡಿಬಾರ್ ಮಾಡಬೇಕೆನ್ನುವ ಕುರಿತು ಹೆಚ್ಚಿನ ಸ್ಪಷ್ಟನೆ ಅವಶ್ಯಕತೆ ಇರುವುದನ್ನು ಗಮನಿಸಲಾಗಿದೆ. ಈ ಹಿನ್ನಲೆಯಲ್ಲಿ ಸಂಗ್ರಹಣಾ ಪ್ರಾಧಿಕಾರಗಳು ತಮ್ಮ ಹಂತದಲ್ಲಿ ಕೆಳಕಂಡ ಸಂದರ್ಭಗಳಲ್ಲಿ ಲೋಕೋಪಯೋಗಿ ಇಲಾಖೆಯ ಟೆಂಡರ್‌ಗಳಲ್ಲಿ ಭಾಗವಹಿಸದಂತೆ 3 ವರ್ಷಗಳ ಅವಧಿಗೆ ಗುತ್ತಿಗೆದಾರರನ್ನು ಡಿಬಾರ್ ಮಾಡುವ ಕುರಿತು ನಿಯಮಾನುಸಾರ ಕ್ರಮ ವಹಿಸತಕ್ಕದ್ದು.
1. The contractor has executed bad quality work.
2. The Contractor has failed to complete the work within the stipulated period of time. 3. The contractor is a habitual litigant.
4. The contractor continuously refuses to pay Government dues without showing adequate reasons.
5. The Contractor or his partner or his representative has been convicted by a court of law for offences involving moral turpitude in relation to the business dealings;
6. The contractor either by himself or through his agents or his association with others conducts himself in a manner which in the opinion of the procurement entity is liable
to impede or affect prejudicially the progress of any Government work, or is guilty of misconduct in connection with the execution of Government work.
7. Misleading the procurement entity at any stage of procurement Activity with a fraudulent intention.
ಮೇಲ್ಕಂಡ ಸಂದರ್ಭಗಳು ಪುನರಾವರ್ತನೆಗೊಂಡು ಸಂಗ್ರಹಣಾ ಪ್ರಾಧಿಕಾರಗಳು ರಾಜ್ಯ ಮಟ್ಟದಲ್ಲಿ ಡಿಬಾರ್ ಮಾಡಬೇಕನ್ನುವ ಅಭಿಪ್ರಾಯವನ್ನು ಹೊಂದಿದಲ್ಲಿ ಹಾಗೂ “There are sufficient and strong reasons that the contractor or his employee has been guilty of criminal offences, corruption, integrity, honesty, submission of fraudulent solvency certificates or bank guarantees, etc.” ಸಂದರ್ಭದಲ್ಲಿ ಆರ್ಥಿಕ ಇಲಾಖೆಯ ಸುತ್ತೋಲೆ ಸಂಖ್ಯೆ: FD/54/Exp-12/2022 dtd:29.01.2022 ರಲ್ಲಿ ರಚಿಸಲಾಗಿರುವ ರಾಜ್ಯ ಮಟ್ಟದ ಡಿಬಾರ್‌ಮೆಂಟ್ ಸಮಿತಿಗೆ ಪುಸ್ತಾವನೆಯನ್ನು ಸಲ್ಲಿಸತಕ್ಕದ್ದು ಅಂತ ತಿಳಿಸಿದ್ದಾರೆ.
ಜೂ.3ರಂದು ವಿಧಾನ ಪರಿಷತ್ ಚುನಾವಣೆ: ಮತಬೇಟೆಗೆ ಇಳಿದ ‘ಶಾಸಕ ಬೇಳೂರು ಗೋಪಾಲಕೃಷ್ಣ’ | MLC Election
Alert : ʻಮೊಬೈಲ್ʼ ಬಳಕೆದಾರೇ ಗಮನಿಸಿ : ಈ ಕರೆಗಳನ್ನು ಸ್ವೀಕರಿಸದಂತೆ ಸರ್ಕಾರ ಎಚ್ಚರಿಕೆ