ಬೆಂಗಳೂರು : ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಇದೀಗ ಟೊಮೊಟೊ ಸೇರಿದಂತೆ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ.
ಈ ನಡುವೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಟೊಮೆಟೊ ಸೇರಿದಂತೆ ಕಾಯಿಪಲ್ಲೆ, ಹಸಿರುಪಲ್ಲೆಗಳ ದರಗಳು ಹೆಚ್ಚಳವಾಗುತ್ತಿದ್ದು, ಬೆಲೆ ಕೇಳಿಸಿಕೊಳ್ಳುವ ಗ್ರಾಹಕ ತಮ್ಮಹಣಕಾಸಿನ ಸ್ಥಿತಿಯನ್ನು ಎರಡು ಎರಡು ಬಾರಿ ಯೋಚನೆ ಮಾಡಿ ಕಾಯಿಪಲ್ಲೆ, ಹಸಿರುಪಲ್ಲೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ವಾರವಷ್ಟೆ ಕೆಜಿಗೆ 30-40 ರೂ.ಗೆ ದೊರೆಯುತ್ತಿದ್ದ ಟೊಮೆಟೊ, ಈಗ ಏಕಾಏಕಿ 70 ರೂ. ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದಿದ್ದೆ.
ಫಂಗಲ್ ಚಂಡಮಾರುತದ ಪರಿಣಾಮ ರಾಜ್ಯದ ಹಲವಡೆ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ತರಕಾರಿ ಸಂಪೂರ್ಣ ಹಾಳಾಗಿದ್ದು, ತರಕಾರಿ ಬೆಲೆ ಏರಿಕೆಗೆ ಕಾರಣ ಎನ್ನಲಾಗಿದೆ.
ಈ ಎಲ್ಲಾ ತರಕಾರಿ ಬೆಲೆಯಲ್ಲಿ ಏರಿಕೆ : ಬೆಳ್ಳುಳ್ಳಿ 400 ರೂ. ಇದ್ದರೆ ಈರುಳ್ಳಿ ಕೆಜಿಗೆ 80 ರೂ.ಗೆ ಮಾರಾಟವಾಗುತ್ತಿದೆ. ಕ್ಯಾರೆಟ್ ಕೆಜಿಗೆ 80 ರೂ. ನುಗ್ಗೆ ಕಾಯಿ 400-500 ರೂ ವರೆಗೆ ಮಾರಾಟವಾಗುತ್ತಿದೆ.