ಬೆಂಗಳೂರು : ಇಂದು ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು, ತೆಂಗಿನ ಕಾಯಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಮಾರುಕಟ್ಟೆಗಳಲ್ಲಿ ಕಬ್ಬಿನ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಕಳೆದ ಬಾರಿ 10 ಕಬ್ಬುಗಳ ಒಂದು ಕಟ್ಟು 400 ರೂ. ಇದ್ರೆ ಈ ಬಾರಿ 500 ರೂ.ಗೆ ತಲುಪಿದೆ.
ಇನ್ನು ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ತೆಂಗಿನ ಕಾಯಿ ಬೆಲೆ 50 ರಿಂದ 60 ರೂ.ವರೆಗೆ ತಲುಪಿದೆ. ಮಲ್ಲಿಗೆ ಕೆಜಿಗೆ 250 ರೂ. ಇದ್ರೆ, ಕಾಕಡ ಕಜಿಗೆ 230 ರೂ. ಇದೆ. ಗುಲಾಬಿ ಕೆಜಿಗೆ 160 ರೂ, ಸೇವಂತಿಗೆ ಕೆಜಿಗೆ 150-170 ರೂ. ಚೆಂಡು ಹೂವು 110 ರೂ.ಗೆ ಮಾರಾಟವಾಗುತ್ತಿದೆ.