ಬೆಂಗಳೂರು: ಬ್ರಿಟಿಷರ ಕಾಲದಲ್ಲಿ ಅರಣ್ಯ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಕಾಫಿ, ರಬ್ಬರ್ ಬೆಳೆಯಲು ಗುತ್ತಿಗೆ ಕೊಡಲಾಗಿತ್ತು. ಹೀಗೆ ಗುತ್ತಿಗೆ ನೀಡಲಾದ ಜಮೀನಿನಲ್ಲಿ ಶೇ.95ರಷ್ಟು ಭೂಮಿ ಈ ಮೂರು ಜಿಲ್ಲೆಗಳಲ್ಲಿಯೇ ಇದೆ. ಸಾಕಷ್ಟು ದೊಡ್ಡ ಕಂಪೆನಿಗಳು ಗುತ್ತಿಗೆ ಪಡೆದಿವೆ.
ಇದನ್ನು ವಶಕ್ಕೆ ಪಡೆಯಲು ಹಿಂದೊಮ್ಮೆ ನೋಟಿಸ್ ನೀಡಿದ್ದೆವು. ಆಗ ಕಂಪೆನಿಗಳು 999 ವರ್ಷಕ್ಕೆ ಈ ಜಮೀನು ಪಡೆದಿದ್ದಾಗಿ ವಾದಿಸಿದ್ದವು. ಆದರೆ, ನ್ಯಾಯಾಲಯ ಆ ಅವಧಿಯನ್ನು 99 ವರ್ಷಕ್ಕೆ ಇಳಿಸಿತು. ಈಗ ಆ ಅವಧಿಯೂ ಮುಗಿದಿದ್ದು, ಜಮೀನು ವಶಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಇನ್ನೂ ಕೇಂದ್ರದ ಬಿಜೆಪಿ ಸರ್ಕಾರವು ಜಾರಿಗೊಳಿಸಿರುವ ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ- 2020ಕ್ಕೆ ತಿದ್ದುಪಡಿ ತರಲಾಗುವುದು ಎಂದು ʼಪ್ರೊ.ಎಂಡಿಎನ್ ನೆನಪುʼ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.