ಬೆಂಗಳೂರು: ರಾಜ್ಯದ ಅನುದಾನಿತ ಪ್ರೌಢ ಶಾಲೆಯ ಶಿಕ್ಷಕರು ಕೂಡ ಓಪಿಎಸ್ ಜಾರಿಗಾಗಿ ಕಾಯುತ್ತಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಇಂತಹ ಶಿಕ್ಷಕರಿಗೆ ಬಿಗ್ ಶಾಕ್ ನೀಡಲಾಗಿದೆ. ಅದೇ ಓಪಿಎಸ್ ಜಾರಿಯಿಲ್ಲ ಅಂತ ಸ್ಪಷ್ಟ ಪಡಿಸಿದೆ. ಆ ಬಗ್ಗೆ ಮುಂದೆ ಓದಿ.
ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಪತ್ರವನ್ನು ಬರೆಯಲಾಗಿದೆ. ಅದರಲ್ಲಿ ದಿನಾಂಕ:01.04.2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಿಂದ ಅಥವಾ ನಂತರದಲ್ಲಿ ಸೇವೆಗೆ ಸೇರಿದ ನೌಕರರನ್ನು ಹಳಯ ಡಿಫೈನ್ ಪಿಂಚಿಣಿ ಸೌಲಭ್ಯಕ್ಕ ಒಳಪಡಿಸುವ ಸಂಬಂಧ ಸರ್ಕಾರದಿಂದ ಆದೇಶ ಹೊರಡಿಸಲಾಗಿರುತ್ತದೆ ಎಂದಿದ್ದಾರೆ.
ಈ ಕುರಿತು ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಇವರು ಈ ಕಛೇರಿಗೆ ಮನವಿ ಸಲ್ಲಿಸಿ ದಿನಾಂಕ:01.04.2006ರ ಪೂರ್ವದಲ್ಲಿ ಅನುದಾನಿತ ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿ ತದನಂತರ ಸರ್ಕಾರಿ ಪ್ರೌಢಶಾಲೆಗಳಿಗೆ ನಿಯಮಾನುಸಾರ ಸೇರ್ಪಡೆಗೊಂಡ ಶಿಕ್ಷಕರನ್ನು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಅನುಕೂಲ ಮಾಡಿಕೊಡಬೇಕಾಗಿ ಕೋರಿರುತ್ತಾರೆ ಅಂತ ಹೇಳಿದೆ.
ಈ ಬಗ್ಗೆ ಪರಿಶೀಲಿಸಲಾಗಿದ್ದು, ಸರ್ಕಾರದ ಆದೇಶದಲ್ಲಿ ಸದರಿ ಸೌಲಭ್ಯವು ಕೇವಲ ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗುವ ಕುರಿತು ಸ್ಪಷ್ಟ ಪಡಿಸಿರುವುದರಿಂದ ಹಾಗೂ ಅನುದಾನಿತ ಶಾಲೆಗಳಲ್ಲಿ 01-04-2006ರ ಪೂರ್ವದಲ್ಲಿ ಕರ್ತವ್ಯ ನಿರ್ವಹಿಸಿ ತದನಂತರ ಸರ್ಕಾರಿ ಪ್ರೌಢಶಾಲೆಗಳಲ್ಲಿ ನೇಮಕವಾದ ಶಿಕ್ಷಕರಿಗೆ ಅನ್ವಯವಾಗುವ ಕುರಿತು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವುದಿಲ್ಲವಾದ ಕಾರಣ ತಮ್ಮ ಮನವಿ ಪರಿಗಣಿಸಲು ಅವಕಾಶವಿರುವುದಿಲ್ಲವೆಂದು ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING : ಬೆಂಗಳೂರಲ್ಲಿ ಯುವತಿಯ ಭೀಕರ ಕೊಲೆ : ಪಿಜಿಗೆ ನುಗ್ಗಿ ಪ್ರಿಯತಮೆಯನ್ನೇ ಹತ್ಯೆಗೈದ ಯುವಕ!
ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ: ರಾಹುಲ್ ಗಾಂಧಿ ಕ್ಷಮೆ ಕೇಳುತ್ತಾರೆಯೇ ?ಬಿಜೆಪಿ ಪ್ರಶ್ನೆ