ಬೆಂಗಳೂರು: ವಾಹನ ಸವಾರರಿಗೆ ಬಿಗ್ ಶಾಕ್ ಎನ್ನುವಂತೆ ಇಂದು ಮಧ್ಯರಾತ್ರಿಯಿಂದ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಟೋಲ್ ದರ ಏರಿಕೆಯಾಗಲಿದೆ.
ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಾಹಿತಿ ನೀಡಲಾಗಿದ್ದು, ಸೆಪ್ಟೆಂಬರ್.1, 2025ರ ನಾಳೆಯಿಂದ ಜಾರಿಗೆ ಬರುವಂತೆ ಟೋಲ್ ದರವನ್ನು ಏರಿಕೆ ಮಾಡಲಾಗುತ್ತಿದೆ ಎಂಬುದಾಗಿ ತಿಳಿಸಿತ್ತು. ಅದರಂತೆ ನಾಳೆಯಿಂದ ಟೋಲ್ ದರ ಏರಿಕೆಯಾಗಲಿದೆ.
ಇಂದು ಮಧ್ಯರಾತ್ರಿಯಂದಲೇ ನೆಲಮಂಗಲ-ಹಾಸನ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್-75ರಲ್ಲಿ ಶೇ.3 ರಿಂದ 5ರಷ್ಟು ಟೋಲ್ ದರ ಏರಿಕೆಯಾಗಲಿದೆ. ಹೀಗಾಗಿ ಲಘು ವಾಹನಗಳಿಗೆ ರೂ.10 ರಿಂದ 15ರಷ್ಟು, ಭಾರೀ ವಾಹನಗಳಿಗೆ ರೂ.50 ರಿಂದ 100 ರೂಪಾಯಿಯಷ್ಟು ಟೋರ್ ದರ ಏರಿಕೆಯ ಬಿಸಿ ತಟ್ಟಲಿದೆ.
ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆಗೆ ಡಿ.ಕೆ ಶಿವಕುಮಾರ್ ಮುಂದಾಗಿದ್ದರು: ಶಾಸಕ ಯತ್ನಾಳ್ ಹೊಸ ಬಾಂಬ್
ಮಂಡ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಚಲುವರಾಯಸ್ವಾಮಿ ಪೊಲೀಸ್ ಸೂಚನೆ








