ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹಾಗೂ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದವರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸರ್ಕಾರ, ಸಾರ್ವಜನಿಕ ಸ್ವತ್ತಿನ ಹಾಗೂ ಕರೆ ಕುಂಟೆ, ಕಾಲುವೆ ಮತ್ತಿತರ ಸಾರ್ವಜನಿಕ ಹಿತಾಸಕ್ತಿಯುಳ್ಳ ಸ್ವತ್ತಿನಲ್ಲಿ ನಿರ್ಮಾಣ ಮಾಡಿರುವಂತ ಕಟ್ಟಡ ನೆಲ ಸಮಗೊಳಿಸಲು ಎಲ್ಲಾ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗಳಿಗೆ ಸೂಚಿಸಿದೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಉಲ್ಲೇಖಿತ (1)ರ ಟಿಪ್ಪಣಿಯೊಡನೆ ಲಗತ್ತಿಸಿರುವ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಉಲ್ಲೇಖ (2) ರಲ್ಲಿನ ತೀರ್ಪಿನಲ್ಲಿ, ಅನಧಿಕೃತವಾಗಿ ನಿರ್ಮಿಸುತ್ತಿರುವ ಹಾಗೂ ಕಟ್ಟಡ ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸಿ, ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಸರ್ಕಾರದ ಮತ್ತು ಸಾರ್ವಜನಿಕ ಸ್ವತ್ತಿನಲ್ಲಿ ನಿರ್ಮಿಸುತ್ತಿರುವ ನಿರ್ಮಿಸಿರುವ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಮುನ್ನ ಸ್ಥಳೀಯ ಪ್ರಾಧಿಕಾರಗಳು ನಿಯಮಾನುಸಾರ ಅನುಸರಿಸಬೇಕಾದ ಕಾರ್ಯವಿಧಾನಗಳ ಬಗ್ಗೆ ನಿರ್ದೇಶನಗಳನ್ನು ನೀಡಿರುವುದನ್ನು ಪ್ರಸ್ತಾಪಿಸಲಾಗಿರುತ್ತದೆ. ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸುವ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಾಜ್ಯ ಸರ್ಕಾರಗಳಿಗೆ ನೀಡಿರುವ ನಿರ್ದೇಶನಗಳನ್ನು ಸ್ಥಳೀಯ ಪ್ರಾಧಿಕಾರಗಳು ಮತ್ತು ಇಲಾಖೆಗಳು ಪಾಲಿಸಲು ಸೂಕ್ತ ನಿರ್ದೇಶನ ನೀಡುವಂತೆ ಸದರಿ ಆದೇಶದಲ್ಲಿ ಸರ್ಕಾರಕ್ಕೆ ಸೂಚಿಸಿರುತ್ತದೆ. ಆದುದರಿಂದ ಅಕ್ರಮ ಕಟ್ಟಡಗಳ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ಈ ಮೂಲಕ ನಿರ್ದೇಶನ ನೀಡಲಾಗಿದೆ. ಈ ಹಿಂದೆಯೇ ಸಹ ಪಂಚಾಯತಿಯ ಸ್ವತ್ತುಗಳ ಮೇಲಿನ ಅಕ್ರಮ ಕಟ್ಟಡ ಮತ್ತು ಚರಂಡಿ ಕಾಲುವೆಗಳ ಮೇಲಿನ ಅಡತಡೆಗಳನ್ನು ತೆರವುಗೊಳಿಸಲು ಈಗಾಗಲೇ ಉಲ್ಲೇಖ(3) ರಲ್ಲಿನ ನಿಯಮಗಳನ್ನು ಜಾರಿಗೊಳಿಸಲಾಗಿರುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಕಟ್ಟಡಗಳು ಅನುಮೋದಿತ ನಕಾಶೆಯನುಸಾರ ಕಟ್ಟಿರುವ ಬಗ್ಗೆ ಹಾಗೂ ಅದು ವಾಸ ಯೋಗ್ಯ ಎಂದು ದೃಢೀಕರಿಸುವ ಸಂಬಂಧ ಉಲ್ಲೇಖ (4) ರಲ್ಲಿನ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
2. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪುಕರಣ 64 ರಲ್ಲಿ ಕಟ್ಟಡ ನಿರ್ಮಾಣ ಹಾಗೂ ನಿಯಂತ್ರಣದ ಬಗ್ಗೆ ಉಪಬಂಧವಿರುತ್ತದೆ. ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ ಗೊತ್ತುಪಡಿಸಬಹುದಾದ ನಿಯಮಗಳಿಗೊಳಪಟ್ಟು ಸ್ಥಳೀಯ ಗ್ರಾಮ ಪಂಚಾಯತಿಯಿಂದ ಪರವಾನಿಗೆ ಪಡೆಯಬೇಕಾಗಿರುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಟ್ಟಡಗಳನ್ನು ನಿರ್ಮಿಸಲು ಅನುಸರಿಸಬೇಕಾದ ವಿಧಿವಿಧಾನಗಳನ್ನು ರಾಜ್ಯ ಸರ್ಕಾರ ಮಾದರಿ ಉಪ ವಿಧಿಗಳು ಅಂದರೆ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಟ್ಟಡಗಳ ನಿರ್ಮಾಣದ ಮೇಲೆ ಜಿಲ್ಲಾ ಪಂಚಾಯತ್‌ಗಳ, ತಾಲ್ಲೂಕು ಪಂಚಾಯತ್‌ಗಳ ಮತ್ತು ಗ್ರಾಮ ಪಂಚಾಯತ್‌ಗಳ ನಿಯಂತ್ರಣ) ಮಾದರಿ ಉಪವಿಧಿ 2015’ ಜಾರಿಗೊಳಿಸಿದ. ಗ್ರಾಮಠಾಣಾ ವ್ಯಾಪ್ತಿಯನ್ನು ಹೊರತುಪಡಿಸಿ ಹೊಸದಾಗಿ ಭೂ ಅಭಿವೃದ್ಧಿಗೊಳಿಸಿರುವ ಲೇ ಔಟ್‌ಗಳಲ್ಲಿ ಕಟ್ಟಡ ನಿರ್ಮಿಸಲು ಪರವಾನಿಗೆ ನೀಡುವ ಮುನ್ನ ಸದರಿ ಕಟ್ಟಡ ಕಟ್ಟುವ ನಿವೇಶನಗಳನ್ನು ಕ್ರಮಬದ್ಧವಾಗಿ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನ ಅಧಿನಿಯಮ, 1961 ರ ಉಪಬಂಧಗಳು ಹಾಗೂ ಅದರಡಿ ರಚಿಸಿರುವ ನಿಯಮಗಳ ಅನುಸಾರ ಅಭಿವೃದ್ಧಿಪಡಿಸಿರುವುದನ್ನು ಗ್ರಾಮ ಪಂಚಾಯತಿ ಖಾತರಿಪಡಿಸಿಕೊಳ್ಳಬೇಕಾಗಿರುತ್ತದೆ.
3. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುವ ಕಟ್ಟಡಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಅಂಶಗಳನ್ನು ಪಾಲಿಸಲು ಸೂಚಿಸಿದೆ.
1. ಗ್ರಾಮ ಪಂಚಾಯಿತಿ ಪರವಾನಿಗೆ ಪಡೆದು ಕಟ್ಟಡ ಯೋಜನೆ ಹಾಗೂ ಅನುಮೋದಿತ ನಕ್ಷೆ ಉಲ್ಲಂಘನೆಯಾಗದಂತೆ ನಿರ್ಮಿಸಿರುವ ಕಟ್ಟಡಗಳನ್ನು ಸ್ಥಳ ಪರಿಶೀಲಿಸಿ, ತಡ ಮಾಡದೆ ಪೂರ್ಣಗೊಂಡ ಪತ್ರ/ವಾಸಯೋಗ್ಯ ಪಮಾಣ ಪತ್ರವನ್ನು ನೀಡತಕ್ಕದ್ದು. ಗ್ರಾಮ ಪಂಚಾಯತಿ ಪರವಾನಿಗೆ ಪಡೆಯದ ಹಾಗೂ ಪರವಾನಿಗೆ ಪಡೆದಿದ್ದರೂ ಕಟ್ಟಡ ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸಿ, ನಿರ್ಮಾಣವಾಗುತ್ತಿರುವ ವಸತಿ, ವಾಣಿಜ್ಯ ಹಾಗೂ ಇತರ ಕಟ್ಟಡಗಳ ಕಾಮಗಾರಿಗಳು ಕಂಡು, ಬಂದರೆ, ಅಂತಹ ಕಟ್ಟಡ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸಲು ಗ್ರಾಮ ಪಂಚಾಯತಿಯು ಕ್ರಮ ಕೈಗೊಳ್ಳಬೇಕು. ಪರವಾನಿಗೆ ಪಡೆದು ನಿರ್ಮಿಸುತ್ತಿರುವ ಕಟ್ಟಡವು ಅನುಮೋದಿತ ನಕ್ಷೆಗಿಂತ ಭಿನ್ನವಾಗಿದ್ದರೆ ಅದನ್ನು ಸರಿಪಡಿಸಲು ನೋಟೀಸ್ ನೀಡಬೇಕು ಹಾಗೂ ಅಂತಹ ಸಲಹೆಯಂತ ಕಟ್ಟಡವನ್ನು ನಿರ್ಮಿಸುತ್ತಿರುವುದನ್ನು ಖಾತರಿಪಡಿಸಿಕೊಳ್ಳಬೇಕು.
2. ಅನಧಿಕೃತ ಕಟ್ಟಡಗಳನ್ನು ನೆಲಸಮಗೊಳಿಸಲು ಗ್ರಾಮ ಪಂಚಾಯತಿ ನಿಯಮಾನುಸಾರ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು. ಇಂತಹ ಪುಕ್ರಿಯೆಯಲ್ಲಿ ಸ್ಥಳೀಯ ಕಂದಾಯ ಇಲಾಖೆ, ಪೋಲೀಸರ ನೆರವನ್ನು ಪಡೆಯತಕ್ಕದ್ದು. ಇಂತಹ ಪ್ರಕ್ರಿಯೆಗಳಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸ್ಥಳೀಯ ಗ್ರಾಮ ಪಂಚಾಯತಿಗೆ ಎಲ್ಲಾ ರೀತಿಯ ಸಹಕಾರ ನೀಡುವುದು. ಕಡ್ಡಾಯವಾಗಿರುತ್ತದೆ. ಇಂತಹ ಪ್ರಕ್ರಿಯೆಗಳಲ್ಲಿ ಸಹಕರಿಸದಿದ್ದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು.
3. ಕಟ್ಟಡ ನಿರ್ಮಾಣದ ಪರವಾನಿಗೆ ನೀಡುವ ಸಂದರ್ಭದಲ್ಲಿ ಸಂಬಂಧಿಸಿದ ಪ್ರಾಧಿಕಾರಗಳಿಂದ ಕಟ್ಟಡ ಪೂರ್ಣಗೊಂಡ ಪತ್ರ/ವಾಸಯೋಗ್ಯ ಪ್ರಮಾಣ ಪತ್ರಗಳನ್ನು ಪಡೆದು ಕಟ್ಟಡದ ಸ್ವಾಧೀನವನ್ನು ಮಾಲೀಕರು/ಫಲಾನುಭವಿಗಳಿಗೆ ವಹಿಸಲಾಗುವ, ಪಡೆಯುವ ಅಥವಾ ಹಸ್ತಾಂತರಿಸಲಾಗುವುದೆಂದು ಲಿಖಿತ ಮುಚ್ಚಳಿಕೆಯನ್ನು
ಅರ್ಜಿದಾರರಿಂದ ಪಡೆಯತಕ್ಕದ್ದು.
4. ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಕಟ್ಟಡದ ಅನುಮೋದಿತ ನಕ್ಷೆಯನ್ನು ಕಟ್ಟಡ ನಿರ್ಮಾಣದ ಅಂತಿಮ ಹಂತದವರೆಗೆ ಪುದರ್ಶಿಸಬೇಕು.
5. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಂಬಂಧಿಸಿದ ಸ್ಥಳೀಯ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ನಿಯಮಿತವಾಗಿ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ ನಿಯಮ ಪಾಲನೆಯಾಗುತ್ತಿವೆಯೇ, ಉಲ್ಲಂಘನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಉಲ್ಲಂಘನೆ ಕಂಡು ಬಂದರೆ ಅದನ್ನು ಸರಿಪಡಿಸುವಂತೆ ಲಿಖಿತ ನೋಟೀಸನ್ನು ಜಾರಿಗೊಳಿಸಬೇಕು, ಲಿಖಿತ ನೋಟೀಸ್ ನಂತರವೂ ಕ್ರಮ ವಹಿಸದಿದ್ದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪುಕರಣಗಳಂತೆ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಕಟ್ಟಡಗಳ ನಿರ್ಮಾಣದ ಮೇಲೆ ಜಿಲ್ಲಾ ಪಂಚಾಯತ್‌ಗಳ, ತಾಲ್ಲೂಕು ಪಂಚಾಯತ್‌ಗಳ ಮತ್ತು ಗ್ರಾಮ ಪಂಚಾಯತ್‌ಗಳ ನಿಯಂತ್ರಣ) ಮಾದರಿ ಉಪವಿಧಿ 2015 ರಂತೆ ಕ್ರಮ ವಹಿಸುವುದು.
6. ಕಟ್ಟಡವು ನಿಯಮಾನುಸಾರ ಪೂರ್ಣಗೊಂಡಿರುವ ಬಗ್ಗೆ ಉಲ್ಲೇಖ (4) ರಲ್ಲಿ ವಿವರಿಸಿರುವಂತೆ ಸಂಬಂಧಪಟ್ಟ ಮಾಲೀಕರು ಗ್ರಾಮ ಪಂಚಾಯತಿಗೆ ಮನವಿ ಪತ್ರ ಸಲ್ಲಿಸಿದ ನಂತರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಂಬಂಧಿಸಿದ ಸ್ಥಳೀಯ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಗ್ರವಾಗಿ ಪರಿಶೀಲಿಸಿದ ನಂತರವೇ ವಾಸ ಯೋಗ್ಯ, ಪ್ರಮಾಣ ಪತ್ರಗಳನ್ನು ನಿಯಮಾನುಸಾರ ವಿತರಿಸಬೇಕು. 7. ಪೂರ್ಣಗೊಂಡ ಪ್ರಮಾಣ ಪತ್ರ ನೀಡಿದ ನಂತರವೂ ನಕ್ಷೆಯನ್ನು ಉಲ್ಲಂಘನೆ ಮಾಡಿ ನಿರ್ಮಿಸಿರುವುದು ಕಂಡು ಬಂದರೆ, ಅಂತಹ ಕಟ್ಟಡ ಮಾಲೀಕರ, ಸಂಬಂಧಪಟ್ಟ ಅಧಿಕಾರಿ ಮತ್ತು ಅಂತಹ ಕಟ್ಟಡಗಳಿಗೆ ‘ಪೂರ್ಣಗೊಂಡ ಪುಮಾಣ ಪತ್ರ * ನೀಡಿರುವ ವಾಸ್ತುಶಿಲ್ಪಿ/ಇಂಜಿನಿಯರ್ ಮೇಲ್ವಿಚಾರಕ (ಸಿವಿಲ್ ಡಿಪ್ಲೋಮೊ ಹೊಂದಿರುವವರು) ರ ವಿರುದ್ಧ ಕ್ರಮ ವಹಿಸತಕ್ಕದ್ದು, ಅನಧಿಕೃತ ಕಟ್ಟಡದ ಸಂಬಂಧ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ನಿಯಮಗಳನ್ವಯ ಕ್ರಮವಹಿಸತಕ್ಕದ್ದು.
8. ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳಲ್ಲಿ ವ್ಯಾಪಾರ, ವಾಣಿಜ್ಯ ವಹಿವಾಟು ನಡೆಸಲು ಅನುಮತಿ/ ಲೈಸೆನ್ಸ್ ನೀಡಬಾರದು.
9. ಕಟ್ಟಡ ನಿರ್ಮಾಣ ವಲಯ ಯೋಜನೆ (Zonal Plan) ಅನುಗುಣವಾಗಿರಬೇಕು. ಒಂದು ವೇಳೆ ಯೋಜನೆಯನ್ನು ಬದಲಾವಣೆ ಮಾಡಬೇಕಾದರೂ ನಿಯಮಬದ್ಧವಾಗಿ ಬದಲಾವಣೆ ಆಗಬೇಕಾಗಿರುತ್ತದೆ.
10. ಅನಧಿಕೃತ ಕಟ್ಟಡಗಳ ನಿರ್ಮಾಣ ತಿಳಿದಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳದ ಸಂಬಂಧಿ ಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದು.
11. ಬಿಲ್ಕರ್ ಅಥವಾ ಮಾಲೀಕರು ಕಟ್ಟಡ ಪೂರ್ಣಗೊಂಡ ಹಾಗೂ ವಾಸ ಯೋಗ್ಯ, ಪ್ರಮಾಣ ಪತ್ರಗಳನ್ನು (ಸಿ.ಸಿ ಮತ್ತು ಓ.ಸಿ) ನೀಡಲಿಲ್ಲವೆಂದು ಗ್ರಾಮ ಪಂಚಾಯಿತಿಯ ವಿರುದ್ಧ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಅರ್ಜಿ ಸಲ್ಲಿಸುವುದು, ಸದರಿ ಅರ್ಜಿಯನ್ನು 90 ದಿನಗಳೊಳಗೆ ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥಪಡಿಸಬೇಕು.
12. ಅನಧಿಕೃತ ಕಟ್ಟಡಗಳ ಸಂಬಂಧ ‘ನ್ಯಾಯಾಲಯಗಳು ನೀಡುವ ಎಲ್ಲಾ ಆದೇಶ, ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ (ಸಿವಿಲ್) ಸಂಖ್ಯೆ:295/2022 ರ ಪ್ರಕರಣದಲ್ಲಿ ದಿನಾಂಕ:13-11-2024 ರಂದು ನೀಡಿರುವ ಆದೇಶದಲ್ಲಿ ವಿವರಿಸಿರುವ ಅಂಶಗಳಂತೆ ಕ್ರಮ ವಹಿಸತಕ್ಕದ್ದು.
13. ಎಲ್ಲಾ ಅಗತ್ಯ ಸೇವಾ ಸಂಪರ್ಕಗಳಾದ ವಿದ್ಯುತ್, ನೀರು ಸರಬರಾಜು, ಒಳಚರಂಡಿ ಸಂಪರ್ಕ ಇತ್ಯಾದಿಗಳನ್ನು ಸೇವಾ ಪೂರೈಕೆದಾರ/ ಮಂಡಳಿಯು ಕಟ್ಟಡಗಳಿಗೆ ಪೂರ್ಣಗೊಂಡ / ವಾಸಯೋಗ್ಯ ಪ್ರಮಾಣ ಪತ್ರಗಳನ್ನು ಸಲ್ಲಿಸಿದ ನಂತರ ಮಾತ್ರ ನೀಡಬೇಕು.
14. ಬ್ಯಾಂಕುಗಳು / ಹಣಕಾಸು ಸಂಸ್ಥೆಗಳು ಯಾವುದೇ ಕಟ್ಟಡದ ವಿರುದ್ಧ ಸಾಲಗಳನ್ನು ಅಥವಾ ಯಾವುದೇ ರೀತಿಯ ಹಣಕಾಸಿನ ನೆರವನ್ನು ಮಂಜೂರು ಮಾಡುವ ಮುನ್ನ ಅಂತಹ ಕಟ್ಟಡಕ್ಕೆ ನೀಡಲಾದ ಕಟ್ಟಡ ಪೂರ್ಣಗೊಂಡ ಪ್ರಮಾಣ ಪತ್ರ ಹಾಗೂ ವಾಸಯೋಗ್ಯ ಪುಮಾಣ ಪತ್ರಗಳನ್ನು ಪರಿಶೀಲನೆಗೆ ಒಳಪಡಿಸುವುದು.
15. ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ಸಿಬ್ಬಂದಿಗಳನ್ನು ಅಂದರೆ, ವಾಟರ್ ಆಪರೇಟರ್/ಬಿಲ್ ಕಲೆಕ್ಟರ್ ಹಾಗೂ ಇತರೆ ಸಿಬ್ಬಂದಿಗಳನ್ನು ಗ್ರಾಮವಾರು ನಿಯೋಜಿಸಿ, ಅವರಿಂದ ನಿಯಮಿತವಾಗಿ ಲೈಸೆನ್ಸ್ ಇಲ್ಲದ ಯಾವುದೇ ಕಟ್ಟಡ ನಿರ್ಮಾಣವಾಗುತ್ತಿಲ್ಲವೆಂದು ದೃಢೀಕರಣವನ್ನು ಪಡೆಯತಕ್ಕದ್ದು.
16. ಸಿಬ್ಬಂದಿಗಳು ಲೈಸೆನ್ಸ್ ಇಲ್ಲದ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ವರದಿ ನೀಡಿದರೆ, ತಕ್ಷಣವೇ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶದ ಪ್ರಕಾರ ಕ್ರಮ ವಹಿಸತಕ್ಕದ್ದು.
ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿಗಳ ಅಧಿಕಾರಿಗಳು ಈ ಸಂಬಂಧವಾಗಿ ಮಾಸಿಕ ತಪಾಸಣೆ ನಡೆಸುವುದು ಹಾಗೂ ಅಕ್ರಮ ಕಟ್ಟಡಗಳ ಬಗ್ಗೆ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಪರಿಶೀಲಿಸಿ ಗ್ರಾಮ ಪಂಚಾಯತಿಗೆ ಸೂಕ್ತ ಆದೇಶ ನೀಡುವುದು.
ಮೇಲ್ಕಂಡಂತೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಹಾಗೂ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡಗಳನ್ನು ನಿರ್ಬಂಧಿಸಲು ಹಾಗೂ ಸಾರ್ವಜನಿಕ ಸ್ವತ್ತುಗಳಾದ ಸರ್ಕಾರ /ಸಾರ್ವಜನಿಕ ಸೃತ್ತಿನಲ್ಲಿ ಹಾಗೂ ಕೆರೆ, ಕುಂಟೆ, ಕಾಲುವೆ ಮತ್ತಿತರ ಸಾರ್ವಜನಿಕ ಹಿತಾಸಕ್ತಿಯುಳ್ಳ ಸೃತ್ತಿನಲ್ಲಿ ಕಟ್ಟಡಗಳು ನಿರ್ಮಾಣವಾಗಿದ್ದರೆ ಅವುಗಳನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಮಾರ್ಗಸೂಚಿಗಳನ್ವಯ ನೆಲ ಸಮಗೊಳಿಸಬೇಕೆಂದು ಈ ಮೂಲಕ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಸೂಚಿಸಲಾಗಿದೆ.
BREAKING: ‘ಆಶಾ ಕಾರ್ಯಕರ್ತೆ’ಯರಿಗೆ ಸಿಹಿಸುದ್ದಿ: ‘ಗೌರವಧನ 1000’ ಹೆಚ್ಚಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ