Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಪುರುಷರೇ ಎಚ್ಚರ : ಅತಿಯಾದ ಹಸ್ತಮೈಥುನದ ಅಭ್ಯಾಸ ನಿಮಗಿದ್ದರೆ ಈ ಅಪಾಯ ಗ್ಯಾರಂಟಿ !

05/03/2026 2:20 PM

ಯುಗಾದಿ,ರಂಜಾನ್ ಸಂಭ್ರಮದಲ್ಲಿರುವ ಜನಸಾಮಾನ್ಯರಿಗೆ ಬಿಗ್ ಶಾಕ್ : ದಿನಬಳಕೆ ವಸ್ತುಗಳ ಬೆಲೆ ದಿಢೀರ್ ಏರಿಕೆ!

05/03/2026 2:03 PM

ಟಿ20 ವಿಶ್ವಕಪ್ ವೇಳೆ ಪಾಕಿಸ್ತಾನ ಕ್ರಿಕೆಟಿಗನ ಅಸಭ್ಯ ವರ್ತನೆ: ಹೋಟೆಲ್ ಸಿಬ್ಬಂದಿಯೊಂದಿಗೆ ಕಿರಿಕ್, ಭಾರಿ ಮೊತ್ತದ ದಂಡ!

05/03/2026 1:54 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯುಗಾದಿ,ರಂಜಾನ್ ಸಂಭ್ರಮದಲ್ಲಿರುವ ಜನಸಾಮಾನ್ಯರಿಗೆ ಬಿಗ್ ಶಾಕ್ : ದಿನಬಳಕೆ ವಸ್ತುಗಳ ಬೆಲೆ ದಿಢೀರ್ ಏರಿಕೆ!
KARNATAKA

ಯುಗಾದಿ,ರಂಜಾನ್ ಸಂಭ್ರಮದಲ್ಲಿರುವ ಜನಸಾಮಾನ್ಯರಿಗೆ ಬಿಗ್ ಶಾಕ್ : ದಿನಬಳಕೆ ವಸ್ತುಗಳ ಬೆಲೆ ದಿಢೀರ್ ಏರಿಕೆ!

By kannadanewsnow5705/03/2026 2:03 PM

ಬೆಂಗಳೂರು: ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಜನತೆಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪಶ್ಚಿಮ ಏಷ್ಯಾದಲ್ಲಿ, ಅದರಲ್ಲೂ ವಿಶೇಷವಾಗಿ ಇಸ್ರೇಲ್ ಮತ್ತು ಇರಾನ್ ನಡುವೆ ಉಲ್ಬಣಿಸಿರುವ ಯುದ್ಧದ ವಾತಾವರಣವು ಭಾರತದ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರಲಾರಂಭಿಸಿದ್ದು, ದಿನನಿತ್ಯದ ಅಗತ್ಯ ವಸ್ತುಗಳ ದರ ಗಗನಮುಖಿಯಾಗುತ್ತಿದೆ. ಇದರಿಂದಾಗಿ ಜನಸಾಮಾನ್ಯರ ಮಾಸಿಕ ಬಜೆಟ್ ಸಂಪೂರ್ಣ ಏರುಪೇರಾಗುವ ಆತಂಕ ಎದುರಾಗಿದೆ.

ಮಾರುಕಟ್ಟೆಯಲ್ಲಿ ಯಾವ್ಯಾವ ವಸ್ತುಗಳ ಬೆಲೆ ಏರಿಕೆ?
ಅಡುಗೆ ಎಣ್ಣೆ ದರದಲ್ಲಿ ಹೆಚ್ಚಳ: ಇರಾನ್-ಇಸ್ರೇಲ್ ನಡುವಿನ ಸಂಘರ್ಷದ ಭೀತಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಖಾದ್ಯ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರ ನೇರ ಪರಿಣಾಮವಾಗಿ ರಾಜ್ಯದಲ್ಲಿ ಅಡುಗೆ ಎಣ್ಣೆ ದರ ಲೀಟರ್ಗೆ 5 ರೂ. ಗಳಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ.

ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಯುದ್ಧದ ಈ ಪ್ರಭಾವವು ಗ್ಯಾಸ್, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣವಾಗಲಿದ್ದು, ಸಾರ್ವಜನಿಕರ ಜೇಬಿಗೆ ಕತ್ತರಿ ಬೀಳಲಿದೆ.

ದುಬಾರಿಯಾಗಲಿವೆ ಡ್ರೈ ಫ್ರೂಟ್ಸ್: ಭಾರತಕ್ಕೆ ಆಮದಾಗುವ ಬಹುಪಾಲು ಒಣ ಹಣ್ಣುಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ವಿಶೇಷವಾಗಿ ಇರಾನ್ನಿಂದ ಬರುತ್ತಿದ್ದ ಪಿಸ್ತಾ, ಬಾದಾಮಿ ಮತ್ತು ಅಂಜೂರದ ಬೆಲೆಗಳು ಮುಂದಿನ ದಿನಗಳಲ್ಲಿ ದಿಢೀರ್ ಏರಿಕೆಯಾಗಲಿವೆ.

ತರಕಾರಿ ಹಾಗೂ ಬೇಳೆಕಾಳುಗಳ ಮೇಲೂ ಪ್ರಭಾವ: ಇಂಧನ ಬೆಲೆ ಏರಿಕೆಯಾದರೆ ಸಾರಿಗೆ ಮತ್ತು ಸಾಗಾಟ ವೆಚ್ಚ ಕೂಡ ಹೆಚ್ಚಾಗುತ್ತದೆ. ಹಾಗಾಗಿ ಮುಂಬರುವ ದಿನಗಳಲ್ಲಿ ತರಕಾರಿ, ಬೇಳೆಕಾಳುಗಳು ಮತ್ತು ಇತರ ದಿನಸಿ ವಸ್ತುಗಳ ಬೆಲೆಯೂ ಏರಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

ಮೊಟ್ಟೆ ಪ್ರಿಯರಿಗೆ ಸಿಹಿಸುದ್ದಿ, ಆದರೆ ಉದ್ಯಮಕ್ಕೆ ಭಾರಿ ಸಂಕಷ್ಟ!
ಒಂದೆಡೆ ಬೆಲೆ ಏರಿಕೆಯ ಬಿಸಿಯಿದ್ದರೆ, ಮತ್ತೊಂದೆಡೆ ಮೊಟ್ಟೆಯ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ಆದರೆ ಇದು ಕೋಳಿ ಉದ್ಯಮಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಯುದ್ಧದ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳ ವಿಮಾನ ನಿಲ್ದಾಣಗಳು ಮತ್ತು ಹಡಗು ಮಾರ್ಗಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.

ದುಬೈ, ಒಮಾನ್ ಮತ್ತು ಕತಾರ್ಗೆ ಪ್ರತಿದಿನ ರಫ್ತಾಗುತ್ತಿದ್ದ ಕೋಟ್ಯಂತರ ಮೊಟ್ಟೆಗಳ ಸಾಗಾಟ ಇದೀಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ವಿದೇಶಕ್ಕೆ ಹೋಗಬೇಕಿದ್ದ ಮೊಟ್ಟೆಗಳು ಸ್ಥಳೀಯ ಮಾರುಕಟ್ಟೆಯಲ್ಲೇ ಉಳಿಯುತ್ತಿರುವುದರಿಂದ, ಪೂರೈಕೆ ಹೆಚ್ಚಾಗಿ ಮೊಟ್ಟೆಯ ಸಗಟು ದರದಲ್ಲಿ ಇಳಿಕೆಯಾಗಲಿದೆ.

ಈ ಬೆಳವಣಿಗೆಯಿಂದಾಗಿ ಭಾರತದ ಪ್ರಮುಖ ಮೊಟ್ಟೆ ಉತ್ಪಾದನಾ ಕೇಂದ್ರವಾದ ತಮಿಳುನಾಡಿನ ನಾಮಕ್ಕಲ್ ಮತ್ತು ಕರ್ನಾಟಕದ ಮೊಟ್ಟೆ ಉದ್ಯಮಕ್ಕೆ ಭಾರಿ ನಷ್ಟವುಂಟಾಗುತ್ತಿದೆ.

ಒಟ್ಟಾರೆಯಾಗಿ, ಜಾಗತಿಕ ಮಟ್ಟದ ಈ ಯುದ್ಧದ ಕಾರ್ಮೋಡ ಹಬ್ಬದ ಸಂದರ್ಭದಲ್ಲಿ ಜನಸಾಮಾನ್ಯರ ಆರ್ಥಿಕತೆಯ ಮೇಲೆ ಕರಿನೆರಳು ಬೀರಿದೆ.

Big shock for the common people celebrating Ugadi and Ramzan: Sudden increase in prices of daily necessities including cooking oil!
Share. Facebook Twitter LinkedIn WhatsApp Email

Related Posts

ALERT : ಪುರುಷರೇ ಎಚ್ಚರ : ಅತಿಯಾದ ಹಸ್ತಮೈಥುನದ ಅಭ್ಯಾಸ ನಿಮಗಿದ್ದರೆ ಈ ಅಪಾಯ ಗ್ಯಾರಂಟಿ !

05/03/2026 2:20 PM2 Mins Read

`SSLC’ ಪಾಸಾಗಿ ಮನೇಲಿದ್ದೀರಾ? `ಪೋಸ್ಟ್ ಆಫೀಸ್ ಫ್ರಾಂಚೈಸಿ’ ಓಪನ್ ಮಾಡಿ ತಿಂಗಳಿಗೆ ₹80,000 ಆದಾಯ ಗಳಿಸಿ !

05/03/2026 1:47 PM3 Mins Read

BREAKING : ಹೋಳಿ ಹುಣ್ಣಿಮೆಯಂದು ಬುರ್ಖಾ ಧರಿಸಿ ಅಣುಕು ಶವಯಾತ್ರೆ : ಐವರು ಯುವಕರ ವಿರುದ್ಧ ‘FIR’ ದಾಖಲು!

05/03/2026 1:40 PM1 Min Read
Recent News

ALERT : ಪುರುಷರೇ ಎಚ್ಚರ : ಅತಿಯಾದ ಹಸ್ತಮೈಥುನದ ಅಭ್ಯಾಸ ನಿಮಗಿದ್ದರೆ ಈ ಅಪಾಯ ಗ್ಯಾರಂಟಿ !

05/03/2026 2:20 PM

ಯುಗಾದಿ,ರಂಜಾನ್ ಸಂಭ್ರಮದಲ್ಲಿರುವ ಜನಸಾಮಾನ್ಯರಿಗೆ ಬಿಗ್ ಶಾಕ್ : ದಿನಬಳಕೆ ವಸ್ತುಗಳ ಬೆಲೆ ದಿಢೀರ್ ಏರಿಕೆ!

05/03/2026 2:03 PM

ಟಿ20 ವಿಶ್ವಕಪ್ ವೇಳೆ ಪಾಕಿಸ್ತಾನ ಕ್ರಿಕೆಟಿಗನ ಅಸಭ್ಯ ವರ್ತನೆ: ಹೋಟೆಲ್ ಸಿಬ್ಬಂದಿಯೊಂದಿಗೆ ಕಿರಿಕ್, ಭಾರಿ ಮೊತ್ತದ ದಂಡ!

05/03/2026 1:54 PM

`SSLC’ ಪಾಸಾಗಿ ಮನೇಲಿದ್ದೀರಾ? `ಪೋಸ್ಟ್ ಆಫೀಸ್ ಫ್ರಾಂಚೈಸಿ’ ಓಪನ್ ಮಾಡಿ ತಿಂಗಳಿಗೆ ₹80,000 ಆದಾಯ ಗಳಿಸಿ !

05/03/2026 1:47 PM
State News
KARNATAKA

ALERT : ಪುರುಷರೇ ಎಚ್ಚರ : ಅತಿಯಾದ ಹಸ್ತಮೈಥುನದ ಅಭ್ಯಾಸ ನಿಮಗಿದ್ದರೆ ಈ ಅಪಾಯ ಗ್ಯಾರಂಟಿ !

By kannadanewsnow5705/03/2026 2:20 PM KARNATAKA 2 Mins Read

ಹಸ್ತಮೈಥುನವನ್ನು ಸಾಮಾನ್ಯವಾಗಿ ಮಾನವ ಲೈಂಗಿಕತೆಯ ನೈಸರ್ಗಿಕ ಹಾಗೂ ಆರೋಗ್ಯಕರ ಅಂಶವೆಂದು ಪರಿಗಣಿಸಲಾಗುತ್ತದೆ. ಅನೇಕರಿಗೆ ಇದು ಒತ್ತಡ ನಿವಾರಣೆಯ, ಖಾಸಗಿ ಮತ್ತು…

ಯುಗಾದಿ,ರಂಜಾನ್ ಸಂಭ್ರಮದಲ್ಲಿರುವ ಜನಸಾಮಾನ್ಯರಿಗೆ ಬಿಗ್ ಶಾಕ್ : ದಿನಬಳಕೆ ವಸ್ತುಗಳ ಬೆಲೆ ದಿಢೀರ್ ಏರಿಕೆ!

05/03/2026 2:03 PM

`SSLC’ ಪಾಸಾಗಿ ಮನೇಲಿದ್ದೀರಾ? `ಪೋಸ್ಟ್ ಆಫೀಸ್ ಫ್ರಾಂಚೈಸಿ’ ಓಪನ್ ಮಾಡಿ ತಿಂಗಳಿಗೆ ₹80,000 ಆದಾಯ ಗಳಿಸಿ !

05/03/2026 1:47 PM

BREAKING : ಹೋಳಿ ಹುಣ್ಣಿಮೆಯಂದು ಬುರ್ಖಾ ಧರಿಸಿ ಅಣುಕು ಶವಯಾತ್ರೆ : ಐವರು ಯುವಕರ ವಿರುದ್ಧ ‘FIR’ ದಾಖಲು!

05/03/2026 1:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.