ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆಯಲ್ಲಿ ( Karnataka Health Department ) ಎನ್ ಹೆಚ್ ಎಂ ಯೋಜನೆಯ ( NHM Scheme ) ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸಾವಿರಾರೂ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಅತೃಪ್ತಿಕರ ಕಾರ್ಯಕ್ಷಮತೆ ಹೊಂದಿದವರಿಗೆ ಮೂರು ತಿಂಗಳವರೆಗೆ ಮಾತ್ರವೇ ಗುತ್ತಿಗೆ ನವೀಕರಣ ಮಾಡಲಾಗುತ್ತಿದೆ. ಆ ಬಳಿಕ ಗೇಟ್ ಪಾಸ್ ನೀಡಲಾಗುವುದಾಗಿ ಅಭಿಯಾನ ನಿರ್ದೇಶಕರು ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ರಾಷ್ಟ್ರೀಯ ಆರೋಗ್ಯ ಅಭಿಯಾನದ ( National Health Mission – NHM ) ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ, ಕರ್ನಾಟಕದ ಅಡಿಯಲ್ಲಿ ಸುಮಾರು 29,000 ಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಗುತ್ತಿಗೆ ನೌಕರರ ಸೇವೆಯನ್ನು ಪ್ರತಿ ವರ್ಷ ಭಾರತ ಸರ್ಕಾರವು 2019 ರಲ್ಲಿ ರೂಪಿಸಿದ ಕನಿಷ್ಠ ಕಾರ್ಯಕ್ಷಮತೆ ಮಾನದಂಡದ ಆಧಾರದ ಮೇಲೆ ನವೀಕರಿಸಲಾಗುತ್ತದೆ – ಇದು ಮೌಲ್ಯಮಾಪನದ ಒ೦ದು ನಿಯಮಿತ ಪ್ರಕ್ರಿಯೆಯಾಗಿದೆ ಎಂದಿದ್ದಾರೆ.
ರಾಜ್ಯವು ಕಾರ್ಯಕ್ರಮದ ಪ್ರಸ್ತುತ ಅಗತ್ಯತೆಗಳ ಆಧಾರದ ಮೇಲೆ ಕಾರ್ಯಕ್ಷಮತೆಯ ಮಾನದಂಡವನ್ನು ಪರಿಷ್ಕರಿಸಿದೆ. ಈ ವರ್ಷ, ಕಾರ್ಯಕ್ಷಮತೆ ಮೌಲ್ಯಮಾಪನ ಪ್ರಕ್ರಿಯೆಯು ಸಮಗ್ರ ಪರಿಶೀಲನೆಗೆ ಒಳಪಟ್ಟಿತ್ತು ಮತ್ತು ಪರಿಷ್ಕೃತ ಮಾನದಂಡವನ್ನು ಮೌಲ್ಯಮಾಪನಕ್ಕಾಗಿ ಬಳಸಲಾಯಿತು. ಇದರ ಪರಿಣಾಮವಾಗಿ, ನವೀಕರಿಸಿದ ಮೌಲ್ಯಮಾಪನ ಚೌಕಟ್ಟಿನ ಸಮಗ್ರ ಅನುಷ್ಠಾನದಿಂದಾಗಿ ಗುತ್ತಿಗೆ ನವೀಕರಣ ಚಕ್ರವು ನಿರೀಕ್ಷಿತ ಸಮಯಕ್ಕಿಂತ ಹೆಚ್ಚಾಯಿತು ಎಂದು ಹೇಳಿದ್ದಾರೆ.
ಈ ಮೌಲ್ಯಮಾಪನಗಳ ಫಲಿತಾಂಶಗಳ ಆಧಾರದ ಮೇಲೆ:
ತೃಪ್ತಿಕರ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ NHM ನೌಕರರಿಗೆ ಮಾರ್ಚ್ 31, 2026 ರವರೆಗೆ ಸೇವಾ ಗುತ್ತಿಗೆಯನ್ನು ನವೀಕರಿಸಲಾಗುತ್ತದೆ.
ಅತೃಪ್ತಿಕರ ಕಾರ್ಯಕ್ಷಮತೆಯನ್ನು ಹೊಂದಿರುವ ನೌಕರರಿಗೆ ಮೂರು ತಿಂಗಳ ಅವಧಿಗೆ (ಅಕ್ಟೋಬರ್ 31, 2025 ರವರೆಗೆ ಮಾತ್ರ ಸೇವಾ ಗುತ್ತಿಗೆಯನ್ನು ನವೀಕರಿಸಲಾಗುತ್ತದೆ ಎಂದು ಎನ್ ಹೆಚ್ ಎಂ ಗುತ್ತಿಗೆ ನೌಕರರಿಗೆ ಶಾಕ್ ನೀಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BIG NEWS: ದಲಿತರಿಗೆ ಮೀಸಲಿಟ್ಟ ಅನುದಾನ ಡೈವೋರ್ಟ್ ಆಗಿದ್ದರೆ ಬಿಜೆಪಿ ದಾಖಲೆ ನೀಡಲಿ: ಸಚಿವ ಪ್ರಿಯಾಂಕ್ ಖರ್ಗೆ