ನವದೆಹಲಿ : ಚಿನ್ನದಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ಯಾಕಂದ್ರೆ, ಇದು ನಿಮಗೆ ಅಪಾಯ-ಮುಕ್ತ ಆದಾಯವನ್ನ ನೀಡುತ್ತದೆ. ಚಿನ್ನದ ಮೇಲೆ ಹೂಡಿಕೆ ಮಾಡುವುದು ಪ್ರಯೋಜನಕಾರಿ. ಜನವರಿ 29ರಂದು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. 100 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹500 ರೂಪಾಯಿ ಏರಿಕೆಯಾಗಿದೆ.
ಜನವರಿ 29ರಂದು 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 80, 819 ರೂಪಾಯಿ ಆಗಿದೆ. ಜನವರಿ 28, 2024ಕ್ಕೆ ಹೋಲಿಸಿದರೆ, ಇಂದು ಚಿನ್ನದ ಬೆಲೆ 506 ರೂಪಾಯಿಗಳಷ್ಟು ಹೆಚ್ಚಾಗಿದೆ.
ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡಿದ್ದು, ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 90 ಸಾವಿರದ 428 ರೂಪಾಯಿ. ರಾಷ್ಟ್ರಮಟ್ಟದಲ್ಲಿ ಜನವರಿ 28ರಿಂದ 999 ಶುದ್ಧ ಬೆಳ್ಳಿಯ ಬೆಲೆ 678 ರೂಪಾಯಿ ಏರಿಕೆಯಾಗಿದೆ.
ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಪ್ರಕಾರ, ಜನವರಿ 28ರ ಸಂಜೆ 999 ಶುದ್ಧತೆಯ 24 ಕ್ಯಾರೆಟ್ ಚಿನ್ನದ ಬೆಲೆ 80313 ರೂಪಾಯಿ. ಜನವರಿ 29ರಂದು 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 80,800 ರೂಪಾಯಿಗೆ ಏರಿಕೆಯಾಗಿದೆ.
ಜನವರಿ 28 ರಂದು ಸಂಜೆ 999 ಶುದ್ಧತೆಯ ಬೆಳ್ಳಿಯ ಬೆಲೆ 89750 ರೂ. ಜನವರಿ 29 ರಂದು 999 ಶುದ್ಧತೆಯ ಬೆಳ್ಳಿಯ ಬೆಲೆ 90428 ರೂ.ಗೆ ಏರಿದೆ.
BREAKING : ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತದಲ್ಲಿ ಘೋರ ದುರಂತ : ಬೆಳಗಾವಿಯ ತಾಯಿ ಮಗಳ ದುರಂತ ಸಾವು!
BREAKING : ರೈತರಿಗೆ ಕೇಂದ್ರ ಸರ್ಕಾರದ ಗಿಫ್ಟ್ ; ‘ಎಥೆನಾಲ್’ ಬೆಲೆ ಹೆಚ್ಚಳ, ‘ರಾಷ್ಟ್ರೀಯ ಮಿನರಲ್ ಮಿಷನ್’ ಅನುಮೋದನೆ
BREAKING : ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತದಲ್ಲಿ ಘೋರ ದುರಂತ : ಬೆಳಗಾವಿಯ ತಾಯಿ ಮಗಳ ದುರಂತ ಸಾವು!