ನವದೆಹಲಿ: ದೆಹಲಿಯಲ್ಲಿ ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದ್ದು, 10 ಗ್ರಾಂಗೆ 1.38 ಲಕ್ಷ ರೂ. ಗೆ ತಲುಪಿದೆ. ಇದು ಚಿನ್ನದ ಸಾರ್ವಕಾಲಿಕ ಗರಿಷ್ಠಮಟ್ಟಕ್ಕೆ ಏರಿಕೆಯಾಗಿದೆ.
ಜಾಗತಿಕ ಬಿಕ್ಕಟ್ಟಿನ ನಡುವೆಯೇ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವ ಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಸೋಮವಾರ, ಪ್ರತಿ 10 ಗ್ರಾಂ ಚಿನ್ನದ ಬೆಲೆ 1.50 ಲಕ್ಷ ರು.ನತ್ತ ದಾಪುಗಾಲು ಹಾಕಿದ್ದು, 1.38 ಲಕ್ಷ ರು.ಗೆ ತಲುಪಿದ್ದರೆ, ಬೆಳ್ಳಿ ಬೆಲೆ ಪ್ರತಿ ಕೆಜಿಗೆ 2.21 ಲಕ್ಷರು.ತಲುಪಿದೆ.
ದೆಹಲಿ ಮಾರುಕಟ್ಟೆಯಲ್ಲಿ ಸೋಮವಾರ 10 ಗ್ರಾಂ. ಚಿನ್ನದ ದರ 1,685 ರು. ಏರಿಕೆ ಯಾಗಿ 1,38,200 ರು. ತಲುಪಿದೆ. ಬೆಳ್ಳಿಬೆಲೆ ಪ್ರತಿ ಕೆ.ಜಿ.ಗೆ 10,400 ರೂ.ಏರಿಕೆಯಾಗಿ 2,14,500 ರೂ. ಆಗಿದೆ. ಇತ್ತ ಬೆಂಗಳೂರಿನಲ್ಲಿ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 1,27,720 ರೂ.ಗೆ ಏರಿದ್ದರೆ, ಬೆಳ್ಳಿ ಪ್ರತಿ ಕೇ.ಜಿ.ಗೆ 2,21,800 ರೂ ಆಗಿದೆ.
ಪ್ರಸ್ತುತ ಕ್ಯಾಲೆಂಡರ್ ವರ್ಷದಲ್ಲಿ, ಚಿನ್ನದ ಬೆಲೆಗಳು ಡಿಸೆಂಬರ್ 31, 2024 ರಂದು 10 ಗ್ರಾಂಗೆ 78,950 ರೂ.ಗಳಿಂದ 58,650 ರೂ.ಗಳು ಅಥವಾ 74.3 ಪ್ರತಿಶತದಷ್ಟು ಏರಿಕೆಯಾಗಿವೆ.








