ನವದೆಹಲಿ : ಆಭರಣ ಪ್ರಿಯರಿಗೆ ಬಿಗ್ ಶಾಕ್, ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆ 700 ರೂ. ಹೆಚ್ಚಳವಾಗಿ ದಾಖಲೆಯ 91,950 ರೂ.ಗೆ ತಲುಪಿದೆ.
ಹೌದು, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಬುಧವಾರ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲುಪಿವೆ. 10 ಗ್ರಾಂ ಚಿನ್ನದ ಬೆಲೆ 700 ರು. ಹೆಚ್ಚಳವಾಗಿ ದಾಖಲೆಯ 91,950 ರು.ಗೆ ತಲುಪಿದೆ. ಮದುವೆ ಋತು ಸಮೀಪಿಸುತ್ತಿರುವುದರಿಂದ ಗ್ರಾಹಕರು ಆಭರಣ ಖರೀದಿಗೆ ಮುಗಿ ಬೀಳುತ್ತಿರುವುದು ದರ ಏರಿಕೆಗೆ ಕಾರಣ ಎಂದು ಅಖಿಲ ಭಾರತೀಯ ಸರಫಾ ಅಸೋಸಿಯೇಷನ್ ಹೇಳಿದೆ.
ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಕಳವಳದಿಂದಾಗಿ ಜನರು ಚಿನ್ನದ ಮೊರೆ ಹೋಗುತ್ತಿರುವುದು ದರ ಏರಿಕೆಗೆ ಕಾರಣ. ಇನ್ನು ಬೆಳ್ಳಿ ದರದಲ್ಲಿಯೂ ಹೆಚ್ಚಳವಾಗಿದ್ದು, 1 ಸಾವಿರ ರು ಏರಿಕೆಯೊಂದಿಗೆ ಕೆಜಿಗೆ ದಾಖಲೆಯ 1,03,500 ರೂ.ಗೆ ತಲುಪಿದೆ.