ಬೆಂಗಳೂರು : ಹೋಟೆಲ್ ಗ್ರಾಹಕರಿಗೆ ಬಿಗ್ ಶಾಕ್, ಹಾಲಿನ ದರ ಏರಿಕೆಯ ಬೆನ್ನಲ್ಲೇ ಇದೀಗ ಹೋಟೆಲ್ ಗಳಲ್ಲಿ ಕಾಫಿ, ಟೀ, ತಿಂಡಿಗಳ ಬೆಲೆಯಲ್ಲಿ 3-5 ರೂ.ವರೆಗೆ ಏರಿಕೆಯಾಗಿದೆ.
ಕಳೆದ ಎರಡು ತಿಂಗಳಲ್ಲಿ ಕಾಫಿ ಪುಡಿ ಬೆಲೆ ಕೆಜಿಗೆ 150 ರಿಂದ 200ರೂ. ಹೆಚ್ಚಾಗಿದೆ. ಇದೇ ವಾರ ಸರ್ಕಾರ ಸರ್ಕಾರ ಒಂದು ಲೀಟರ್‌ಹಾಲಿಗೆ 4 ಏರಿಕೆ ಮಾಡಿದೆ. ಇದರ ಜೊತೆಗೆ ವಿದ್ಯುತ್ ಬಿಲ್ ಕೂಡ ಹೆಚ್ಚಾಗುತ್ತಿದೆ. ಪರಿಣಾಮ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳು ಸೇರಿದಂತೆ ದರ್ಶಿನಿ, ಕ್ಯಾಂಟಿನ್, ಕ್ಯಾಂಡಿಮೆಂಟ್ಸ್‌ಗಳಲ್ಲಿ ಚಹಾ- ಕಾಫಿ ದರ ಏರಿಕೆಯಾಗಿದೆ.
ಹೋಟೆಲ್‌ಗಳಲ್ಲಿ 15 ಇದ್ದ ಕಾಫಿ-ಟಿ ಬೆಲೆ 18 ರಿಂದ 20 ರೂ.ವರೆಗೆ ಆಗಿದೆ. ಹಲವು ಹೊಟೆಲ್ ಗಳಲ್ಲಿ ಮಾಲೀಕರು ಈ ಕುರಿತ ಫಲಕ ಅಳವಡಿಸಿ ದರ ಹೆಚ್ಚಳಕ್ಕೆ ಗ್ರಾಹಕರು ಸಹಕರಿಸುವಂತೆ ಕೋರಿವೆ.